ಬೀದರ್: ಅಮೆರಿಕ–ಇಸ್ರೇಲ್ ಹಾಗೂ ಇರಾನ್ ನಡುವೆ ನಡೆಯುತ್ತಿರುವ ಯುದ್ಧದಿಂದ ಮಧ್ಯಪ್ರಾಚ್ಯದಲ್ಲಿ ಉದ್ಭವಿಸಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದುಬೈ ಪ್ರವಾಸಕ್ಕೆ ತೆರಳಿ ಅಲ್ಲಿ ಸಿಲುಕಿಕೊಂಡಿರುವ ಬೀದರ್ ಜಿಲ್ಲೆಯ ನಾಗರಿಕರನ್ನು ಸಂಸದ ಸಾಗರ್ ಖಂಡ್ರೆ ಅವರು ಬುಧವಾರ ಸಂಪರ್ಕಿಸಿ ಅವರಿಗೆ ಧೈರ್ಯ ತುಂಬಿದರು.

ನಗರದ ಗುರುನಾನಕ್ ಬಡಾವಣೆಯ ಬಸವರಜ, ಜಯಶ್ರೀ, ಬಾಬು, ಬಾಬುರಾವ್ ಬಿರಾದಾರ, ಶಕುಂತಲಾ ಬಿರಾದಾರ, ನಾಗನಾಥ ಬಸನಾಳೆ ಹಾಗೂ ಭಾಗ್ಯವಂತಿ ನಾಗನಾಥ ಅವರು ಫೆ. 24ರಂದು ದುಬೈಗೆ ತೆರಳಿದ್ದರು. ಮಾ.1ರಂದು ಭಾರತಕ್ಕೆ ಬರಲು ಟಿಕೆಟ್ ಬುಕ್ ಮಾಡಿಕೊಂಡಿದ್ದರು. ಆದರೆ ಸಂಘರ್ಷದಿಂದ ವಿಮಾನ ಹಾರಾಟ ರದ್ದುಪಡಿಸಿದ್ದರಿಂದ ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದ್ದರು.

ಅದರ ಬೆನ್ನಲ್ಲೇ ಸಾಗರ್ ಖಂಡ್ರೆ ಅವರು ಎಲ್ಲ ಏಳು ಜನರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಎಲ್ಲ ರೀತಿಯ ಪ್ರಯತ್ನ ನಡೆಸಿ, ಆದಷ್ಟು ಶೀಘ್ರ ಎಲ್ಲರನ್ನೂ ತಾಯ್ನಾಡಿಗೆ ಕರೆತರಲಾಗುವುದು. ಯಾರೂ ಹೆದರುವ ಅಗತ್ಯವಿಲ್ಲ. ನಿಮ್ಮೊಟ್ಟಿಗೆ ನಾನಿದ್ದೇನೆ ಎಂದು ಆಶ್ವಾಸನೆ ನೀಡಿದರು. ಈ ಸಂಬಂಧ ಅಲ್ಲಿನ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.