ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ಗಣರಾಜ್ಯೋತ್ಸವ ಸಂಭ್ರಮ

Last Updated 26 ಜನವರಿ 2022, 15:12 IST
ಅಕ್ಷರ ಗಾತ್ರ

ಬೀದರ್: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾಂಗ್ರೆಸ್ ಕಚೇರಿ: ನಗರದ ಶಿವನಗರದಲ್ಲಿನ ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಶಾಸಕ ರಹೀಂಖಾನ್, ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ರಾಜ್ಯ ರಸ್ತೆ ಸಾರಿಗೆ ನಿಗಮದ ಮಾಜಿ ಉಪಾಧ್ಯಕ್ಷ ಬಸವರಾಜ ಬುಳ್ಳಾ, ಕರ್ನಾಟಕ ದಾಕ್ಷಾರಸ ಮಂಡಳಿ ಮಾಜಿ ಅಧ್ಯಕ್ಷ ಬಕ್ಕಪ್ಪ ಕೋಟೆ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ರೋಹಿದಾಸ್ ಘೋಡೆ, ಕಾಂಗ್ರೆಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಶರಣಪ್ಪ ಬಲ್ಲೂರ, ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ವಕ್ತಾರ ರಾಜಶೇಖರ ಪಾಟೀಲ ಅಷ್ಟೂರ, ಇತರ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ರೆಡ್ಡಿ ಚಿಟ್ಟಾ, ಮುಖಂಡರಾದ ಶಿವರಾಜ ಹಾಸನಕರ್, ನಿಸಾರ್ ಅಹಮ್ಮದ್, ಅಬ್ದುಲ್ ಮನ್ನಾನ್ ಸೇಠ್, ಸಂಜಯ ಜಾಗೀರದಾರ್, ಡಿ.ಕೆ. ಸಂಜುಕುಮಾರ, ಅಝರ್ ರೆಹಾನ್, ಶರಣಪ್ಪ ಶರ್ಮಾ, ಪ್ರಶಾಂತ ದೊಡ್ಡಿ, ಮೋಹನ್ ಕಾಳೇಕರ್, ಧನರಾಜ ಹಂಗರಗಿ, ಖದೀರ್, ಮೆಹಮೂದ್ ಖಾನ್, ಷನ್ಮುಕಪ್ಪ ಪಸರಗಿ, ಶ್ರೀನಿವಾಸ ರೆಡ್ಡಿ ಇದ್ದರು.

ಡಿಸಿಸಿ ಬ್ಯಾಂಕ್:

ನಗರದ ಡಿಸಿಸಿ ಬ್ಯಾಂಕ್ ಕಚೇರಿಯಲ್ಲಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ನಿರ್ದೇಶಕರಾದ ಪರಮೇಶ್ವರ ಮುಗಟೆ, ಸಂಗಮೇಶ ಪಾಟೀಲ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಲ್ಲಿಕಾರ್ಜುನ ಮಹಾಜನ್, ಪ್ರಧಾನ ವ್ಯವಸ್ಥಾಪಕರಾದ ವಿಠ್ಠಲರೆಡ್ಡಿ ಯಡಮಲ್ಲೆ, ಚನ್ನಬಸಯ್ಯ ಸ್ವಾಮಿ, ಎನ್‍ಎಸ್‍ಎಸ್‍ಕೆ ಉಪಾಧ್ಯಕ್ಷ ಬಾಲಾಜಿ ಚವಾಣ್, ನಿರ್ದೇಶಕ ಝರೆಪ್ಪ ಮಮದಾಪುರೆ, ಸಹಾರ್ದ ತರಬೇತಿ ಕೇಂದ್ರದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು, ವಿಜಯಕುಮಾರ ಹೂಗಾರ ಇದ್ದರು.

ವಿಕಾಸ ಬ್ಯಾಂಕ್: ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಆಡಳಿತದ ವತಿಯಿಂದ ಬುಧವಾರ 73ನೇ ಗಣರಾಜ್ಯೋತ್ಸವ ಆಚರಿಸಲಾಯಿತು.

ಹಿಂದಿನ ಬೀದರ್ ಮಹಿಳಾ ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕರಾಗಿದ್ದ ಸ್ವರೂಪಾರಾಣಿ, ಜಯಶ್ರೀ ಮೆಟಗೆ, ಸುನೀತಾ ಸಾಲಿ, ಸಮನ್ವಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಶಿವಕುಮಾರ ಶೆಟಟಕರ್, ವಿಕಾಸ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಅಶ್ವಿನಿ ದೇಸಾಯಿ, ಶಾಖಾ ವ್ಯವಸ್ಥಾಪಕ ಗಣೇಶ್ ಇದ್ದರು.

ಬೀದರ್ ವಾಣಿಜ್ಯ ಸಂಸ್ಥೆ:

ನಗರದ ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಸೋಮಶೇಖರ ಪಾಟೀಲ ಧ್ವಜಾರೋಹಣ ನೆರವೇರಿಸಿದರು. ಕಾರ್ಯದರ್ಶಿ ಡಾ. ವೀರೇಂದ್ರ ಶಾಸ್ತ್ರಿ, ಜಂಟಿ ಕಾರ್ಯದರ್ಶಿ ರಾಜಶೇಖರ ಮಿಟಕಾರಿ, ಕಂಟೆಪ್ಪ ಪಾಟೀಲ, ವೀರಕುಮಾರ ಮಜಗೆ ಇದ್ದರು.

ವಿದ್ಯಾರಣ್ಯ ಪ್ರೌಢಶಾಲೆ:

ನಗರದ ವಿದ್ಯಾರಣ್ಯ ಪ್ರೌಢಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಹ ಶಿಕ್ಷಕ ಬಾಲಾಜಿ ರಾಠೋಡ್ ಮಾತನಾಡಿದರು.
ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಉಪಾಧ್ಯಕ್ಷ ನಾಗೇಶ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಸದಸ್ಯ ಶಿವರಾಜ ಹಲಶೆಟ್ಟಿ, ಪ್ರಾಚಾರ್ಯ ವಿಶ್ವನಾಥ ಹುಲಸೂರೆ, ವಿದ್ಯಾರಣ್ಯ ಪ್ರೌಢಶಾಲೆ ಮುಖ್ಯಶಿಕ್ಷಕಿ ಪ್ರತಿಭಾ ಚಾಮಾ, ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ವಿಜಯಕುಮಾರ ಕರಂಜಿ ಇದ್ದರು. ಶಿವಪುತ್ರ ನೇಳಗೆ ನಿರೂಪಿಸಿದರು. ಸಂಗೀತಾ ಘೂಳೆ ಸ್ವಾಗತಿಸಿದರು. ತುಕಾರಾಮ ಮೇತ್ರೆ ವಂದಿಸಿದರು.

ಕಲ್ಯಾಣ ಸಹಕಾರಿ:

ನಗರದ ಕಲ್ಯಾಣ ಪತ್ತಿನ ಸೌಹಾರ್ದ ಸಹಕಾರಿಯಲ್ಲಿ ಸಹಕಾರಿಯ ಅಧ್ಯಕ್ಷ ಗುರುನಾಥ ಜ್ಯಾಂತಿಕರ್ ರಾಷ್ಟ್ರ ಧ್ವಜಾರೋಹಣ ಮಾಡಿದರು. ನಿವೃತ್ತ ಸರ್ಕಾರಿ ಅಭಿಯೋಜಕರಾದ ರಾಮಸಿಂಗ್ ರಾಠೋಡ್, ಭೀಮಾಶಂಕರ ಅಂಬಲಗಿ, ಮಾನಶೆಟ್ಟಿ ಬೆಳಕೆರೆ, ರಾಜಕುಮಾರ ಧುಮ್ಮನಸೂರೆ, ರಾಜು ಬೇಮಳಖೇಡಕರ್, ಶಿವರಾಜ ಹುಡೇದ್, ಶಿವರಾಜ ಹೂಗಾರ, ಅನಿಲಕುಮಾರ ಕೊಡಂಬಲ, ಶಿವಾನಂದ ಇದ್ದರು.

ಗ್ಲೊಬಲ್ ಸೈನಿಕ ಅಕಾಡೆಮಿ:

ಸಂಸ್ಥೆಯ ಅಧ್ಯಕ್ಷ ನಿವೃತ್ತ ಕರ್ನಲ್ ಶರಣಪ್ಪ ಸಿಕೇನಪುರೆ ರಾಷ್ಟ್ರ ಧ್ವಜಾರೋಹಣ ಮಾಡಿದರು. ಡಾ. ಶರಣ ಬುಳ್ಳಾ, ಶುಭಾಂಗಿ ಸಾಯಿಗಾವ್ಕರ್ ಮಾತನಾಡಿದರು. ನಿರ್ದೇಶಕರಾದ ಡಾ. ರಘು ಕೃಷ್ಣಮೂರ್ತಿ, ಕೆ.ಕೆ. ಅಟ್ಟಲ್, ಮುಖ್ಯಶಿಕ್ಷಕ ಪೃಥ್ವಿರಾಜ್, ಕಾರಂಜಿ ಸ್ವಾಮಿ ಇದ್ದರು. ವಿಜಯಕುಮಾರ ಸ್ವಾಗತಿಸಿದರು. ಸಭಾ ಶೇಕ್ ನಿರೂಪಿಸಿದರು.

ಸಹಕಾರಿಗಳ ಒಕ್ಕೂಟ:

ಜಿಲ್ಲಾ ಸಹಾರ್ದ ಸಹಕಾರಿಗಳ ಒಕ್ಕೂಟದ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷ ಗುರುನಾಥ ಜ್ಯಾಂತಿಕರ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

ರಾಮಸಿಂಗ್ ರಾಠೋಡ್, ಭೀಮಾಶಂಕರ ಅಂಬಲಗಿ, ಮಾನಶೆಟ್ಟಿ ಬೆಳಕೇರಿ, ಶಿವಬಸಪ್ಪ ಚನ್ನಮಲ್ಲೆ, ಸಂಜಯ ಕ್ಯಾಸಾ, ಶ್ರೀಕಾಂತ ಸ್ವಾಮಿ ಸೋಲಪುರ, ಅಣ್ಣಾರಾವ್ ನಾವದಗೇರಿ, ಮಹೇಶ್ವರ ಸ್ವಾಮಿ, ಶ್ರೀಕಾಂತ ಮೋದಿ, ರಾಜಕಮಾರ ಚಟ್ನಳ್ಳಿ, ಕುಬೇರಪ್ಪ, ರತ್ನಸಾಗರ, ಅಮೃತ ಹೊಸಮನಿ ಇದ್ದರು.

ಮಹಾತ್ಮ ಬೊಮ್ಮಗೊಂಡೇಶ್ವರ ಶಿಕ್ಷಣ ಸಂಸ್ಥೆ:

ನಗರದ ಮಹಾತ್ಮ ಬೊಮ್ಮಗೊಂಡೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಕವಿರತ್ನ ಕಾಳಿದಾಸ ಪದವಿ ಕಾಲೇಜು, ಡಿ. ದೇವರಾಜ ಅರಸು ಶಿಕ್ಷಕರ ತರಬೇತಿ ಕೇಂದ್ರ, ಮಾತೋಶ್ರೀ ಅಹಿಲ್ಯಾಬಾಯಿ ಹೋಳ್ಕರ್ ಪ್ರೌಢಶಾಲೆ ಹಾಗೂ ಏಕಲವ್ಯ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಗಣರಾಜ್ಯೋತ್ಸವ ಆಚರಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಅಮೃತರಾವ್ ಚಿಮಕೋಡೆ ರಾಷ್ಟ್ರ ಧ್ವಜಾರೋಹಣ ಮಾಡಿದರು. ವಿದ್ಯಾರ್ಥಿಗಳು, ಸಂಸ್ಥೆಯ ಬೋಧಕ, ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.

ಜಗಜೀವನರಾಂ ಭವನ:

ನಗರದ ಶಹಾಗಂಜ್‍ನಲ್ಲಿ ಇರುವ ಬಾಬು ಜಗಜೀವನರಾಂ ಭವನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರತಿಕಾಂತ ಸ್ವಾಮಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

ಜೆಡಿಎಸ್ ಜಿಲ್ಲಾ ವಿದ್ಯಾರ್ಥಿ ಘಟಕದ ಅಧ್ಯಕ್ಷ ಅಭಿ ಕಾಳೆ, ಅರುಣಕುಮಾರ ವರ್ಮಾ, ಜಿ.ಎಂ. ಕ್ರಿಸ್ಟೋಫರ್, ಶಿವಕುಮಾರ ಇದ್ದರು.

ಜೆಡಿಎಸ್ ಕಚೇರಿ:

ನಗರದ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ ಧ್ವಜಾರೋಹಣ ಮಾಡಿದರು.
ಶಾಸಕ ಬಂಡೆಪ್ಪ ಕಾಶೆಂಪೂರ್ ಮಾತನಾಡಿದರು. ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅಶೋಕ ಕೋಡಗೆ, ಮುಖಂಡರಾದ ದೇವೇಂದ್ರ ಸೋನಿ, ಅಶೋಕಕುಮಾರ ಕರಂಜಿ, ಬಸವರಾಜ ಪಾಟೀಲ ಹಾರೂರಗೇರಿ, ರಾಜಶೇಖರ ಜವಳೆ, ನಬಿ ಖುರೇಶಿ, ಎಂ.ಡಿ. ಅಸಾದ್, ಅಭಿ ಕಾಳೆ, ಶಿವಪುತ್ರ ಮಾಳಗೆ, ಸುಂದರರಾಜ, ಮನೋಹರ ದಂಡೆ, ಬೊಮ್ಮಗೊಂಡ ಚಿಟ್ಟಾ ಇದ್ದರು.

ಜನವಾಡ:

ಬೀದರ್ ತಾಲ್ಲೂಕಿನ ಜನವಾಡ ಸಮೀಪದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ, ಕಾರ್ಖಾನೆ ಉಪಾಧ್ಯಕ್ಷ ಬಾಲಾಜಿ ಚವಾಣ್, ನಿರ್ದೇಶಕರಾದ ಝರೆಪ್ಪ ಮಮದಾಪುರ, ರಾಜಕುಮಾರ ಕರಂಜಿ, ಶಿವಬಸಪ್ಪ ಚನ್ನಮಲ್ಲೆ, ಶಶಿಕುಮಾರ ಪಾಟೀಲ ಸಂಗಮ, ವೀರಶೆಟ್ಟಿ ಪಟ್ನೆ, ಸೀತಾರಾಮ ರಾಠೋಡ್, ಶೋಭಾವತಿ ಪಾಟೀಲ, ಸಿದ್ರಾಮ ವಾಘಮಾರೆ, ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್. ಅಪರಂಜಿ, ಸೋಮಶೇಖರ ಪಾಟೀಲ, ಹಾವಗಿರಾವ್ ಬಿರಾದಾರ, ಲೋಕೇಶ, ಅರುಣಕುಮಾರ, ವಿಜಯಕುಮಾರ ಹೂಗಾರ, ಜುಬೇರ್ ದಯಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT