ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ಅಗತ್ಯ

ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವ ಅಭಿಮತ
Last Updated 4 ಡಿಸೆಂಬರ್ 2019, 8:56 IST
ಅಕ್ಷರ ಗಾತ್ರ

ಚಿಟಗುಪ್ಪ: ‘ಗ್ರಾಮೀಣ ಭಾಗದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕೊಟ್ಟಲ್ಲಿ ಅವರ ಜೀವನದಲ್ಲಿ ಉನ್ನತ ಹುದ್ದೆ ಪಡೆಯಲು ಸಾಧ್ಯ’ ಎಂದು ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವ ಹೇಳಿದರು.
ತಾಲ್ಲೂಕಿನ ನಿರ್ಣಾದ ನಂದಿನಿ ವಿದ್ಯಾಲಯದಲ್ಲಿ ಸೋಮವಾರ ರಾತ್ರಿ ನಡೆದ ಮಹಾಜ್ಞಾನಿ ನಾಗಯ್ಯ ಸ್ವಾಮಿ ಅವರ 24ನೇ ಸ್ಮರಣೋತ್ಸವ, ನಂದಿನಿ ವಿದ್ಯಾಲಯದ 20ನೇ, ಅಪೆಕ್ಸ್ ನಂದಿನಿ ಆಂಗ್ಲ ಮಾಧ್ಯಮ ಶಾಲೆಯ 2ನೇ ವಾರ್ಷಿಕೋತ್ಸವ ಕಾರ್ಯಕ್ರಮಗಳದಲ್ಲಿ ಮಾತನಾಡಿದರು.

ನಂದಿನಿ ವಿದ್ಯಾಲಯದಲ್ಲಿ ಮಕ್ಕಳಿಗೆ ನೀಡುತ್ತಿರುವ ಬೋಧನೆ, ನೈತಿಕ ಶಿಕ್ಷಣ ಜವಾಬ್ದಾರಿಯುತ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಯಶಸ್ವಿಯಾಗುತ್ತಿದ್ದು, ಶ್ರದ್ಧೆ, ಭಕ್ತಿಯಿಂದ ಸೇವೆ ಸಲ್ಲಿಸಿದಲ್ಲಿ ಎಲ್ಲ ಕೆಲಸಗಳಲ್ಲಿ ಪ್ರಗತಿ ಸಾಧಿಸಲು ಸಹಕಾರಿಯಾಗುತ್ತದೆ’ ಎಂದು ಹೇಳಿದರು.

ಮಾಜಿ ಶಾಸಕ ಸುಭಾಷ ಕಲ್ಲೂರ ಮಾತನಾಡಿ,‘ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ವಾತಾವರಣ ನಿರ್ಮಿಸಿ, ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುತ್ತಿರುವ ನಂದಿನಿ ವಿದ್ಯಾಲಯದ 20 ವರ್ಷದ ಸಾಧನೆ ಎಲ್ಲರಿಗೂ ಮಾದರಿಯಾಗಿದ್ದು, ಸಮಾಜ ವಿದ್ಯಾ ಸಂಸ್ಥೆಗಳಿಗೆ ಸಹಕಾರ, ಪ್ರೋತ್ಸಾಹ ಕೊಡಬೇಕು. ಮಕ್ಕಳು ದೇಶದ ಭಾವಿ ಪ್ರಜೆಗಳಾಗಿದ್ದು, ಅವರ ಬೆಳವಣಿಗೆ ಎಲ್ಲರ ಗುರಿಯಾಗಬೇಕು’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕ ಶಿವಕುಮಾರ ಕಟ್ಟಿ ಮಾತನಾಡಿದರು.

ಮೋಟಾರು ವಾಹನ ನಿರೀಕ್ಷಕ ಎಂ.ಡಿ.ಜಾಫರ್ ಸಾದಿಕ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಜಗನ್ನಾಥ ರೆಡ್ಡಿ ಎಖ್ಖೇಳಿ ಮಾತನಾಡಿದರು.

ಗಣ್ಯರಾದ ಬಸವರಾಜ ಪವಾರ್, ರಾಜಕುಮಾರ ಹುಡಗಿ, ಬಿಜೆಪಿ ನಾಯಕ ಮಲ್ಲಿಕಾರ್ಜುನ ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ಜಗನ್ನಾಥ ರೆಡ್ಡಿ ಎಖ್ಖೇಳಿ, ಪ್ರಾಚಾರ್ಯ ಝರಣಪ್ಪ ಚಾಂಗಲೇರಾ, ಶಿಕ್ಷಕ ಲಿಂಗರಾಜ ಎಖ್ಖೇಳಿ, ಪತ್ರಪರ್ತ ಸಂಜು ಬುಕ್ಕಾ, ಭೀಮರೆಡ್ಡಿ ಆಣದೂರ, ಬ್ಯಾಂಕ್ ರಡ್ಡಿ ಹಾಗೂ ನೀಲಕಂಠ ಇಸ್ಲಾಪುರ್ ಇದ್ದರು.
ಚನ್ನಮಲ್ಲೇಶ್ವರ ತ್ಯಾಗಿ ಸಾನ್ನಿಧ್ಯ ವಹಿಸಿದ್ದರು. ಶಂಕರರಾವ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಬಿಸಲಪ್ಪ ನಿರೂಪಿಸಿದರು. ಗುರುಸ್ವಾಮಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT