ಮಂಗಳವಾರ, ಡಿಸೆಂಬರ್ 1, 2020
22 °C
ಶಿವಕುಮಾರ ಸ್ವಾಮೀಜಿ, ಸಿದ್ಧಾರೂಢ ಮಠ, ಬೀದರ್

ಧರ್ಮದಿಂದಲೇ ಅಭ್ಯುದಯ

ಅಮೃತವಾಣಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಧರ್ಮದಿಂದಲೇ ಸುಖವೆಂದ ಬಳಿಕ ಧರ್ಮ ಸಂಗ್ರಹಿಸುವುದು ಪರಮ ಪುರುಷಾರ್ಥವಾಗಿದೆ. ಧರ್ಮ ರಹಿತ ಅರ್ಥ ಕಾಮಗಳೆರಡೂ ತ್ಯಾಜ್ಯಗಳೆಂಬುದು ಅನುಭಾವಿಗಳ ಮಾತು.
ಧರ್ಮ, ಅಧರ್ಮಗಳ ಬಗ್ಗೆ ಶಾಸ್ತ್ರಗಳಲ್ಲಿ ಹಲವು ಬಗೆಯಲ್ಲಿ ವಿವರಿಸಲಾಗಿದೆ. ಉತ್ತಮ ಭೋಗ, ಉತ್ತಮ ಲೋಕ, ಉತ್ತಮ ಜನ್ಮಗಳನ್ನು ಕೊಡುವುದು ಯಾವುದೋ ಅದನ್ನು ಧರ್ಮವೆನ್ನುವರು. ತದ್ವಿರುದ್ಧ ಫಲ ಕೊಡುವುದಕ್ಕೆ ಅಧರ್ಮವೆನ್ನುತ್ತಾರೆ.

"ಧರ್ಮೇಣಗಮನಮೂಧ್ರ್ವಂಗಮನಮಧಸ್ತಾತ್ ಭವತ್ಯಧರ್ಮೇಣ (ಸಾಂಖ್ಯಕಾರಿಕಾ)"
ಧರ್ಮವು ಮನುಷ್ಯನನ್ನು ನರಕಕ್ಕೆ ಹೋಗಲು ಕೊಡದೆ, ದುಃಖಿಯನ್ನಾಗಿ ಮಾಡದೆ, ಸದಾ ಸುಖವನ್ನು ಕೊಡುತ್ತದೆ. ಅಂತೆಯೇ "ಧಾರಣಾತ್ ಧರ್ಮ" ಎಂದು ಕರೆಯಲಾಗಿದೆ. ಧರ್ಮದಿಂದಲೇ ಅಭ್ಯುದಯ ಮತ್ತು ನಿಶ್ರೇಯಸ್ಸುಗಳೆರಡೂ ದೊರಕುತ್ತವೆ. ಆದ್ದರಿಂದ ಪ್ರಧಾನ ಪುರುಷಾರ್ಥವು ಧರ್ಮವೇ ಆಗಿದೆ.
ಧರ್ಮದಿಂದಲೇ ಭಕ್ತಿ, ಜ್ಞಾನಗಳು ಜನಿಸುತ್ತವೆ. ಜೈಮಿನಿ ಋಷಿಯು ಇದೆ ಅಭಿಪ್ರಾಯದಿಂದಲೇ ಮೀಮಾಂಸಾಶಾಸ್ತ್ರದ ರಚನೆಗೈದಿದ್ದಾರೆ.

ಧರ್ಮವೇ ಜಗತ್ತಿನ ಸ್ಥಿತಿಗತಿಗೆ ಕಾರಣವಾಗಿದೆ. ಪ್ರತಿಯೊಂದು ಜೀವಿಯ ಕಲ್ಯಾಣವು, ಇಹಪರದಲ್ಲಿ ಸೌಖ್ಯ ಧರ್ಮದಿಂದಲೇ ಸಾಧ್ಯ. ವ್ಯಕ್ತಿ, ಜಾತಿ, ಸಮಾಜ, ರಾಜ್ಯ, ರಾಷ್ಟ್ರಗಳ ಅಭ್ಯುದಯವು ಧರ್ಮದಲ್ಲಿಯೇ ನಿಹಿತವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.