ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌: ಜೆಜೆಎಮ್‌ ಕಾಮಗಾರಿ ತನಿಖೆಗೆ ಆಗ್ರಹಿಸಿ ಧರಣಿ

Published : 13 ಸೆಪ್ಟೆಂಬರ್ 2024, 14:38 IST
Last Updated : 13 ಸೆಪ್ಟೆಂಬರ್ 2024, 14:38 IST
ಫಾಲೋ ಮಾಡಿ
Comments

ಬೀದರ್‌: ಜಲಜೀವನ್‌ ಮಿಷನ್‌ (ಜೆಜೆಎಮ್‌) ಕಳಪೆ ಕಾಮಗಾರಿ ಕೈಗೊಂಡಿದ್ದು, ಅದರ ತನಿಖೆಗೆ ಆಗ್ರಹಿಸಿ ಕರ್ನಾಟಕ ಪ್ರಜಾ ಶಕ್ತಿ ಸಮಿತಿ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಶುಕ್ರವಾರ ಧರಣಿ ಉಪವಾಸ ಸತ್ಯಾಗ್ರಹ ಆರಂಭಿಸಿದರು.

ಔರಾದ್‌ (ಬಿ) ತಾಲ್ಲೂಕಿನ ನಿಡೋದಾ, ಬೇಡಕುಂದಾ, ಬಳತ (ಬಿ) ಬಳತ (ಕೆ), ನಾಗೂರ (ಎಮ್), ಹೆಡಗಾಪೂರ, ರಕ್ಷ್ಯಾಳ, ಆಲೂರ (ಕೆ), ಬೋರಾಳ, ಅಲ್ಲಾಪೂರ, ಸಂತಪೂರ, ಬಲ್ಲೂರ, ಸುಂಧಾಳ, ಮಮದಾಪೂರ, ಕೌಡಗಾಂವ್‌, ಕೌಠಾ, ಜವಲ ತಾಂಡಾ, ಕಾರಬಾರ ತಾಂಡ, ಮಾರಜೂ ತಾಂಡಾ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಳಪೆ ಕಾಮಗಾರಿಯಾಗಿದೆ. ನಕಲಿ ಬಿಲ್‌ ಸೃಷ್ಟಿಸಿ ಬಿಲ್‌ ಮಾಡಲಾಗಿದೆ ಎಂದು ಆರೋಪಿಸಿದರು.

ಈ ಸಂಬಂಧ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಖುದ್ದು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರೂ ಪರಿಶೀಲನೆ ನಡೆಸಿಲ್ಲ. ಸಂಬಂಧಪಟ್ಟ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡಿಲ್ಲ. ಉನ್ನತಮಟ್ಟದ ತನಿಖಾ ತಂಡ ರಚಿಸಿ, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಒಂದು ವಾರದೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮನೆ ಮುಂದೆ ಆಮರಣ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಮಿತಿ ಜಿಲ್ಲಾಧ್ಯಕ್ಷ ಸಾಯಿ ಶಿಂಧೆ, ನಗರ ಘಟಕದ ಅಧ್ಯಕ್ಷ ವಿನೋದ ಶಿಂಧೆ, ಉಪಾಧ್ಯಕ್ಷ ಮಹೇಂದ್ರಕುಮಾರ ಹೊಸಮನಿ, ಪ್ರಮುಖರಾದ ಶಿವ ಬೇಲೂರೆ, ಆಕಾಶ ತ್ರಿಮುಖೆ, ಧನರಾಜ ಮೇತ್ರೆ, ಗುರು ನೇಮತಾಬಾದ್‌, ಸಂದೀಪ ಕಾಂಟೆ, ಸಂಗಮೇಶ ಭಾವಿದೊಡ್ಡಿ, ಜೈಭೀಮ ಖ್ಯಾದೆ, ಗೌತಮ್‌ ಪ್ರಸಾದ್‌, ಅಖಿಲೇಶ್‌ ಸಾಗರ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT