ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಮಾರುಕಟ್ಟೆಯಲ್ಲಿ ಬೀಗಿದ ಬೀನ್ಸ್‌, ಬೆಳ್ಳುಳ್ಳಿ

ಕೊನೆಗೂ ಗ್ರಾಹಕನ ಎದುರು ಮಂಡಿಯೂರಿದ ಕೊತಂಬರಿ
Last Updated 14 ಅಕ್ಟೋಬರ್ 2022, 23:30 IST
ಅಕ್ಷರ ಗಾತ್ರ

ಬೀದರ್‌: ಸರಣಿ ಹಬ್ಬಗಳ ಬಲದಿಂದ ಘಮ ಘಮಿಸುತ್ತಿದ್ದ ಕೊತಂಬರಿ ಕೊನೆಗೂ ಗ್ರಾಹಕನ ಎದುರು ಮಂಡಿಯೂರಿದೆ. ಬೆಳ್ಳುಳ್ಳಿ, ನುಗ್ಗೆಕಾಯಿ ಹಾಗೂ ಬೀನ್ಸ್‌ ಮಾತ್ರ ಮಾರುಕಟ್ಟೆಯಲ್ಲಿ ಬೀಗುತ್ತಿವೆ.

ಕೆಲ ತರಕಾರಿಗಳ ಬೆಲೆ ಇಳಿದರೂ ಗ್ರಾಹಕರ ಕೈಗೆಟಕುವ ಬೆಲೆಯಲ್ಲಿ ಇಲ್ಲ. ತರಕಾರಿ ರಾಜ ಸೇರಿದಂತೆ ಕೊಂಬಿನ ತರಕಾರಿಗಳು ಗ್ರಾಹಕರ ಸಂಕಷ್ಟ ಅರಿತು ಸ್ವಲ್ಪ ತಲೆ ಬಾಗಿವೆ. ಪ್ರತಿ ಕ್ವಿಂಟಲ್‌ಗೆ ಕೊತಂಬರಿ ಬೆಲೆ ₹ 7 ಸಾವಿರ, ಪಾಲಕ್ ₹ 4 ಸಾವಿರ, ಮೆಣಸಿನಕಾಯಿ, ಬದನೆಕಾಯಿ, ಬೆಂಡೆಕಾಯಿ, ಚವಳೆಕಾಯಿ ₹ 2 ಸಾವಿರ, ಈರುಳ್ಳಿ, ಆಲೂಗಡ್ಡೆ, ಎಲೆಕೋಸು ಹಾಗೂ ಕರಿಬೇವು ₹ 1 ಸಾವಿರ ಇಳಿದಿದೆ.

ಹಿರೇಕಾಯಿ, ನುಗ್ಗೆಕಾಯಿ, ಡೊಣಮೆಣಸಿನ ಕಾಯಿ, ಹೂಕೋಸು, ಗಜ್ಜರಿ, ಬೀನ್ಸ್, ಟೊಮೆಟೊ, ಸೌತೆಕಾಯಿ, ತುಪ್ಪದ ಹಿರೇಕಾಯಿ, ಮೆಂತೆ, ಹಾಗೂ ಸಬ್ಬಸಗಿ ಬೆಲೆ ಸ್ಥಿರವಾಗಿದೆ.

‘ವಿವಿಧೆಡೆ ಬೆಳೆದ ತರಕಾರಿ ನಿಧಾನವಾಗಿ ಮಾರುಕಟ್ಟೆಗೆ ಬರಲಾರಂಭಿಸಿದೆ. ಕೆಲ ಜಿಲ್ಲೆಗಳಲ್ಲಿ ಮಳೆಯಾಗುತ್ತಿರುವ ಕಾರಣ ಹಾನಿಯಿಂದ ತಪ್ಪಿಸಿಕೊಳ್ಳಲು ರೈತರು ತರಕಾರಿಯನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಸಹಜವಾಗಿ ಕೆಲ ತರಕಾರಿ ಬೆಲೆ ಕಡಿಮೆಯಾಗಿದೆ’ ಎಂದು ತರಕಾರಿ ವ್ಯಾಪಾರಿ ಶಿವಕುಮಾರ ಮಾಡಗೂಳ ಹೇಳುತ್ತಾರೆ.

ಹೈದರಾಬಾದ್‌ನಿಂದ ನುಗ್ಗೆಕಾಯಿ, ಚವಳೆಕಾಯಿ, ಬೀಟ್‌ರೂಟ್‌, ಡೊಣ ಮೆಣಸಿನಕಾಯಿ, ತೊಂಡೆಕಾಯಿ, ಗಜ್ಜರಿ, ಪಡವಲಕಾಯಿ, ಹಾಗಲಕಾಯಿ ನಗರದ ತರಕಾರಿ ಸಗಟು ಮಾರುಕಟ್ಟೆಗೆ ಆವಕವಾಗಿದೆ. ಬೆಳಗಾವಿ ಜಿಲ್ಲೆಯಿಂದ ಹಸಿ ಮೆಣಸಿನಕಾಯಿ ಬಂದಿದೆ.

ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಈರುಳ್ಳಿ ಉತ್ಪಾದನೆಯಾಗಿದೆ. ಅಲ್ಲಿಂದಲೇ ಈರುಳ್ಳಿ ಹಾಗೂ ಬೆಳ್ಳುಳ್ಳಿ ಮಾರುಕಟ್ಟೆಗೆ ಬಂದಿದೆ. 15 ದಿನಗಳಲ್ಲಿ ಬೆಳ್ಳುಳ್ಳಿ ಬೆಲೆಯೂ ಸ್ವಲ್ಪ ಇಳಿದರೆ ಅಚ್ಚರಿ ಇಲ್ಲ ಎಂದು ತರಕಾರಿ ಮಾರುಕಟ್ಟೆ ತಜ್ಞರು ವಿಶ್ಲೇಷಣೆ ಮಾಡುತ್ತಾರೆ.

ಬೀದರ್‌ ತರಕಾರಿ ಚಿಲ್ಲರೆ ಮಾರುಕಟ್ಟೆ
ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ, ಈ ವಾರ


ಈರುಳ್ಳಿ 30-40,20-30
ಬೆಳ್ಳುಳ್ಳಿ 40-50,60-70
ಆಲೂಗಡ್ಡೆ 30-40,20-30
ಮೆಣಸಿನಕಾಯಿ 50-60,30-40
ಎಲೆಕೋಸು 30-40,20-30
ಹೂಕೋಸು 60-80,60-80
ಗಜ್ಜರಿ 60-80,60-80
ಬೀನ್ಸ್ 100-120,100-120
ಟೊಮೆಟೊ 50-60,50-60

ಬದನೆಕಾಯಿ 100-120,60-80
ಬೆಂಡೆಕಾಯಿ 50-60,30-40
ಹಿರೇಕಾಯಿ 60-80,50-60
ನುಗ್ಗೆಕಾಯಿ 100-120,100-120

ಡೊಣಮೆಣಸಿನ ಕಾಯಿ 50-60,50-60
ಚವಳೆಕಾಯಿ 50-60,30-40
ಸೌತೆಕಾಯಿ 30-40,30-40
ತುಪ್ಪದ ಹಿರೇಕಾಯಿ 60-80,60-80

ಮೆಂತೆ 100-120,100-120
ಸಬ್ಬಸಗಿ 60-80,60-80
ಕರಿಬೇವು 30-40,20-30
ಕೊತಂಬರಿ 100-120,20-30
ಪಾಲಕ್ 60-80,30-40

ಪೇಟೆ ಧಾರಣಿ
(ಪ್ರತಿ ಕ್ವಿಂಟಲ್‌– ಕನಿಷ್ಠ– ಗರಿಷ್ಠ)
ಕಡಲೆ ಕಾಳು – ₹ 3,666 –₹ 4,319
ಉದ್ದಿನ ಕಾಳು ₹ 5,500 –₹ 7,500
ಹೆಸರು ಕಾಳು ₹ 6,600 –₹ 7,450
ಜೋಳ ₹ 2,600 –₹ 3,300
ನುಚ್ಚು ಅಕ್ಕಿ ₹ 2,300 –₹ 2,800

ಅಕ್ಕಿ ₹ 4,400 –₹ 6,000
ಸೋಯಾಬಿನ್ ₹ 4,100 –₹ 5,023
ತೊಗರಿ ₹7,051 –₹ 7,152
ಗೋಧಿ ₹ 2,000 –₹ 3,200

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT