ಬುಧವಾರ, ಮೇ 27, 2020
27 °C

ಮಾನವೀಯತೆ ಮೆರೆದ ಶಾಸಕ ರಹೀಂಖಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಕೋವಿಡ್ 19 ಸೋಂಕಿನ ಕಾರಣ ಬೀದರ್ ಶಾಸಕ ರಹೀಂಖಾನ್ ಅವರು ಬಡವರಿಗೆ ಆಹಾರ ಪೊಟ್ಟಣ ವಿತರಿಸಿ ಮಾನವೀಯತೆ ಮೆರೆಯುತ್ತಿದ್ದಾರೆ.

ಬೀದರ್ ನಗರದ ಎಲ್ಲ 35 ವಾರ್ಡ್ ಹಾಗೂ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಇರುವ ಕಡು ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಅವರು ಆಹಾರ ಪೊಟ್ಟಣ ವಿತರಿಸುತ್ತಿದ್ದಾರೆ. ವಾರ್ಡ್ ಹಾಗೂ ಗ್ರಾಮಗಳ ತಲಾ ಮೂವರು ಮುಖ್ಯಸ್ಥರಿಂದ ಗುರುತಿಸಲಾದ ಅರ್ಹ ಫಲಾನುಭವಿಗಳಿಗೆ ಅಕ್ಕಿ, ಬೇಳೆ, ಎಣ್ಣೆ, ಖಾರ, ಉಪ್ಪು ಮೊದಲಾದ ಅಗತ್ಯ ದಿನ ಬಳಕೆ ವಸ್ತುಗಳ ಆಹಾರ ಪೊಟ್ಟಣ ಉಚಿತವಾಗಿ ಕೊಡುತ್ತಿದ್ದಾರೆ.

‘ದೇವರು ಕೊಟ್ಟ ಸಂಪತ್ತಿನಲ್ಲಿ ಹಿಂದಿನಿಂದಲೂ ದಾನ ಧರ್ಮ ಮಾಡುತ್ತ ಬಂದಿದ್ದೇನೆ. ಅದನ್ನು ನಿರಂತರ ಮುಂದುವರಿಸಿಕೊಂಡು ಹೋಗಲಿದ್ದೇನೆ. ಈಗ ಕೋವಿಡ್‌ 19 ಸೋಂಕಿನಿಂದ ಕಷ್ಟದಲ್ಲಿರುವವರಿಗೆ ಆಹಾರ ಪೊಟ್ಟಣ ವಿತರಿಸಿ ಅಳಿಲು ಸೇವೆ ಸಲ್ಲಿಸಿದ್ದೇನೆ. ಮಾನವೀಯ ನೆಲೆಯಲ್ಲಿ ಮಾಡಬೇಕಾದ ಕೆಲಸವನ್ನು ಮಾಡಿದ್ದೇನೆ ಅಷ್ಟೇ’ ಎಂದು ರಹೀಂಖಾನ್ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.