‘ರುದ್ರಾಕ್ಷಿ ಧಾರಣೆಯಿಂದ ಪಾಪ ಪರಿಹಾರ’

ಭಾಲ್ಕಿ: ‘ರುದ್ರಾಕ್ಷಿ ಧರಿಸಿ ಸ್ನಾನ ಮಾಡುವುದರಿಂದ ಮೂರು ಜನ್ಮಗಳ ಪಾಪ ಪರಿಹಾರವಾಗುತ್ತದೆ’ ಎಂದು ಹಲಬರ್ಗಾ-ಶಿವಣಿ-ಹೈದರಾಬಾದ್ ಮಠದ ಹಾವಗಿಲಿಂಗೇಶ್ವರ ಶಿವಾಚಾರ್ಯ ಹೇಳಿದರು.
ತಾಲ್ಲೂಕಿನ ಬೀರಿ(ಕೆ) ಗ್ರಾಮದಲ್ಲಿ ರಾಮಲಿಂಗೇಶ್ವರ ಜಾತ್ರೆ ನಿಮಿತ್ತ ಆಯೋಜಿಸಿದ್ದ ಜೀವನ ದರ್ಶನ ಪ್ರವಚನ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಕಂಠದಲ್ಲಿ ರುದ್ರಾಕ್ಷಿ ಧರಿಸುವವರು ರುದ್ರ ಅವತಾರಿ ಹಾಗೂ ಪರಮಾತ್ಮನ ಸ್ವರೂಪಿ ಆಗುತ್ತಾರೆ. ತ್ರಿಪುರಾಸುರ ರಾಕ್ಷಸನ ಸಂಹಾರದ ಸಂದರ್ಭದಲ್ಲಿ ಭಗವಂತನ ಮೂರು ಕಣ್ಣುಗಳಿಂದ ಚಿಮ್ಮಿದ ಹನಿಗಳಿಂದ ಸೃಷ್ಟಿಯಾದ ರುದ್ರಾಕ್ಷಿ ಸರ್ವಶ್ರೇಷ್ಠವಾಗಿದೆ. ಕೊನೆಗೆ ನಮ್ಮೊಂದಿಗೆ ಬರುವುದು ಲಿಂಗ, ರುದ್ರಾಕ್ಷಿ ಹಾಗೂ ವಿಭೂತಿಗಳು ಮಾತ್ರ ಎಂದು.
ಪ್ರಮುಖರಾದ ಶರಣಪ್ಪ ಪಾಟೀಲ, ಸಂತೋಷ ಪಾಟೀಲ ಮತ್ತಿತರರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.