ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಭಾಷಾ ಶುದ್ಧತೆಗೆ ಆದ್ಯತೆ ನೀಡಿ: ಬಸವಕುಮಾರ ಪಾಟೀಲ

Last Updated 6 ಡಿಸೆಂಬರ್ 2022, 15:24 IST
ಅಕ್ಷರ ಗಾತ್ರ

ಬೀದರ್‌: ‘ಇಂದಿನ ಮಕ್ಕಳಲ್ಲಿ ಭಾಷಾ ಅಚ್ಚುಕಟ್ಟುತನ ಕಂಡು ಬರುತ್ತಿಲ್ಲ. ಬರವಣಿಗೆಯಲ್ಲಿ ಅಸ್ಪಷ್ಟತೆ ಎದ್ದು ಕಾಣುತ್ತಿದೆ. ಮಕ್ಕಳ ಭಾಷಾ ಶುದ್ಧತೆಗೆ ಪಾಲಕರು ಆದ್ಯತೆ ಕೊಡಬೇಕು’ ಎಂದು ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ವತಿಯಿಂದ ನಗರದ ನಿಜಲಿಂಗ ರಗಟೆ ಅವರ ನಿವಾಸದಲ್ಲಿ ಆಯೋಜಿಸಿದ್ದ 62ನೇಯ ಮನೆಯಂಗಳದಲ್ಲಿ ಮಾತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಿಜಲಿಂಗ ರಗಟೆಯವರ ಸಾಹಿತ್ಯ ನಿತ್ಯ ಓದಿದರೂ ಕಡಿಮೆ ಎನಿಸುತ್ತದೆ. ಸಾಹಿತ್ಯದಲ್ಲಿ ಭಾವನೆಗಳು ಅಡಕವಾಗಿವೆ. ಇಂಥವರ ಮನೆಯಂಗಳದಲ್ಲಿ ಮಾತು ಕಾರ್ಯಕ್ರಮ ಆಯೋಜಿಸಿರುವುದು ಸ್ತುತ್ಯಾರ್ಹವಾಗಿದೆ ಎಂದರು.

ಸಾಹಿತಿ ನಿಜಲಿಂಗ ರಗಟೆ ಮಾತನಾಡಿ,‘ಸಾಹಿತ್ಯ ನನ್ನ ಆಸಕ್ತಿಯ ವಿಷಯವಾಗಿದೆ. ಈಗಾಗಲೇ 7 ಕೃತಿಗಳು ಪ್ರಕಟವಾಗಿವೆ. ಶೀಘ‌ದಲ್ಲೇ 7 ಕೃತಿಗಳು ಹೊರ ಬರಲಿವೆ. ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಉಮಕಾಂತ ನಾಗಮಾರಪಳ್ಳಿ ಪ್ರೇರಣೆಯಿಂದಾಗಿ ಇಷ್ಟೊಂದು ಕೃತಿಗಳನ್ನು ಹೊರ ತರಲು ಸಾಧ್ಯವಾಗಿದೆ’ ಎಂದು ಹೇಳಿದರು.

ಸಾಹಿತಿ ರಾಮಚಂದ್ರ ಗಣಾಪೂರ ಹಾಗೂ ಜಗದೇವಿ ತಿಬಶೆಟ್ಟಿ ಸಂವಾದ ನಡೆಸಿಕೊಟ್ಟರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಆಶಯ ಭಾಷಣ ಮಾಡಿದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್.ಮನೋಹರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಸಾಪ ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ಸಂಗಮೇಶ್ವರ ಜಾಂತೆ ಪಾಲ್ಗೊಂಡಿದ್ದರು.

ಎಂ.ದೇಶಪಾಂಡೆ, ಶಿವಕುಮಾರ ಕಟ್ಟೆ, ಬಸವರಾಜ ಬಲ್ಲೂರ, ರೂಪಾ ಪಾಟೀಲ, ಪರಮೇಶ್ವರ ಬಿರಾದಾರ, ಸಿದ್ಧಾರೂಢ ಭಾಲ್ಕೆ, ಅಶೋಕ ದಿಡಗೆ, ಸಿದ್ಧಾರೆಡ್ಡಿ ನಾಗೂರೆ, ಡಾ. ಶ್ರೇಯಾ ಮಹೇಂದ್ರಕರ್, ಈಶ್ವರಯ್ಯ ಕೋಡಂಬಲ, ರಮೇಶ ಬಿರಾದಾರ, ಚನ್ನಪ್ಪ ಸಂಗೋಳಗಿ, ಅರವಿಂದ ಕುಲಕರ್ಣಿ ಹಾಗೂ ವೀರಭದರಪ್ಪ ಉಪ್ಪಿನ್ ಇದ್ದರು.

ಪಾರ್ವತಿ ಪಾಟೀಲ ಸ್ವಾಗತ ಗೀತೆ ಹಾಡಿದರು. ಪ್ರೊ. ಜಗನ್ನಾಥ ಕಮಲಾಪುರೆ ಸ್ವಾಗತಿಸಿದರು. ರಾಘವೆಂದ್ರ ಮುತ್ತಂಗಿ ನಿರೂಪಿಸಿದರು. ಟಿ.ಎಂ. ಮಚ್ಛೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT