ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ| 16ಕ್ಕೆ ಶರಣ, ಸೂಫಿ, ಸಂತರ ಸಮಾವೇಶ

Published 10 ಆಗಸ್ಟ್ 2023, 7:06 IST
Last Updated 10 ಆಗಸ್ಟ್ 2023, 7:06 IST
ಅಕ್ಷರ ಗಾತ್ರ

ಬಸವಕಲ್ಯಾಣ: ಕರ್ನಾಟಕ ಸೌಹಾರ್ದ ವೇದಿಕೆಯಿಂದ ಆಗಸ್ಟ್ 16ರಂದು ಬೆಳಿಗ್ಗೆ ನಗರದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಶರಣ-ಸೂಫಿ-ಸಂತರ ಸಮಾವೇಶ ಆಯೋಜಿಸಲಾಗಿದೆ.

ಮಹಾರಾಷ್ಟ್ರದ ಉಸ್ತೂರಿಯ ಕೋರಣೇಶ್ವರ ಸ್ವಾಮೀಜಿ ಸಾನಿಧ್ಯದಲ್ಲಿ ಸಮಾವೇಶ ಜರುಗುವುದು. ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷೆ ಮೀನಾಕ್ಷಿ ಬಾಳಿ ಉದ್ಘಾಟಿಸುವರು. ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷೆ ಕೆ.ನೀಲಾ ಪ್ರಾಸ್ತಾವಿಕವಾಗಿ ಮಾತನಾಡುವರು. ರಾಜಾ ಬಾಗಸವಾರ ದರ್ಗಾ ಮುಖ್ಯಸ್ಥ ಖಾಜಾ ಜಿಯಾ-ಉಲ್ -ಹಸನ್ ಜಾಗೀರದಾರ, ರಾಷ್ಟ್ರೀಯ ಬೌದ್ಧ ಮಹಾಸಭಾ ಉಪಾಧ್ಯಕ್ಷ ಮಿಲಿಂದ ಗುರೂಜಿ, ಕಲಬುರಗಿಯ ಪಾಸ್ಟರ್ ವಿಕ್ಟರರಾಜ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಸಮಾವೇಶದ ಯಶಸ್ಸಿಗಾಗಿ ಸಮಿತಿ ಸಹ ರಚಿಸಲಾಗಿದೆ. ಮುಖಂಡರಾದ ಮನೋಹರ ಮೈಸೆ, ಆಕಾಶ ಖಂಡಾಳೆ, ಇಕ್ರಾಮೊದ್ದೀನ್ ಖಾದಿವಾಲೆ, ಸಿಕಂದರ್ ಶಿಂಧೆ, ಶ್ರೀದೇವಿ ಚಿರಡೆ, ಧನರಾಜ ರಾಜೋಳೆ, ನರಸಿಂಗರೆಡ್ಡಿ ಗದ್ಲೇಗಾಂವ, ಜಯಶ್ರೀ ಮೆಂಡೋಳೆ, ಪುಷ್ಪಾ ಮಜಗೆ ಸಮಿತಿಯಲ್ಲಿದ್ದಾರೆ ಎಂದು ಸಮಿತಿ ಪ್ರಮುಖ ರವೀಂದ್ರ ಕೊಳಕೂರ ತಿಳಿಸಿದ್ದಾರೆ.

ನಗರವು ಸೌಹಾರ್ದ ಪರಂಪರೆಯ ತಾಣವಾಗಿದ್ದು ಅದನ್ನು ಇಲ್ಲಿನ ಜನರಿಗೆ ನೆನಪಿಸುವುದಕ್ಕಾಗಿ ಸಮಾವೇಶ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ವಚನ, ತತ್ವಪದ, ಕವ್ವಾಲಿ, ಮೊಹರಂ ಪದ, ಕ್ರಾಂತಿಗೀತೆ, ಜಾನಪದ ಗೀತೆಗಳನ್ನು ಹಾಡಲಾಗುತ್ತದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ವಿನಂತಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT