ದೇಶ ಸೇವೆಗೂ ಮುಂದಾಗಿ: ರೇಷ್ಮಾ

ಮಂಗಳವಾರ, ಮಾರ್ಚ್ 26, 2019
29 °C

ದೇಶ ಸೇವೆಗೂ ಮುಂದಾಗಿ: ರೇಷ್ಮಾ

Published:
Updated:
Prajavani

ಬೀದರ್: ‘ವೈದ್ಯ, ಎಂಜಿನಿಯರ್ ಆಗುವುದಷ್ಟೇ ಮುಖ್ಯವಲ್ಲ. ದೇಶ ಸೇವೆಗೂ ಮುಂದಾಗಬೇಕು’ ಎಂದು ಗುರುನಾನಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ರೇಷ್ಮಾ ಕೌರ್ ಹೇಳಿದರು.

ನಗರದ ಝೀರಾ ಫಂಕ್ಷನ್ ಹಾಲ್‌ನಲ್ಲಿ ನಡೆದ ಗುರುನಾನಕ ಪಬ್ಲಿಕ್ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಂಯಮ, ಪ್ರಾಮಾಣಿಕತೆ ಹಾಗೂ ಸಹೋದರತ್ವ ಗುಣಗಳನ್ನು ರೂಢಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಸಂಸ್ಥೆಯ ಅಧ್ಯಕ್ಷ ಡಾ.ಎಸ್. ಬಲಬೀರಸಿಂಗ್, ಗುರುನಾನಕ ದೇವ್ ಎಂಜಿನಿಯರಿಂಗ್ ಕಾಲೇಜಿನ ಡಾ.ಬಿ.ಎಸ್. ಧಲಿವಾಲ್, ಗುರುನಾನಕ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯೆ ಹೇಮಾ ಸುಲ್ತಾನಪೂರೆ, ದೇವ ಶಾಲೆಯ ಪ್ರಾಚಾರ್ಯೆ ಶೇಖ ಅಮಜದ್ ಅಲಿ, ಮೈಲೂರು ಶಾಖೆಯ ಪ್ರಾಚಾರ್ಯೆ ಇನಾಯತ್ ಪಾಶಾ, ಗುರುನಾನಕ ಶಾಲೆಯ ಪ್ರಾಚಾರ್ಯೆ ಪವನಾ ಪ್ರಿಯಾ, ಮುಖ್ಯ ಶಿಕ್ಷಕಿ ಆರಿಫ್ ಹಾದಿ ಉಪಸ್ಥಿತರಿದ್ದರು.

ಶೇಕಡ 100ಕ್ಕೆ 100 ರಷ್ಟು ಹಾಜರಾತಿ ಹೊಂದಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !