ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಪತ್ತಿಗಿಂತ ಸಮಾಧಾನದ ಬದುಕು ಲೇಸು’

Last Updated 13 ಮೇ 2022, 2:17 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಭಾಲ್ಕಿ: ‘ನೆಮ್ಮದಿಯ ಜೀವನ ಸಾಗಿಸಲು ಸಂಪತ್ತಿಗಿಂತ ಸಮಾಧಾನ, ಶಾಂತಿ ಮುಖ್ಯ’ ಎಂದು ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

ತಾಲ್ಲೂಕಿನ ಉಚ್ಚಾ ಗ್ರಾಮದಲ್ಲಿ ದಿವ್ಯಯೋಗಿ ಶ್ರೀ ಕಂಠಯ್ಯ ಸ್ವಾಮೀಜಿ 95ನೇ ಜಯಂತಿ ಮಹೋತ್ಸವ, ಮಾತೆ ಮಲ್ಲಮ್ಮ ನಾಗನಕೇರೆ ಅಮ್ಮನವರ ಅನುಷ್ಠಾನ ಮಂಗಲ, ಆಶೀರ್ವಾದ ಮೆಡಿಕಲ್ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮುಖದಲ್ಲಿ ನಗು, ವಿಧೇಯತೆ ಇಲ್ಲದಿದ್ದರೆ ನಮ್ಮಲ್ಲಿ ಎಷ್ಟೇ ಬೆಳ್ಳಿ, ಬಂಗಾರ ಇದ್ದರು ಪ್ರಯೋಜನವಿಲ್ಲ. ಪ್ರತಿಯೊಬ್ಬರ ಬದುಕಿನಲ್ಲೂ ಕಷ್ಟ-ಸುಖ, ನೋವು, ನಲಿವು ಬರುತ್ತವೆ. ಎಲ್ಲವನ್ನು ಸಮಾಧಾನದಿಂದ, ಸಮಚಿತ್ತದಿಂದ ಸ್ವೀಕರಿಸಬೇಕು ಎಂದು ಹೇಳಿದರು.

ಮಾತೆ ನೀಲಾಂಬಿಕೆ ತಾಯಿ ಜಾಮನಗರ, ಮಾತೆ ಮಲ್ಲಮ್ಮ ತಾಯಿ ನಾಗನಕೆರೆ, ವೈಜಿನಾಥ ಮಹಾರಾಜರು, ಬಸವರಾಜ ವಾರದ, ಮಲ್ಲಪ್ಪಾ ಅಳ್ಳೆ, ಪ್ರಭು ಪಾಟೀಲ ಸಂಕಣ್ಣ, ಶಿವಕುಮಾರ ಸ್ವಾಮಿ, ಬಾಬುರಾವ್ ಹಳನೂರೆ, ಅರ್ಜುನ ಕಾಳೆ, ಪಪ್ಪುಲಾಲ್ ಹಜಾರಿ, ಬಸವರಾಜ ಬಿರಾದಾರ, ಚನ್ನಪ್ಪ ಬರದಾಪುರೆ, ಯುವರಾಜ ಅಳ್ಳೆ, ಧನರಾಜ ಅಳ್ಳೆ, ರಾಜಕುಮಾರ ಪಾಟೀಲ ಸಂಕಣ್ಣಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT