ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳೆ ಹಾನಿಗೆ ಪರಿಹಾರದ ಭರವಸೆ

ಬೀದರ್ ತಾಲ್ಲೂಕಿನ ವಿವಿಧೆಡೆ ಮಳೆ ಹಾನಿ ಪರಿಶೀಲಿಸಿದ ಸಚಿವ ಈಶ್ವರ ಖಂಡ್ರೆ
Published : 5 ಸೆಪ್ಟೆಂಬರ್ 2024, 16:20 IST
Last Updated : 5 ಸೆಪ್ಟೆಂಬರ್ 2024, 16:20 IST
ಫಾಲೋ ಮಾಡಿ
Comments

ಜನವಾಡ: ‘ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಬೆಳೆ ಹಾನಿಗೊಳಗಾದ ರೈತರಿಗೆ ನಿಯಮಾನುಸಾರ ಪರಿಹಾರ ಒದಗಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.

ಬೀದರ್ ತಾಲ್ಲೂಕಿನ ಚಿಮಕೋಡ್, ಮಾಳೆಗಾಂವ್ ಹಾಗೂ ಹಮಿಲಾಪುರ ಗ್ರಾಮಗಳಲ್ಲಿ ಗುರುವಾರ ಮಳೆಯಿಂದ ಹಾಳಾದ ವಿವಿಧ ಬೆಳೆ ಹಾಗೂ ಕುಸಿದ ಮನೆಗಳನ್ನು ವೀಕ್ಷಿಸಿ ಅವರು ಮಾತನಾಡಿದರು. ‘ಮಳೆಯಿಂದ ಹಾನಿಯಾದ ಜಮೀನು ಹಾಗೂ ಮನೆಗಳಿಗೆ ಎನ್.ಡಿ.ಆರ್.ಎಫ್ ಹಾಗೂ ಎಸ್.ಡಿ.ಆರ್.ಎಫ್. ನಿಯಮಗಳ ಪ್ರಕಾರ ಪರಿಹಾರ ಕೊಡಲಾಗುವುದು’ ಎಂದು ತಿಳಿಸಿದರು.

‘ಸಂಕಷ್ಟದ ಸಮಯದಲ್ಲಿ ಸರ್ಕಾರ ರೈತರೊಂದಿಗೆ ಇದೆ. ನಷ್ಟದ ಸಮಗ್ರ ಮಾಹಿತಿ ಸಂಗ್ರಹಿಸಿ ಸಂತ್ರಸ್ತರಿಗೆ ಆದಷ್ಟು ಬೇಗ ಪರಿಹಾರ ಕಲ್ಪಿಸಲು ಸೂಚಿಸಲಾಗಿದೆ’ ಎಂದು ಹೇಳಿದರು.

ಚಿಮಕೋಡ್ ಗ್ರಾಮದ ರೈತರ ಹೊಲಗಳಲ್ಲಿ ಸೋಯಾ ಅವರೆ, ತೊಗರಿ, ಹೆಸರು, ಹತ್ತಿ ಮೊದಲಾದ ಬೆಳೆಗಳಿಗೆ ಹಾನಿ ಉಂಟಾಗಿರುವುದನ್ನು ವೀಕ್ಷಿಸಿದರು. ‘ಸತತ ಮಳೆಯಿಂದಾಗಿ ಹೊಲಗಳಲ್ಲಿ ನೀರು ನಿಂತಿದೆ. ಬೆಳಿಗಳಿಗಷ್ಟೇ ಅಲ್ಲದೆ, ಜಮೀನಿಗೂ ಹಾನಿಯಾಗಿದೆ. ಕಟಾವು ಮಾಡಿದ ಉದ್ದು ಬೆಳೆ ನೀರು ಪಾಲಾಗಿವೆ’ ಎಂದು ಅನೇಕರು ಗೋಳು ತೋಡಿಕೊಂಡರು.

‘ಚಿಮಕೋಡ್ ಗ್ರಾಮದ ರೈತರ ಜಮೀನುಗಳು ಪ್ರವಾಹ ಉಂಟಾದಾಗ ಹಾನಿಗೊಳಗಾಗುತ್ತಿವೆ. ಹೀಗಾಗಿ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ’ ಎಂದು ಸಚಿವರು ಹೇಳಿದರು.

ಚಿಮಕೋಡ್- ಅಲ್ಲಾಪುರ ಮಾರ್ಗದಲ್ಲಿ ಇರುವ ಕಿರು ಸೇತುವೆ ವೀಕ್ಷಿಸಿದರು. ಹಮಿಲಾಪುರ ಗ್ರಾಮದಲ್ಲಿ ಮಳೆಯಿಂದ ಕುಸಿದು ಬಿದ್ದ ಮನೆಗಳನ್ನು ಪರಿಶೀಲಿಸಿ, ಸಂತ್ರಸ್ತರಿಗೆ ಪರಿಹಾರ ಮಂಜೂರಾತಿ ಆದೇಶ ಪ್ರತಿ ವಿತರಿಸಿದರು.

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿ.ಪಂ. ಸಿಇಒ ಡಾ.ಗಿರೀಶ್ ಬದೋಲೆ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ಬೀದರ್ ಉಪ ವಿಭಾಗಾಧಿಕಾರಿ ಸುರೇಖಾ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್ಲಾ ಕೆ, ಬೀದರ್ ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜಕುಮಾರ ಪಾಟೀಲ, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಸೂರ್ಯಕಾಂತ ಪಾಟೀಲ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT