₹ 6.63 ಲಕ್ಷ ಮೌಲ್ಯದ ಆಹಾರ ಧಾನ್ಯ ವಶ

7

₹ 6.63 ಲಕ್ಷ ಮೌಲ್ಯದ ಆಹಾರ ಧಾನ್ಯ ವಶ

Published:
Updated:
Deccan Herald

ಬೀದರ್‌: ಹುಮನಾಬಾದ್‌ ಪಟ್ಟಣದ ಎಪಿಎಂಸಿ ಗೋದಾಮೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ಅಂದಾಜು ₹ 6.63 ಲಕ್ಷ ಮೌಲ್ಯದ ಆಹಾರ ಧಾನ್ಯ ಹಾಗೂ ಹಾಲಿನ ಪಾಕೆಟ್‌ಗಳನ್ನು ಆಹಾರ ಇಲಾಖೆಯ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

₹ 6.16 ಲಕ್ಷ ಮೌಲ್ಯದ 293 ಕ್ವಿಂಟಲ್‌ ಅಕ್ಕಿ, ₹ 32 ಸಾವಿರ ಮೌಲ್ಯದ 35 ಚೀಲ ಗೋಧಿ, ₹ 15 ಸಾವಿರ ಬೆಲೆಯ 1 ಕೆಜಿಯ 22 ಹಾಲಿನ ಪಾಕೆಟ್‌ ಹಾಗೂ ಅರ್ಧ ಕೆಜಿಯ 55 ಪಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಅರುಣಕುಮಾರ, ಹುಮನಾಬಾದ್ ತಹಶೀಲ್ದಾರ್ ಡಿ.ಎಂ.ಪಾಣಿ, ಆರೋಗ್ಯ ನಿರೀಕ್ಷಕ ಸಂಜೀವಕುಮಾರ, ಆಹಾರ ನಿರೀಕ್ಷಕಿ ನೀಲಮ್ಮ ದಾಳಿಯಲ್ಲಿ ಪಾಲ್ಗೊಂಡಿದ್ದರು.

₹6.42 ಲಕ್ಷ ಮೌಲ್ಯದ ಅಕ್ಕಿ ವಶ:
ಕಲಬುರ್ಗಿಯಿಂದ ಗುಜರಾತ್‌ಗೆ ಹೊರಟಿದ್ದ ಲಾರಿಯನ್ನು ಪೊಲೀಸರು ಬುಧವಾರ ಹುಮನಾಬಾದ್‌ ಸಮೀಪ ತಡೆದು ಅಕ್ರಮ ಅಕ್ಕಿ ವಶಪಡಿಸಿಕೊಂಡಿದ್ದಾರೆ.

₹6.42 ಲಕ್ಷ ಮೌಲ್ಯದ ತಲಾ 50 ಕೆಜಿ ತೂಕದ 610 ಅಕ್ಕಿ ಚೀಲಗಳನ್ನು ವಶಪಡಿಸಿಕೊಂಡು ಲಾರಿ ಚಾಲಕ ಗುಜರಾತ್‌ನ ಅರ್ಜುನ್‌ಭಾಯಿ ಭಾತು, ಕ್ಲೀನರ್ ನಾಗೇಶ ರತಿಯಾ, ವ್ಯಾಪಾರಿ ದಯಾಭಾಯಿ ಮಕ್ವಾನಾ ಹಾಗೂ ಎಪಿಎಂಸಿ ಮಾರುಕಟ್ಟೆಯಲ್ಲಿರುವ ಸಹಾರಾ ಟ್ರೇಡರ್ಸ್‌ ಮಾಲೀಕನ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.

‘ಇನ್ನೊಂದು ಪ್ರಕರಣದಲ್ಲಿ ಹುಮನಾಬಾದ್‌ ಠಾಣೆಯ ವ್ಯಾಪ್ತಿಯಲ್ಲಿ ಎರಡು ಲಾರಿಗಳ ತಪಾಸಣೆ ನಡೆಸಿದಾಗ ಸರಿಯಾದ ದಾಖಲೆಗಳು ಇರುವುದು ಕಂಡು ಬಂದಿದೆ. ಈ ಲಾರಿಗಳನ್ನು ಬಿಡುಗಡೆ ಮಾಡಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !