ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಪ್ರದೇಶದಲ್ಲಿ ಕಡಿಮೆ ಮತದಾನ

ಕನಕಪುರ ಗ್ರಾಮೀಣ ಪ್ರದೇಶದಲ್ಲಿ ಅತಿ ಹೆಚ್ಚು ಚುನಾವಣೆ
Last Updated 13 ಮೇ 2018, 9:07 IST
ಅಕ್ಷರ ಗಾತ್ರ

ಕನಕಪುರ: ಕನಕಪುರ ವಿಧಾನ ಸಭಾ ಕ್ಷೇತ್ರದಲ್ಲಿ ಶನಿವಾರ ನಡೆದ ಚುನಾವಣೆಯು ಯಾವುದೆ ರೀತಿಯ ಗೊಂದಲವಿಲ್ಲದೆ ಅತ್ಯಂತ ಶಾಂತ ರೀತಿಯಲ್ಲಿ ನಡೆಯಿತು.

ಬೆಳಿಗ್ಗೆ 7 ಗಂಟೆಗೆ ಎಲ್ಲಾ 297 ಮತಗಟ್ಟೆಗಳಲ್ಲಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು. ಕಸಬಾ ಹೋಬಳಿ ಕೆರಳಾಳುಸಂದ್ರ ಗ್ರಾಮದಲ್ಲಿ ಇ.ವಿ.ಎಂ. ಮಸೀನ್‌ ತಾಂತ್ರಿಕ ದೋಷವಾಗಿದ್ದರಿಂದ ತಕ್ಷಣವೇ ಬೇರೆ ಮತಯಂತ್ರ ಬದಲಾಯಿಸಿಕೊಟ್ಟು ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು.

ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ.ಶಿವಕುಮಾರ್‌ ಸ್ವಗ್ರಾಮವಾದ ದೊಡ್ಡ ಆಲಹಳ್ಳಿ ಮತಗಟ್ಟೆಯಲ್ಲಿ ಮಧ್ಯಾಹ್ನ 12 ಗಂಟೆಗೆ ಕುಟುಂಬ ಸಮೇತರಾಗಿ ಬಂದು ಮತ ಚಲಾಯಿಸಿದರು.

ಜೆ.ಡಿ.ಎಸ್‌. ಅಭ್ಯರ್ಥಿ ನಾರಾಯಣಗೌಡ ಅವರು ಸ್ವಗ್ರಾಮವಾದ ಕೆರಳಾಳುಸಂದ್ರ ಗ್ರಾಮದಲ್ಲಿ ಹಕ್ಕನ್ನು ಚಲಾಯಿಸಿದರು. ಬಿ.ಜೆ.ಪಿ. ಅಭ್ಯರ್ಥಿ ನಂದಿನಿಗೌಡ ಅವರು ನಗರದ ಮಾನಸ ಸ್ಕೂಲ್‌ ಆವರಣದ ಮತಗಟ್ಟೆಯಲ್ಲಿ ಮತ ಹಾಕಿದರು.

ಸಂಸದ ಡಿ.ಕೆ.ಸುರೇಶ್‌ ದೊಡ್ಡಾಲಹಳ್ಳಿಯಲ್ಲಿ ಮತದಾನ ಮಾಡಿದರು. ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ ಮಳಗಾಳು ಗ್ರಾಮದಲ್ಲಿ ಮತ ಚಲಾಯಿಸಿದರು.

ರಾಮನಗರ ವಿಧಾನ ಸಭಾ ಕಾಂಗ್ರೆಸ್‌ ಅಭ್ಯರ್ಥಿ ಇಕ್ಬಾಲ್‌ ಹುಸೇನ್‌ ತಮ್ಮ ಸ್ವಗ್ರಾಮವಾದ ಹೂಕುಂದದಲ್ಲಿ ಮತದಾನ ಮಾಡಿದರು. ಮತದಾನವು ಸಂಜೆ 6 ಗಂಟೆಯವರೆಗೆ ನಡೆಯಿತು.

ನಗರ ಪ್ರದೇಶದಲ್ಲಿ ಶೇಕಡ 85 ರಷ್ಟು ಮತದಾನವಾದರೆ ಗ್ರಾಮೀಣ ಪ್ರದೇಶಗಳಲ್ಲಿ ಶೇಕಡ 95ಕ್ಕೂ ಹೆಚ್ಚಿನ ಮತದಾನವಾಗಿದೆ. ಮಹಿಳೆಯರನ್ನು ಆಕರ್ಷಿಸಲು ನೂತನವಾಗಿ ಮಾಡಿದ್ದ ಪಿಂಕ್‌ ಮತಗಟ್ಟೆಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತಗಟ್ಟೆಗಳಿಗೆ ಬಂದು ಮತದಾನ ಮಾಡಲು ಪ್ರೇರಣೆ ನೀಡಿದೆ ಎಂದು ಮತಗಟ್ಟೆ ಅಧಿಕಾರಿ ವರಲಕ್ಷ್ಮೀ ತಿಳಿಸಿದರು.

ಶುಕ್ರವಾರ ಸಂಜೆ ರೂಟ್‌ಗೆ ಹೋಗಿದ್ದ ಬಸ್ಸುಗಳು ತಮ್ಮ ರೂಟಿನ ಚುನಾವಣಾಧಿಕಾರಿಗಳು, ಸಿಬ್ಬಂದಿ ಹಾಗೂ ಚುನಾವಣಾ ಸಾಮಗ್ರಿಗಳನ್ನು ವಾಪಸ್‌ ತೆಗೆದುಕೊಂಡು ಕನಕಪುರ ರೂರಲ್‌ ಪದವಿ ಕಾಲೇಜಿಗೆ ಬಂದು ಡೀ ಮಸ್ಟರಿಂಗ್‌ ಮಾಡಲಾಯಿತು.

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 297 ಮತಗಟ್ಟೆಗಳ ಮತಯಂತ್ರಗಳನ್ನು ರೂರಲ್‌ ಕಾಲೇಜಿನಲ್ಲಿ ಭದ್ರತಾ ಕೊಠಡಿಯಲ್ಲಿ ಇಡಲಾಯಿತು. ನಂತರ ಸೂಕ್ತ ಬಂದೋ ಬಸ್ತಿನಲ್ಲಿ ರಾಮನಗರದಲ್ಲಿ ಮಾಡಿರುವ ಮತ ಎಣಿಕೆ ಕೇಂದ್ರಕ್ಕೆ  ಕಳುಹಿಸಿ ಕೊಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT