ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ನಿಪಥ್‌ಗೆ ವಿರೋಧ: ಪ್ರತಿಭಟನೆ

Last Updated 23 ಜೂನ್ 2022, 4:10 IST
ಅಕ್ಷರ ಗಾತ್ರ

ಭಾಲ್ಕಿ: ಇಲ್ಲಿಯ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ವಿರೋಧಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಬಳಿಕ ತಾಲ್ಲೂಕು ಘಟಕದ ಅಧ್ಯಕ್ಷ ತುಕಾರಾಮ ಹಜಾರೆ ನೇತೃತ್ವದಲ್ಲಿ ತಹಶೀಲ್ದಾರ್ ಕೀರ್ತಿ ಚಾಲಕ್‌ ಅವರಿಗೆ ಮನವಿ ಸಲ್ಲಿಸಿದರು.

ನಂತರ ಮಾತನಾಡಿದ ಪಕ್ಷದ ಪ್ರಮುಖರು,‘ಯುವಕರಿಗೆ ಕೇವಲ 4 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡುವುದರಿಂದ ಅವರ ಭಾವನೆಗಳ ಜತೆ ಆಟವಾಡಿದಂತಾಗುತ್ತದೆ. ಇಂಥ ಅಲ್ಪಾವಧಿಯ ಯೋಜನೆಗಳು ಸೈನಿಕರ ಮನೋಭಾವವನ್ನು ಕುಗ್ಗಿಸುತ್ತವೆ. ಗುಣಮಟ್ಟದ ಸೇವೆಗೆ ಅಡ್ಡಿಪಡಿಸುತ್ತವೆ’ ಎಂದು ಈ ವೇಳೆ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಕೂಡಲೇ ಈ ಯೋಜನೆಯನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದು ಮನವಿ ಪತ್ರದಲ್ಲಿ ಅವರು ಎಚ್ಚರಿಸಿದ್ದಾರೆ.

ಪ್ರಮುಖರಾದ ಮಹೇಂದ್ರ ಕಾಂಬಳೆ, ಭಾಗ್ಯಶ್ರೀ ಹೊಳ್ಕರ್, ಪ್ರಬುದ್ಧ ಶಿಂಧೆ, ಸತೀಶ ಕುಮಾರ ಹೊನ್ನಾಳೆ, ಮಹೇಶ ಗವಂಡೆ, ಸಿದ್ದು ಕೊರಾಳೆ, ಸಯ್ಯದ್ ಅಲ್ಲುದ್ದೀನ್, ಸಂಜೀವ ರತ್ನಾಕರ, ರಾಜೀವ್ ಸೇರಿದಂತೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT