ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ನಾಗಮಾರಪಳ್ಳಿ ಆಸ್ಪತ್ರೆಗೆ ₹66 ಲಕ್ಷ ಲಾಭ

ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿಕೆ
Last Updated 16 ಡಿಸೆಂಬರ್ 2020, 16:12 IST
ಅಕ್ಷರ ಗಾತ್ರ

ಬೀದರ್: ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆಯು 2019-20ನೇ ಸಾಲಿನಲ್ಲಿ ₹66 ಲಕ್ಷ ಲಾಭ ಗಳಿಸಿದೆ ಎಂದು ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ತಿಳಿಸಿದರು.

ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಬುಧವಾರ ನಡೆದ ಆಸ್ಪತ್ರೆಯ ಏಳನೇ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‌ಮಾರ್ಚ್ 31ರ ಅಂತ್ಯಕ್ಕೆ 13,908 ಒಪಿಡಿ, 3,798 ಐಪಿಡಿ, 489 ಶಸ್ತ್ರಚಿಕಿತ್ಸೆ, 2,052 ಎಂಆರ್‍ಐ, 1,331 ಸಿಟಿ ಸ್ಕ್ಯಾನ್, 1,724 ಎಕ್ಸ್‌ರೆ, 2,629 ಯುಎಸ್‍ಜಿ, 31 ಡಿ ಇಕೊ ಹಾಗೂ 518 ಇಸಿಜಿಗಳನ್ನು ಮಾಡಲಾಗಿದೆ ಎಂದು ಹೇಳಿದರು.

ಅತ್ಯಾಧುನಿಕ ಸೌಕರ್ಯ ಹೊಂದಿರುವ ಆಸ್ಪತ್ರೆಯಲ್ಲಿ ಎಲ್ಲ ಬಗೆಯ ವೈದ್ಯಕೀಯ ಸೇವೆ ಒದಗಿಸುತ್ತಿರುವ ಕಾರಣ ಚಿಕಿತ್ಸೆಗಾಗಿ ಬೆಂಗಳೂರು, ಹೈದರಾಬಾದ್ ಹಾಗೂ ಸೊಲ್ಲಾಪುರಕ್ಕೆ ಹೋಗುವ ಜಿಲ್ಲೆಯ ರೋಗಿಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂದರು.

ಜಿಲ್ಲೆಯ ಜನರಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸಲು ಗುರುಪಾದಪ್ಪ ನಾಗಮಾರಪಳ್ಳಿ ಅವರು ₹12 ಕೋಟಿ ವೆಚ್ಚದಲ್ಲಿ ನಗರದಲ್ಲಿ ಆರಂಭಿಸಿದ ರಾಜ್ಯದ ಮೊದಲ ಸಹಕಾರ ಆಸ್ಪತ್ರೆಯನ್ನು ಅವರ ಆಶಯಕ್ಕೆ ಅನುಗುಣವಾಗಿ ಮುನ್ನಡೆಸಿಕೊಂಡು ಹೋಗಲಾಗುತ್ತಿದೆ ಎಂದು ಹೇಳಿದರು.

ಶಸ್ತ್ರಚಿಕಿತ್ಸೆ ಮೂಲಕ ಒಂದರಲ್ಲೇ ಇದ್ದ ಅನ್ನನಾಳ ಹಾಗೂ ಶ್ವಾಸಕೋಶದ ನಾಳಗಳನ್ನು ಬೇರ್ಪಡಿಸಿ ಮಗುವೊಂದರ ಪ್ರಾಣ ರಕ್ಷಿಸಲಾಗಿದೆ. ದೇಹದಿಂದ ಸಂಪೂರ್ಣ ಹೊರಗಿದ್ದ ಮಗುವಿನ ಮೂತ್ರ ಚೀಲವನ್ನು ದೇಹದೊಳಗೆ ಅಳವಡಿಸುವ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಗಿದೆ. ಜನಿಸುವಾಗಲೇ ತಲೆ ಭಾಗದಲ್ಲಿದ್ದ ಮಗುವೊಂದರ ರಕ್ತನಾಳದ ದೊಡ್ಡ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗಿದೆ. ಮೆದುಳಿನ ಭಾಗದಲ್ಲಿ ನೀರು ಹೋಗುವ ನಾಳ ಇಲ್ಲದೆ ಜನಿಸಿದ ಮಗುವೊಂದಕ್ಕೆ ಶಸ್ತ್ರಚಿಕಿತ್ಸೆ ಮೂಲಕ ಹೊಸ ನಾಳ ಅಳವಡಿಸಲಾಗಿದೆ. ಆಸ್ಪತ್ರೆಯಲ್ಲಿ ಹಲವು ಮಹತ್ವದ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ ಎಂದು ವಿವರಿಸಿದರು.

350 ಹಾಸಿಗೆಗಳ ಆಸ್ಪತ್ರೆ ಜತೆಗೆ ವೈದ್ಯಕೀಯ ಕಾಲೇಜು ಆರಂಭಿಸುವ ದಿಸೆಯಲ್ಲಿ ಲಾಲ್‍ಬಾಗ್ ಸಮೀಪ ₹4 ಕೋಟಿ ವೆಚ್ಚದಲ್ಲಿ ಖರೀದಿಸಲಾದ 70 ಎಕರೆ 18 ಗುಂಟೆ ಜಮೀನಿನ ಪೈಕಿ ಈಗಾಗಲೇ ಆಸ್ಪತ್ರೆ ಹೆಸರಲ್ಲಿ 64 ಎಕರೆ 24 ಗುಂಟೆಯ ಕ್ರಯಪತ್ರ ಆಗಿದೆ. ಜಮೀನನ್ನು ಕೃಷಿಯೇತರ ಆಗಿ ಕೂಡ ಪರಿವರ್ತನೆ ಮಾಡಿಕೊಳ್ಳಲಾಗಿದೆ. ಸುತ್ತುಗೋಡೆ ನಿರ್ಮಿಸಲು ಜಮೀನಿನ ಸುತ್ತ ಆರ್‌ಸಿಸಿ ಪಿಲ್ಲರ್‌ಗಳನ್ನು ಹಾಕಲಾಗಿದೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ, ಉಪಾಧ್ಯಕ್ಷ ಭೀಮರಾವ್ ಪಾಟೀಲ, ಆಸ್ಪತ್ರೆಯ ನಿರ್ದೇಶಕರಾದ ಡಿ.ಕೆ. ಸಿದ್ರಾಮ, ಡಾ. ಚಂದ್ರಕಾಂತ ಗುದಗೆ, ವಿಜಯಕುಮಾರ ಪಾಟೀಲ ಗಾದಗಿ, ಡಾ.ರಜನೀಶ್ ವಾಲಿ, ಡಾ.ವಿಜಯಕುಮಾರ ಕೋಟೆ, ಅಶೋಕ ರೇಜಂತಲ್, ಶಕುಂತಲಾ ಬೆಲ್ದಾಳೆ, ವಿಜಯಲಕ್ಷ್ಮಿ ಹೂಗಾರ್, ಆಕಾಶ ಪಾಟೀಲ ಅಯಾಸಪುರ, ಸಂತೋಷ ತಾಳಂಪಳ್ಳಿ, ರಾಮದಾಸ ತುಳಸಿರಾಮ, ರಾಮರಾವ್ ಬಿರಾದಾರ, ಸೈಯದ್ ಖಿಜರುಲ್ಲಾ ಹುಸೇನ್, ಜಯಕುಮಾರ ಕಾಂಗೆ, ಆಕಾಶ ನಾಗಮಾರಪಳ್ಳಿ, ಸಿಇಒ ಕೃಷ್ಣಾರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT