ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಆಲಿಕಲ್ಲು ಮಳೆ

Last Updated 25 ಸೆಪ್ಟೆಂಬರ್ 2018, 15:38 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯಲ್ಲಿ ಮಂಗಳವಾರ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು. ಬೀದರ್, ಹುಮನಾಬಾದ್, ಔರಾದ್‌ ಹಾಗೂ ಚಿಟಗುಪ್ಪ ತಾಲ್ಲೂಕಿನಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ.

ಬೆಳಿಗ್ಗೆಯಿಂದ ಸಂಜೆ 5 ಗಂಟೆ ವರೆಗೂ ಬಿಸಿಲು ಇತ್ತು. ಹಠಾತ್ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಜೋರಾಗಿ ಮಳೆ ಅಬ್ಬರಿಸಿತು. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸುರಿಯುವ ಮಳೆಯಲ್ಲೇ ತೊಯ್ಯಿಸಿಕೊಂಡು ಮನೆಗೆ ತೆರಳಬೇಕಾಯಿತು. ಮಕ್ಕಳು ಆಲಿಕಲ್ಲು ಆಯ್ದುಕೊಂಡು ಸಂಭ್ರಮಿಸಿದರು.

ರಸ್ತೆಯ ಮೇಲೆ ಅಪಾರ ಪ್ರಮಾಣದಲ್ಲಿ ನೀರು ನಿಂತು ಕೆಲ ಕಾಲ ವಾಹನ ಸಂಚಾರಕ್ಕೆ ತಡೆ ಉಂಟಾಯಿತು. ರೋಟರಿ ವೃತ್ತ , ಡಾ.ಅಂಬೇಡ್ಕರ್‌ ವೃತ್ತ, ಮೈಲೂರು ಕ್ರಾಸ್‌ ಹಾಗೂ ಹಾರೂರಗೇರಿ ಕ್ರಾಸ್‌ ಬಳಿ ರಸ್ತೆ ಮೇಲೆ ನೀರು ನಿಂತುಕೊಂಡಿತ್ತು. ಬೀದರ್‌ ತಾಲ್ಲೂಕಿನ ಮನ್ನಳ್ಳಿ ಹೋಬಳಿಯಲ್ಲೂ ಉತ್ತಮ ಮಳೆ ಸುರಿಯಿತು. ಬಾಡುತ್ತಿರುವ ಬೆಳೆಗೆ ಜೀವ ಕಳೆ ಬಂದಿತು. ಹಳ್ಳಿಗಳಲ್ಲಿ ನೀರು ಸಂಗ್ರಹವಾಗಿ ಕೆಸರು ಸೃಷ್ಟಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT