ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

21 ಜನರ ಬಂಧನ, ₹ 4.69 ಲಕ್ಷ ಮೌಲ್ಯದ ಅಕ್ರಮ ಮದ್ಯ ವಶ

ಜಿಲ್ಲೆಯ ವಿವಿಧೆಡೆ ಅಬಕಾರಿ ದಾಳಿ
Last Updated 26 ಮಾರ್ಚ್ 2019, 10:54 IST
ಅಕ್ಷರ ಗಾತ್ರ

ಬೀದರ್‌: ಅಬಕಾರಿ ಉಪ ಆಯುಕ್ತ ಶಿವಕುಮಾರ ನೇತೃತ್ವದಲ್ಲಿ ಅಬಕಾರಿ ಸಿಬ್ಬಂದಿ ಜಿಲ್ಲೆಯ 99 ಕಡೆ ದಾಳಿ ನಡೆಸಿ 21 ಆರೋಪಿಗಳನ್ನು ಬಂಧಿಸಿದ್ದಾರೆ. ₹ 46.76 ಲಕ್ಷ ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಂಡಿದ್ದಾರೆ.

ಬಸವಕಲ್ಯಾಣ ತಾಲ್ಲೂಕಿನ ಚಂಡಕಾಪುರ ಚೆಕ್‌ಪೋಸ್ಟ್‌ ಬಳಿ ಶನಿವಾರ ಎರಡು ಬುಲೇರೊಗಳಲ್ಲಿ ಸಾಗಣೆ ಮಾಡುತ್ತಿದ್ದ ₹ 46 ಲಕ್ಷ ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ.

ಹುಮನಾಬಾದ್‌ ತಾಲ್ಲೂಕಿನ ದುಬಲಗುಂಡಿಯಲ್ಲಿ ಈಚೆಗೆ ಹಿರೊಹೊಂಡಾ ಮೇಲೆ ಸಾಗಿಸುತ್ತಿದ್ದ ₹ 6,440 ಮೌಲ್ಯದ ಮದ್ಯ ಹಾಗೂ ಮೊಳಕೇರಿ ಧಾಬಾ ಸಮೀಪ ಕಂಟೇನರ್‌ನಲ್ಲಿ ಸಾಗಿಸುತ್ತಿದ್ದ ಮದ್ಯ ವಶಪಡಿಸಿಕೊಳ್ಳಲಾಗಿದೆ.

ಕಮಲನಗರ ಚೆಕ್‌ಪೋಸ್ಟ್‌ನಲ್ಲಿ ಭಾನುವಾರ ರಾತ್ರಿ ಕಾರು ತಪಾಸಣೆ ನಡೆಸಿದಾಗ ₹ 200 ಮೌಲ್ಯದ ಸೇಂದಿ ಪತ್ತೆಯಾಗಿದೆ. ಕಾರು ಸಮೇತ ಅರೋಪಿಯನ್ನು ಬಂಧಿಸಲಾಗಿದೆ. ದಾಳಿಯಲ್ಲಿ ಅಬಕಾರಿ ಅಧೀಕ್ಷಕ, ಅಬಕಾರಿ ನಿರೀಕ್ಷಕರು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT