ಪಿಸ್ತೂಲ್ ನಾಪತ್ತೆ:ಪಿಎಸ್‌ಐ ಅಮಾನತು

7

ಪಿಸ್ತೂಲ್ ನಾಪತ್ತೆ:ಪಿಎಸ್‌ಐ ಅಮಾನತು

Published:
Updated:

ಬೀದರ್: ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ನ್ಯೂಟೌನ್‌ ಠಾಣೆಗೆ ಒಪ್ಪಿಸಿದ್ದ ಪಿಸ್ತೂಲ್‌ ಕಾಣೆಯಾಗಿರುವ ಕಾರಣ ಕರ್ತವ್ಯ ಲೋಪದ ಆರೋಪದ ಮೇಲೆ ಪಿಎಸ್ಐ ಸಂಗಮೇಶ ಅವರನ್ನು ಅಮಾನತು ಮಾಡಲಾಗಿದೆ.

ಚಂದ್ರಕಾಂತ ಗುದಗೆ ಪೊಲೀಸ್‌ ಠಾಣೆಗೆ ಪಿಸ್ತೂಲ್‌ ಒಪ್ಪಿಸಿ ರಸೀದಿ ಪಡೆದುಕೊಂಡಿದ್ದರು. ಪಿಸ್ತೂಲ್‌ ತರಲು ಈಚೆಗೆ ಠಾಣೆಗೆ ಹೋದಾಗ ‘ಕಳೆದು ಹೋಗಿದೆ’ ಎಂದು ಹೇಳಿ ಪಿಎಸ್‌ಐ ಅಸಹಾಯಕತೆ ವ್ಯಕ್ತಪಡಿಸಿದರು. ಚಂದ್ರಕಾಂತ ನೀಡಿದ ಆಧಾರ ಮೇಲೆ ವಿಚಾರಣೆ ನಡೆಸಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ್ ಅಮಾನತುಗೊಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !