ಔರಾದ್: ತಾಲ್ಲೂಕಿನ ಚಿಂತಾಕಿ ಬಳಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಅಟೋವನ್ನು ಪೊಲೀಸರು ಸೋಮವಾರ ಜಪ್ತಿ ಮಾಡಿಕೊಂಡಿದ್ದಾರೆ.
ಅಟೋ ಚಾಲಕ ರಘುನಾಥನನ್ನು ಬಂಧಿಸಿ ₹ 20,400 ಮೌಲ್ಯದ 6 ಕ್ವಿಂಟಲ್ ಪಡಿತರ ಅಕ್ಕಿ ಜಪ್ತಿ ಮಾಡಿಕೊಂಡಿದ್ದಾರೆ. ಪಿಎಸ್‍ಐ ಸಿದ್ಧಲಿಂಗ, ಆಹಾರ ಇಲಾಖೆ ನಿರೀಕ್ಷಕಿ ಪ್ರೇಮಲತಾ ಈ ದಾಳಿ ನಡೆಸಿದರು. ಚಿಂತಾಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.