ಹುಮನಾಬಾದ್: ದಲಿತ ಸಂಘರ್ಷ ಸಮಿತಿಯಿಂದ (ಅಂಬೇಡ್ಕರ್ ವಾದ) ದಲಿತರ ಭೂಮಿ ವಸತಿ ಹಕ್ಕಿಗಾಗಿ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಅಂಜುಂ ತಬಸುಮ್ ಅವರಿಗೆ ಸಲ್ಲಿಸಿದರು.

ನಂತರ ಸಂಘಟನೆಯ ಪ್ರಮುಖರು ಮಾತನಾಡಿ, ‘ಪರಿಶಿಷ್ಟ ಜಾತಿ, ವರ್ಗ ಹಾಗೂ ಭೂಹೀನ ತಳ ಸಮುದಾಯಗಳು ಉಳುಮೆ ಮಾಡುತ್ತಿರುವ ಬಗರ್ ಹುಕುಂ ಸಾಗುವಳಿಯನ್ನು ಕಾಲಮಿತಿಯೊಳಗೆ ಇತ್ಯರ್ಥಗೊಳಿಸಬೇಕು. ಪರಿಶಿಷ್ಟ ಪಿ. ಟಿ. ಸಿ. ಎಲ್. ಕಾಯ್ದೆಗೆ ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿಯನ್ನು ಮಾನ್ಶ ಮಾಡದ ಕಂದಾಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೖಗೊಳ್ಳಬೇಕು. ತಾಲ್ಲೂಕಿನ ದುಬಲಗುಂಡಿ ಗ್ರಾಮದಲ್ಲಿ ಎಸ್. ಟಿ. ಸಮುದಾಯದಕ್ಕೆ ಸ್ಮಶಾನ ಹಾಗೂ ಗ್ರಾಮದ ಸರ್ವೆ ನಂಬರ್ 232ರಲ್ಲಿ ಬುದ್ಧ ವಿಹಾರ ನಿರ್ಮಾಣಕ್ಕೆ ಭೂಮಿ ಒದಗಿಸಬೇಕು’ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ರಾಜ್ಯ ಸಂಚಾಲಕ ರಮೇಶ ಡಾಕುಳಗಿ, ತಾಲ್ಲೂಕು ಸಂಚಾಲಕ ರಾಹುಲ್ ಉದ್ದಾ, ಪ್ರಭು ಚಿತ್ತಾಕೋಟಾ, ಬಾಬು ಮಾಲೆ, ಮಾಣಿಕ ಮಾಡಗೊಳು, ವಿಠ್ಠಲ್ , ಪ್ರಕಾಶ್ ಗಡವಂತಿ, ವೈಜಿನಾಥ್ ಸಿಂಧೆ, ಗಣಪತಿ ಅಷ್ಟೋರೆ, ಶ್ರೀನಿವಾಸ್ ಕಟ್ಟಿಮನಿ. ಶಬೀರ್ ಶಾ, ಸುಧಾಕರ್ ಸಿಂಧೆ, ಗೋರಕನಾಥ್ ಗೋಡುಬಳೆ, ಅವಿನಾಶ್ ಗಾಯಕವಾಡ, ವಿನೋದ್ ಮೇಲ್ಕೇರಿ, ಕಿಶೋರ್, ಶ್ರೀಕಾಂತ್ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.