ಬುಧವಾರ, ಮೇ 18, 2022
25 °C

ರೈಲು ಮಾರ್ಗ ವಿದ್ಯುತೀಕರಣ: ಇಂದಿನಿಂದ ಸಂಚಾರ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ವಿಕಾರಾಬಾದ್‌ನಿಂದ ಪರಳಿಯ ವರೆಗಿನ 269 ಕಿ.ಮೀ ರೈಲು ಮಾರ್ಗ ₹262.12 ಕೋಟಿ ವೆಚ್ಚದಲ್ಲಿ ವಿದ್ಯುತೀಕರಣಗೊಂಡಿದೆ’ ಎಂದು ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

‘269 ಕಿ.ಮೀ ಪೈಕಿ 105 ಕಿ.ಮೀ ವಿಕಾರಾಬಾದ್‌ನಿಂದ ಭಾಲ್ಕಿ ತಾಲ್ಲೂಕಿನ ಖಾನಾಪುರದವರೆಗೆ ವಿದ್ಯುತೀಕರಣ ಪ್ರಕ್ರಿಯೆ ಪೂರ್ಣಗೊಂಡು ರೈಲು ಪ್ರಯೋಗಿಕವಾಗಿ ಸಂಚರಿಸಿದೆ. ಈ ಮಾರ್ಗದಲ್ಲಿ ಸೋಮವಾರದಿಂದ (ಜ.24) ವಾರದಲ್ಲಿ ನಾಲ್ಕು ದಿನ ಬೀದರ್-ಯಶವಂತಪುರ (16571) ಹಾಗೂ ಯಶವಂತಪುರ-ಬೀದರ್ (16572) ನಡುವೆ ರೈಲು ಸಂಚರಿಸಲಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಬೀದರ್-ಹೈದರಾಬಾದ್ (17010), ಹೈದರಾಬಾದ್-ಬೀದರ್  ಇಂಟರ್‌ಸಿಟಿ  (17009) ಹಾಗೂ ಬೀದರ್- ಮಚಲಿಪಟ್ನಂ (12750), ಮಚಲಿಪಟ್ನಂ-ಬೀದರ್ (12749) ರೈಲುಗಳು ವಿದ್ಯುತೀಕರಣ ಮಾರ್ಗದಲ್ಲಿ ಸಂಚರಿಸಲಿವೆ’ ಎಂದು ಅವರು ತಿಳಿಸಿದ್ದಾರೆ.

‘1934ರ ಜನವರಿ 14ರಂದು ಬೀದರ್‌ನಿಂದ ವಿಕಾರಬಾದ್‌ವರೆಗೆ ಮೊದಲ ರೈಲು ಸಂಚರಿಸಿತ್ತು. 88 ವರ್ಷಗಳ ನಂತರ ವಿದ್ಯುತೀಕರಣ ಮೂಲಕ ರೈಲು ಸಂಚರಿಸಲಿದೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು