ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿದ್ಯಾರ್ಥಿಗಳಲ್ಲಿ ಧನಾತ್ಮಕ ಚಿಂತನೆ ಅವಶ್ಯ’

ರಾಷ್ಟ್ರಮಟ್ಟದಲ್ಲಿ 106ನೇ ಸ್ಥಾನ ಡಾ.ಬಸವರಾಜೇಶ್ವರಿಗೆ ಸನ್ಮಾನ
Last Updated 19 ಫೆಬ್ರುವರಿ 2020, 11:51 IST
ಅಕ್ಷರ ಗಾತ್ರ

ಕಮಲನಗರ: ಸತತ ಅಧ್ಯಯನದಿಂದ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು.

ಡಾ. ಚನ್ನಬಸವ ಪಟ್ಟದ್ದೇವರು ಪ್ರೌಢ ಶಾಲೆಯಲ್ಲಿ ಯುಪಿಎಸ್‍ಸಿ ರಾಷ್ಟ್ರ ಮಟ್ಟದ ಪರೀ ಕ್ಷೆಯಲ್ಲಿ 106ನೇ ರ್‍ಯಾಂಕ್‌ ಪಡೆದ ಸಾಧಕಿ ಡಾ.ಬಸವರಾಜೇಶ್ವರಿ ಶಿವಣಕರ ಅವರಿಗೆ ಸನ್ಮಾನ ಹಾಗೂ 7 ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದ ಮಕ್ಕಳು ಇಂದಿಗೂ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಿಸ್ವಾರ್ಥವಾಗಿ ಶೈಕ್ಷಣಿಕ ಪ್ರಗತಿ ಸಾಧಿಸುತ್ತಿರುವ ಹಿರೇಮಠ ಸಂಸ್ಥಾನ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.

ಡಾ.ಬಸವರಾಜೇಶ್ವರಿ ಶಿವಣಕರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಭಾಷಾ ಮಾಧ್ಯಮ ಮುಖ್ಯವಲ್ಲ. ಗಳಿಸುವ ಅಂಕಗಳು ಬಹುಮುಖ್ಯವಾಗಿದೆ. ವಿದ್ಯಾರ್ಥಿಗಳು ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದರು.

ಸೀನಿಯರ್ ಡಿಒಎಂ (ಭಾರತೀಯ ರೈಲ್ವೆ ಭೂಸಾವಳ) ಡಾ.ಸ್ವಪ್ನೀಲ್ ನೀಲಾ ಮಾತನಾಡಿ, ವಿದ್ಯಾರ್ಥಿ ದಿಸೆಯಿಂದಲೇ ಮಕ್ಕಳು ಕೊಟ್ಟ ಮಾತಿಗೂ ನಡತೆಗೂ ಸಾಮರಸ್ಯ ಇರಿಸಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು. ಧನಾತ್ಮಕ ಚಿಂತನೆ ರೂಢಿಸಿಕೊಳ್ಳಿ ಎಂದರು.

ಪ್ರಶಾಂತ ಮಠಪತಿ, ಚನ್ನಬಸವ ಘಾಳೆ, ಶಿವಾಜಿ ಆರ್.ಎಚ್, ಶಿಕ್ಷಕ ಸಿಎಂ ಗಳಗೆ ಮಾತನಾಡಿದರು.

ಭಾಲ್ಕಿ ಹಿರೇಮಠ ಸಂಸ್ಥಾನ ಪೀಠಾಧಿಪತಿ ಗುರುಬಸವ ಪಟ್ಟದ್ಧೇವರು, ಸಂಗಮ ಮಹಾದೇವಮ್ಮ ತಾಯಿ, ಶರಣಮ್ಮ ತಾಯಿ, ಭಾಲ್ಕಿ ರೇಖಾ ಮಹಾಜನ, ಪ್ರಾಚಾರ್ಯ ಎಸ್.ಎನ್.ಶಿವಣಕರ್, ಉಮಾ ಶಿವಣಕರ್, ಚನ್ನಬಸವ ಟೊಣ್ಣೆ, ಮಲ್ಲಮ್ಮ ಪಾಟೀಲ, ಎಸ್.ಎಸ್.ಮೈನಾಳೆ, ಬಸವರಾಜ ಶಿವಣಕರ್, ಶಿವರಾಜ ಪಾಟೀಲ, ವೈಜನಾಥ ಭವರಾ, ಎಸ್.ಎಸ್.ಸೂರ್ಯವಂಶಿ, ಮಾರುತಿ ಪಾಟೀಲ್, ಆರ್.ಡಿ. ಗಣಪತಿ, ಡಾ. ರಮೇಶಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT