ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: 600ಕ್ಕೆ 600ಅಂಕ ಪಡೆದ 53 ವಿದ್ಯಾರ್ಥಿಗಳು; ಇತಿಹಾಸ ಬರೆದ ಶಾಹೀನ್ ಕಾಲೇಜು

Last Updated 23 ಜುಲೈ 2021, 10:35 IST
ಅಕ್ಷರ ಗಾತ್ರ

ಬೀದರ್: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಇಲ್ಲಿಯ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜು ಹೊಸ ಇತಿಹಾಸ ಬರೆದಿದೆ. ಕಾಲೇಜಿನ 53 ವಿದ್ಯಾರ್ಥಿಗಳು 600ಕ್ಕೆ 600ಕ್ಕೆ ಅಂಕ ಪಡೆದು ಸಾಧನೆ ಮೆರೆದಿದ್ದಾರೆ.

ಇಲ್ಲಿಯ ಶಹಾಪುರ ಗೇಟ್ ಸಮೀಪದ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ನಡೆದ ಗರಿಷ್ಠ ಅಂಕ ಸಾಧಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಅಬ್ದುಲ್ ಖದೀರ್ ಅವರು, ಜಿಲ್ಲೆಯಲ್ಲಿ 600 ಕ್ಕೆ 600 ಅಂಕ ಪಡೆದ 54 ವಿದ್ಯಾರ್ಥಿಗಳಲ್ಲಿ ಶಾಹೀನ್ ಕಾಲೇಜಿನ 53 ಮಂದಿ ಇದ್ದಾರೆ ಎಂದು ಹೇಳಿದರು.

ಶಾಹೀನ್ ಸಂಸ್ಥೆ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಲೇ ಬಂದಿದೆ. ಈ ಹಿಂದೆ ಎಸ್ಸೆಸ್ಸೆಲ್ಸಿ ಉರ್ದು ಮಾಧ್ಯಮದಲ್ಲಿ ರಾಜ್ಯಕ್ಕೆ ಮೊದಲ ರ್‍ಯಾಂಕ್, ಸಿಇಟಿ ಪಶು ವೈದ್ಯಕೀಯ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ರ್‍ಯಾಂಕ್, ವೈದ್ಯಕೀಯ ವಿಭಾಗದಲ್ಲಿ ಮೂರನೇ ರ್‍ಯಾಂಕ್, ನೀಟ್‍ನಲ್ಲಿ 9ನೇ ಹಾಗೂ 85ನೇ ರ್‍ಯಾಂಕ್ ಗಳಿಸಿತ್ತು. ಇದೀಗ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಮೋಘ ಸಾಧನೆಗೈದು ಮತ್ತೆ ರಾಜ್ಯದ ಗಮನ ಸೆಳೆದಿದೆ ಎಂದು ತಿಳಿಸಿದರು.

22 ವರ್ಷಗಳಲ್ಲಿ ಕಾಲೇಜಿನ 1,900 ವಿದ್ಯಾರ್ಥಿಗಳು ವೈದ್ಯಕೀಯ ಸೀಟು ಪಡೆದಿದ್ದಾರೆ. ಕಳೆದ ವರ್ಷ ಕಾಲೇಜು 400 ವೈದ್ಯಕೀಯ ಸೀಟುಗಳನ್ನು ಗಳಿಸಿದ್ದು, ಈ ವರ್ಷ ಅದಕ್ಕೂ ಹೆಚ್ಚು ಸೀಟುಗಳನ್ನು ಪಡೆಯುವ ವಿಶ್ವಾಸ ಇದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ರಾಮಚಂದ್ರನ್ ಆರ್, ಸಂಸ್ಥೆಯ ನಿರ್ದೇಶಕರಾದ ಅಬ್ದುಲ್ ಹಸೀಬ್, ಅಬ್ದುಲ್ ಮುಕಿತ್, ಸಿಇಒ ತೌಸಿಫ್ ಮಡಿಕೇರಿ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಸತೀಶ್ ಪುಟ್ಟ, ಶ್ರೀನಿವಾಸ, ಆರಿಫ್, ಅಬಾಹತ್ ಅನ್ವರ್, ನದೀಮ್ ಇದ್ದರು.

ಜಿಲ್ಲೆಯ ಗೌರವ ಹೆಚ್ಚಿಸಿದ ವಿದ್ಯಾರ್ಥಿಗಳು
ಶಾಹೀನ್ ಕಾಲೇಜಿನ 53 ವಿದ್ಯಾರ್ಥಿಗಳು 600ಕ್ಕೆ 600 ಅಂಕ ಗಳಿಸಿರುವುದು ಬೀದರ್ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿದ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ನುಡಿದರು.

ಕಾಲೇಜಿನ ಉತ್ತಮ ಶೈಕ್ಷಣಿಕ ವಾತಾವರಣ, ಉಪನ್ಯಾಸಕರ ಮಾರ್ಗದರ್ಶನ, ವಿದ್ಯಾರ್ಥಿಗಳ ಶ್ರಮ ಹಾಗೂ ಪಾಲಕರ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ ಎಂದರು.

ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳು ಜೀವನದ ಪರೀಕ್ಷೆಯಲ್ಲೂ ಯಶಸ್ವಿಯಾಗಬೇಕು. ಆದರ್ಶ ಪ್ರಜೆಗಳಾಗಿ, ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕು ಎಂದು ಸಲಹೆ ಮಾಡಿದರು.

ಗರಿಷ್ಠ ಅಂಕಗಳ ಸಾಧಕರಿವರು
600ಕ್ಕೆ 600 ಅಂಕ ಪಡೆದ ಶಾಹೀನ್ ಕಾಲೇಜಿನ ವಿದ್ಯಾರ್ಥಿಗಳ ಹೆಸರು ಹೀಗಿವೆ.

ಮಹಮ್ಮದ್ ಯಾಸಿನ್ ನವಾಜ್, ಮಹಮ್ಮದ್ ಜೀಶಾನ್ ಹುಸೇನ್, ಶೇಕ್ ಮಹಮ್ಮದ್, ದಿವ್ಯ ಮೇಗೂರ, ರೋಮಾ ಶೈಲ್ವಿಯ ಮೋಹನ್, ಮಹಮ್ಮದ್ ಅನಸ್, ವಿದ್ಯಾಶ್ರೀ, ಜಾಧವ ವೇದಾಂತ, ಪ್ರಜ್ವಲ್ ಪಾಟೀಲ, ಅವಿನಾಶ, ರಫಿಯಾ ಫಾತಿಮಾ, ಪಲ್ಲವಿ, ಇಲಿಶ್, ಪೂಜಾ, ಮಹಮ್ಮದ್ ನೆಹಮುಲ್ತಾಹ, ಅಶ್ರಫ್ ನವಾಜ್, ಅಫಿಯಾ ಮೊಹಮ್ಮದಿ, ವೀರೇಶ, ಅಭಿಷೇಕ, ಎನ್. ನಿಶಾಂತ, ಮುಷ್ಕಾನ್ ಬೇಗಂ, ಸುಜಯ್ ಪಾಟೀಲ, ಮಸೂದಾ ರೋಶನ್, ಗಣೇಶ, ಎನ್.ರಾಜು, ದಾನಿಶ್ ಫಾತಿಮಾ, ಮಹೀನ್ ನೂರಿನ್, ಬಸವರಾಜ, ಸೊಪಿಸಾಬ್ ಸೊಲ್ಲಾಪುರ, ಉಝ್ಮಾ ಬೇಗಂ, ಶಹನಮ್ ಮಹಮ್ಮದ್, ಅಭಿಷೇಕ, ಮಹಮ್ಮದ್ ನಿಹಾಲ್, ವಿಶಾಲ, ನವೀನಕುಮಾರ, ಭಾರತಕುಮಾರ, ಶ್ರೀನಿವಾಸ ಮೇಟಿ, ಗುರುಪ್ರಸಾದ್ ಗುರುಬಸಪ್ಪ, ಮಹ್ಮಮದ್ ಮುಜಾಹಿದ್, ಬುಶ್ರಾ ಐಮನ್, ಸೂಫಿಯಾ ಹಸಿಮ್‍ಸಾಬ್, ಸುಪ್ರೀತ್, ಮೇಘನಾ, ಅವಿನಾಶ, ಭವಾನಿ, ಸಂಜನಾ, ಲಕ್ಷ್ಮಿ, ಆಕಾಶ, ಸಾಕ್ಷ್ಮಿ, ವೈಷ್ಣವಿ, ಚಾಂದ್‍ಪಾಶಾ ಮತ್ತು ಪ್ರಭು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT