ಬುಧವಾರ, ಏಪ್ರಿಲ್ 1, 2020
19 °C
ಬೆಂಗಳೂರಿನ ಬ್ರಹ್ಮಕುಮಾರಿ ರಾಜಯೋಗ ಕೇಂದ್ರದ ಮಂಜುನಾಥ ಅಭಿಮತ

ಸಂತಸ ಹಂಚಿಕೆಯಿಂದ ಆರೋಗ್ಯ ವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್:‘ ಸಂತಸವನ್ನು ಇತರರೊಂದಿಗೆ ಹಂಚಿಕೊಳ್ಳುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ’ ಎಂದು ಬೆಂಗಳೂರಿನ ಬ್ರಹ್ಮಕುಮಾರಿ ರಾಜಯೋಗ ಕೇಂದ್ರದ ಬಿ.ಕೆ.ಮಂಜುನಾಥ ನುಡಿದರು.

ಇಲ್ಲಿಯ ಬಿವಿಬಿ ಕಾಲೇಜು ಮುಂಭಾಗದ ಆವರಣದಲ್ಲಿ ಬ್ರಹ್ಮಕುಮಾರಿ ರಾಜಯೋಗ ಕೇಂದ್ರದಿಂದ ಶಿವರಾತ್ರಿ ಪ್ರಯುಕ್ತ ಆಯೋಜಿಸಿದ್ದ ಪ್ರವಚನ ಮಾಲಿಕೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ ಸಂತೋಷ, ನೆಮ್ಮದಿ ಎಲ್ಲರಿಗೂ ಬೇಕು. ಖುಷಿಗೆ ಆಯುಷ್ಯ ಇಲ್ಲ. ಅದೊಂದು ಪರಮ ಶಕ್ತಿ. ಒಳಗಿರುವ ಖುಷಿ ಬಗ್ಗೆ ತಿಳಿದುಕೊಂಡು ಯೋಗ ಹಾಗೂ ಧ್ಯಾನದ ಮೂಲಕ ಅದನ್ನು ಸಂರಕ್ಷಿಸುವ ಅಗತ್ಯವಿದೆ’ ಎಂದರು.

ಪ್ರಸ್ತುತ ದಿನಗಳಲ್ಲಿ ಸಂಬಂಧಗಳು ಚದುರಿದಂತೆ, ಬಾಂಧವ್ಯ ಕಳಚಿಕೊಳ್ಳುತ್ತಿವೆ. ವಿಭಕ್ತ ಕುಟುಂಬ ರಚನೆಯಿಂದ ನಗುವ ವಾತಾವರಣ ಗೌಣವಾಗಿದೆ. ಕೃತಕ ನಗುವಿಕೆಗಾಗಿ ಹಣ ಕೊಟ್ಟು ಲಾಫಿಕ್ ಕ್ಲಬ್‍ಗಳಿಗೆ ಮಾರು ಹೋಗುವ ದುರ್ದೈವ ನಮ್ಮದಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಮಕ್ಕಳಿಗೆ ಪೀಜಾ, ಬರ್ಗರ್, ಕುರಕುರೆ ಕೊಡಿಸಿ ಮಕ್ಕಳ ನೆಮ್ಮದಿ ಹಾಳು ಮಾಡಬಾರದು. ಮಕ್ಕಳಿಗೆ ಅಧ್ಯಯನ ಮಾಡುವಂತೆ ಒತ್ತಡ ಹಾಕಬಾರದು. ಇದರಿಂದ ಪಾಲಕರು ಹಾಗೂ ಮಕ್ಕಳ ಹೊಂದಾಣಿಕೆ ಇರುವುದಿಲ್ಲ. ಪಾಲಕರು ಹಾಗೂ ಮಕ್ಕಳ ನಡುವಿನ ಸಂಬಂಧ ಗಟ್ಟಿಯಾಗಿರಲು ಖುಷಿ ವೃದ್ಧಿಸಬೇಕಿದೆ’ ಎಂದರು.
‘ಪ್ರಸ್ತುತ ದಿನಗಳಲ್ಲಿ ಸಮಾಜದಲ್ಲಿ ಸಂಭವಿಸುತ್ತಿರುವ ಅತ್ಯಾಚಾರ, ಅನೀತಿ, ಅಧರ್ಮ, ಹಿಂಸಾತ್ಮಕ ಬೆಳವಣಿಗೆ, ಶೋಷಣೆ, ದಬ್ಬಾಳಿಕೆ ಇತ್ಯಾದಿ ವಿಕಾರಿ ಗುಣಗಳಿಗೆ ಕಡಿವಾಣ ಹಾಕಲು ಪ್ರತಿದಿನ ಬೆಳಿಗ್ಗೆ ಒಂದು ಗಂಟೆಯಾದರೂ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯಕ್ಕೆ ತೆರಳಿ ರಾಜಯೋಗ ಶಿಬಿರದ ಅನುಭವ ಮಾಡಬೇಕು’ ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ, ಸದಸ್ಯ ಸುಧೀರ ಕಾಡಾದಿ, ಹೈದರಾಬಾದ್‌ನ ಶತ್ರುಘ್ನ ಅಗರವಾಲ್‌ ಮಾತನಾಡಿದರು. ಬ್ರಹ್ಮಕುಮಾರಿ ಶಿವಶಕ್ತಿ ಭವನದ ಸಂಚಾಲಕಿ ಬಿ.ಕೆ ಸುಮಂಗಲಾ ಬೆಹೆನ್ ಅಧ್ಯಕ್ಷತೆ ವಹಿಸಿದ್ದರು.
ವಂದೇ ಮಾತರಂ ಶಾಲೆ ಮಕ್ಕಳು ನೃತ್ಯ ಪ್ರದರ್ಶೀಸಿದರು. ಬಿ.ಕೆ ಸುನಂದಾ ಬೆಹೆನ್ ಸ್ವಾಗತಿಸಿದರು. ಬಿ.ಕೆ ಸರಸ್ವತಿ ನಿರೂಪಿಸಿದರು. ಬಿ.ಕೆ ಪಾರ್ವತಿ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು