ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜನವಾಡ: ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿ ಆತ್ಮಹತ್ಯೆ

Published : 11 ಸೆಪ್ಟೆಂಬರ್ 2024, 15:55 IST
Last Updated : 11 ಸೆಪ್ಟೆಂಬರ್ 2024, 15:55 IST
ಫಾಲೋ ಮಾಡಿ
Comments

ಚಿಟ್ಟಾ(ಜನವಾಡ): ಜೀವನದಲ್ಲಿ ಜಿಗುಪ್ಸೆಗೂಂಡು ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಯೊಬ್ಬರು ಬೀದರ್ ತಾಲ್ಲೂಕಿನ ಚಿಟ್ಟಾ ಅರಣ್ಯ ಪ್ರದೇಶದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದ ಬೀದರ್‌ನ ರಾವ್ ತಾಲೀಂನ ಡಾ. ಮಹಮ್ಮದ್ ಸೊಹೆಲ್ ಅಹಮ್ಮದ್ ಮಹಮ್ಮದ್ ಯುಸೂಫ್ (29) ಆತ್ಮಹತ್ಯೆಗೆ ಶರಣಾದವರು.

ಸೊಹೆಲ್ ಅಹಮ್ಮದ್ ಹಳ್ಳಿಖೇಡ(ಬಿ) ಪಟ್ಟಣದಲ್ಲಿ ಕ್ಲಿನಿಕ್ ಶುರು ಮಾಡಿದ್ದರು. ಆದರೆ, ಕ್ಲಿನಿಕ್ ಚೆನ್ನಾಗಿ ನಡೆದಿರಲಿಲ್ಲ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ವಿದ್ಯಾರ್ಥಿ ತಂದೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಸೊಹೆಲ್ ಅಹಮ್ಮದ್ ಸೆ.4ರಂದು ಕಾಣೆಯಾಗಿದ್ದಾರೆ ಎಂದು ಅವರ ತಂದೆ ಮಹಮ್ಮದ್ ಯುಸೂಫ್ ಸೆ.7ರಂದು ಬೀದರ್ ನಗರದ ಚೌಬಾರಾ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಮಂಗಳವಾರ (ಸೆ.10) ಚಿಟ್ಟಾ ಅರಣ್ಯ ಪ್ರದೇಶದಲ್ಲಿ ಅವರ ಶವ ಪತ್ತೆಯಾಗಿದೆ. ಸ್ಥಳದಲ್ಲಿ ಅವರ ಬೈಕ್ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಬೀದರ್‌ನ ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT