ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಸುರಕ್ಷತೆ ಜಾಗೃತಿ ಕಾರ್ಯಕ್ರಮ

Last Updated 14 ಫೆಬ್ರುವರಿ 2021, 12:35 IST
ಅಕ್ಷರ ಗಾತ್ರ

ಬೀದರ್: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಇಲ್ಲಿಯ ಘಟಕ 1 ರಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಪ್ರಯುಕ್ತ ರಸ್ತೆ ಸುರಕ್ಷತಾ ನಿಯಮಗಳ ಜಾಗೃತಿ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಕಾಂತ ಫುಲೇಕರ್ ಉದ್ಘಾಟಿಸಿದರು. ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಶಂಕರ, ಸಿಪಿಐ ವಿಜಯಕುಮಾರ ಬಿರಾದಾರ, ಡಾ. ಇಮ್ರಾನ್ ಉಲ್ ಹಕ್, ಸಂಚಾರ ಅಧಿಕಾರಿ ಆರ್.ಬಿ. ಜಾಧವ್, ಸಂಚಾರ ಪಿಎಸ್‍ಐ ಮೇಟಿ, ಪ್ರಶಾಂತ ಸುರಪುರಕರ್, ಮಹಾದೇವಪ್ಪ ಉಪ್ಪಿನ್, ಬಸವಂತಪ್ಪ, ಮಲ್ಲಿಕಾರ್ಜುನ ಬೋರಾಳರೆಡ್ಡಿ, ಮಲ್ಲಿನಾಥ ಸುರಂಬಿಕರ್, ರಾಜಶೇಖರ ತಳಘಟಕರ್ ಇದ್ದರು.

ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತೆ ನಿಯಮ, ಇಂಧನ ಉಳಿತಾಯ ಕುರಿತು ಅರಿವು ಮೂಡಿಸಲಾಯಿತು. ಭಾಲ್ಕೆ ವೈದೇಹಿ ಆಸ್ಪತ್ರೆಯ ಡಾ. ಸೋಮಶೇಖರ ಭಾಲ್ಕೆ ಅವರು ಉಚಿತ ಆರೋಗ್ಯ ತಪಾಸಣೆ ನಡೆಸಿದರು. ಹಣಮಂತ ಟಿ. ಮಾಳಗೆ ನಿರೂಪಿಸಿದರು. ಬೀರಪ್ಪ ಮೇತ್ರೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT