ಬಸವಕಲ್ಯಾಣ: ತಾಲ್ಲೂಕಿನ ರಾಜೇಶ್ವರದ ಗ್ರಾಮ ಪಂಚಾಯಿತಿಯ ಎಲ್ಲ ಕಾರ್ಯಚಟುವಟಿಕೆಗಳು ಸ್ಥಗಿತಗೊಂಡಿದ್ದು ಸರ್ಕಾರದಿಂದ ಮುಖ್ಯಾಧಿಕಾರಿ ಸ್ಥಾನಕ್ಕೆ ಅಧಿಕಾರಿಯನ್ನು ನೇಮಿಸಿ ಮೇ 20ರಿಂದ ಪಟ್ಟಣ ಪಂಚಾಯಿತಿ ಕಾರ್ಯಾರಂಭಗೊಂಡಿದೆ.

ತಾಲ್ಲೂಕಿನಲ್ಲೇ ಇದು ಅತಿ ದೊಡ್ಡ ಗ್ರಾಮ. ಹುಮನಾಬಾದ್ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿದ್ದು, 32 ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಹೈದರಾಬಾದ್ ನಿಜಾಮ್ ಆಡಳಿತಕ್ಕೆ ಒಳಪಟ್ಟಿದ್ದಾಗ ಇದು ತಾಲ್ಲೂಕು (ಪಾಯಗಾ) ಕೇಂದ್ರವಾಗಿತ್ತು. ಅಂದಿನ ಕಚೇರಿ ಕಟ್ಟಡ ಮತ್ತು ಸುತ್ತಲಿನ ಕೋಟೆಯ ತಡೆಗೋಡೆಯಂಥ ಗೋಡೆ, ಕಂದಕ, ಕುದುರೆ ಕಟ್ಟುವ ಸ್ಥಳ, ಬುರುಜ್, ಹುಡೆ, ದೇವಸ್ಥಾನ, ಮಸೀದಿಯ ಅವಶೇಷಗಳು ಈಗಲೂ ನೋಡಲು ಸಿಗುತ್ತವೆ.

ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕ ಹರಡಿಕೊಂಡಿರುವ ಈ ಮಹತ್ವದ ಗ್ರಾಮಕ್ಕೆ ಪಟ್ಟಣ ಪಂಚಾಯಿತಿ ಸ್ಥಾನ ನೀಡಲು ಒತ್ತಾಯಿಸಿ ಹಲವಾರು ಬಾರಿ ಮನವಿ ಸಲ್ಲಿಸಲಾಗಿತ್ತು. ಹೋರಾಟ ನಡೆದಿತ್ತು. ಈಗಾಗಲೇ ಇಲ್ಲಿ ಹಳೆಯ ಸರ್ಕಾರಿ ಪ್ರೌಢಶಾಲೆ, ಬಸ್ ನಿಲ್ದಾಣ, ಬ್ಯಾಂಕ್, ಹೊರ ಪೊಲೀಸ್ ಠಾಣೆ ಮತ್ತಿತರೆ ಸೌಲಭ್ಯಗಳಿವೆ. ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡವೂ ಉತ್ತಮ ಸ್ಥಿತಿಯಲ್ಲಿದೆ.

‘ಗ್ರಾಮ ಪಂಚಾಯಿತಿಯಲ್ಲಿ 32 ಸದಸ್ಯರಿದ್ದರು. ಆದರೆ, ಈಗ 16 ವಾರ್ಡ್ಗಳಾಗಿ ವಿಂಗಡಿಸುವುದರಿಂದ ಅಷ್ಟೇ ಸದಸ್ಯರಿರುತ್ತಾರೆ. ಸಮೀಪದ ಮಲ್ಲಿಕಾರ್ಜುನವಾಡಿ ಕೂಡ ಈ ಪಟ್ಟಣ ಪಂಚಾಯಿತಿ ವ್ಯಾಪ್ತಿಗೊಳಪಡಿಸುವುದಕ್ಕೆ ಪ್ರಯತ್ನ ನಡೆದಿದೆ’ ಎಂದು ಮುಖ್ಯಾಧಿಕಾರಿ ಅಧಿಕಾರ ವಹಿಸಿಕೊಂಡಿರುವ ಅಶೋಕ ಚನ್ನಕೋಟೆ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-33-149007041

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.