ಶುಕ್ರವಾರ, ಸೆಪ್ಟೆಂಬರ್ 17, 2021
24 °C
ರಾಜೇಶ್ವರ ಶಿವಾಚಾರ್ಯರು ಮೇಹಕರ್ ಕಟ್ಟಿಮಠದ ಪೀಠಾಧಿಪತಿ

ಧರ್ಮ ಆಚರಣೆಯ ಮಾಸ ಶ್ರಾವಣ

ಶ್ರಾವಣ ಸಂದೇಶ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ವಂದರೆ ಮಾಸತ್ರವಣಿಯ(ಸಂಸ್ಕೃತ) ಅಂದರೆ ಒಂದು ತಿಂಗಳ ಪರ್ಯಂತ ಧಾರ್ಮಿಕ ವಿಚಾರ ಚಿಂತನೆಗಳು ಜೀವನದಲ್ಲಿ ಆಚರಣೆ ಮಾಡುವುದೇ ಭಾರತೀಯ ಸಂಸ್ಕೃತಿಯಲ್ಲಿ ಶ್ರಾವಣ ಮಾಸಕ್ಕೆ ಧರ್ಮ ಆಚರಣೆ ಮಾಸ ಎಂದು ಹೇಳುತ್ತಾರೆ.
ಧರ್ಮ ಆಚರಣೆವೆಂದರೆ ತಾನು ಹಾಗೂ ತನ್ನ ಜೊತೆ ಪ್ರಕೃತಿಯ ಸಂರಕ್ಷಣೆ ಮಾಡುವುದೇ ಧರ್ಮ, ಪ್ರಪಂಚದ ಪ್ರತಿಯೊಂದು ಜೀವಿಯ ಮನಸ್ಸಿನಲ್ಲಿ ತಾನು ಸುಖದಿಂದ ಬದುಕಬೇಕೆಂಬ ಅಪೇಕ್ಷೆ ಇರುತ್ತದೆ ಆದರೆ ನಾನು ಸುಖದಿಂದ ಬದುಕಬೇಕೆಂದರೆ ನನ್ನ ಸುತ್ತಲಿನ ಪರಿಸರವು ಕೂಡ ಸುಖದಿಂದ ಇದ್ದಾಗ ಮಾತ್ರ ನಾನು ಸುಖದಿಂದ ಬದುಕ ಬೇಲ್ಲೇನು ಇಂತಹ ತಳಹಾದಿಯ ಮೇಲೆ ಜಗತ್ತಿಗೆ ಹಾಗೂ ರಾಷ್ಟ್ರಕ್ಕೆ ಬದುಕಿನ ಶೈಲಿಯನ್ನು ಕೊಟ್ಟಂತ ಸಂಸ್ಕೃತಿ ಭಾರತದ ಸಂಸ್ಕೃತಿ.
ಸರ್ವೇ ಜನ ಸುಖಿನೋ ಭವಂತು ಸರ್ವೇ ಭದ್ರಾಣಿ ಪಶಂತು ಮಾಕಶ್ಚಿತ ದುಃಖ ಭಾಗ ಭವೇ(ಎಲ್ಲರೂ ಸುಖದಿಂದ ಬದುಕಬೇಕು,ಆರ್ಥಿಕ,ಸಾಮಾಜಿಕ, ಧಾರ್ಮಿಕ ಹಾಗೂ ವ್ಯಾವಹಾರಿಕವಾಗಿ ಸಂಪನ್ನವಾಗುವದೇ ಭದ್ರ ಪದದ ಅರ್ಥ ,ಮನುಷ್ಯನ ಮನಸ್ಸಿನ ವಿರೋಧ ವೃತ್ತಿಯೇ ದುಃಖ ಅಂತಹ ವಿರೋಧ ಪ್ರಕ್ರಿಯೆಯನ್ನು ನಿರ್ನಾಮ ಮಾಡುವ ಪ್ರಕ್ರಿಯೆಯೇ ಶ್ರಾವಣ ಮಾಸದ ಪೂಜಾ,ವ್ರತ,ಧಾರ್ಮಿಕ ಪ್ರವಚನ ಇತ್ಯಾದಿಗಳು ಇದಕ್ಕೆ ಪೂರಕವಾಗಿವೆ.

ನಾಗರ ಪಂಚಮಿ, ಶ್ರೀ ಮಹಾಲಕ್ಸ್ಮಿ ವ್ರತ ಹೀಗೆ ಅನಂತ ಪೂಜೆಗಳು ಶ್ರಾವಣ ಮಾಸದಲ್ಲಿ ಬರುತ್ತವೆ ಇವೆಲ್ಲವೂ ಅಂಧಶ್ರದ್ಧೆಯಲ್ಲ, ಪ್ರಕೃತಿಯನ್ನು ಪೂಜಿಸುವ ಗೌರವಿಸುವ ಪ್ರಕ್ರಿಯೆ. ಪ್ರಕೃತಿಯನ್ನು ಪ್ರೀತಿಸದಿದ್ದರೆ ಅದು ನಮ್ಮನ್ನು ಸಂರಕ್ಷಣೆ ಮಾಡುವುದಿಲ್ಲ ಹೀಗಾಗಿ ಈ ಮಾಸದಲ್ಲಿ ಮಣ್ಣು ,ಭೂಮಿ,ನದಿ,ಕೆರೆ,ಬಾವಿ,ವೃಕ್ಷ ವನಸ್ಪತಿ, ಇವೆಲ್ಲವುಗಳನ್ನು ಪೂಜಿಸುವದರೊಂದಿಗೆ ಶಂಕರನ್ನ ಕಂಡಂತ ದೇಶ ಇದು ಇಂದು ಭೂಮಿಗೆ,ಭೌಗೋಳಿಕ ಭೂ ಖಂಡದಲ್ಲಿ ಆಚರಿಸಿ ಅನುಭವಿಸುವ ಭಾವ ಸಂಗಮದ ಕ್ಷೇತ್ರವೆ ಭಾರತ ಈಗಾಗಿ ಭಾರತದಲ್ಲಿ ಶ್ರಾವಣ ಮಾಸಕ್ಕೆ ಇಷ್ಟೊಂದು ಮಹತ್ವವಿದೆ ಆ ಶ್ರವಣ ಶಕ್ತಿಯೇ ಮನುಷ್ಯನ ಜ್ಞಾನ ಶಕ್ತಿ ವಿಕಾಸಕ್ಕೆ ಕಾರಣವಾಗಿದೆ ಹೀಗಾಗಿ ಧರ್ಮ ಆಚರಣೆ, ಧಾರ್ಮಿಕ ಶ್ರವಣ ಅದನ್ನು ಮನನ ಮಾಡಿ ಆಚರಣೆ ಆದಿಗಳನ್ನು ಮಾಡುವುದೇ ಈ ಮನುಷ್ಯನ ಪರಿಪೂರ್ಣತೆಯ ಜೀವನದ ಗುಟ್ಟಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು