ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತದಿಂದ ಉತ್ತಮ ಸಂಸ್ಕಾರ

ಸಂಸದ ಭಗವಂತ ಖೂಬಾ ಅಭಿಮತ
Last Updated 31 ಡಿಸೆಂಬರ್ 2018, 14:42 IST
ಅಕ್ಷರ ಗಾತ್ರ

ಬೀದರ್‌: ‘ಸಂಗೀತ ಕೇಳುಗರ ಮನಸ್ಸಿಗೆ ಮುದ ನೀಡುತ್ತದೆ. ಸಂಗೀತದಿಂದ ಉತ್ತಮ ಸಂಸ್ಕಾರವೂ ಬೆಳೆಯುತ್ತದೆ’ ಎಂದು ಸಂಸದ ಭಗವಂತ ಖೂಬಾ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ರಂಗ ಮಂದಿರದಲ್ಲಿ ಆಯೋಜಿಸಿದ್ದ ಪ್ರಗತಿ ಸಂಗೀತ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ರಮೇಶ ಕೊಳಾರ ಒಬ್ಬ ಅತ್ಯುತ್ತಮ ಸಂಗೀತಕಾರ ಆಗಿದ್ದಾರೆ. ಜಿಲ್ಲೆಯಲ್ಲಿ ಶಾಸ್ತ್ರೀಯ ಸಂಗೀತವನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ಬಣ್ಣಿಸಿದರು.

ಪುಣೆಯ ಸೌರಭ ನಾಯಕ ರಾಗ ಪುರಿಯಾಧನಶ್ರೀ ಪ್ರಸ್ತುತ ಪಡಿಸಿದರು. ಬನಾರಸದ ದೀಪಕ ಸಹಾಯಿ ಅವರ ತಬಲಾ ವಾದನ ಮೂಲಕ ಪ್ರೇಕ್ಷಕರ ಗಮನ ಸೆಳೆದರು. ರುಕ್ಮಿಣಿ ಸಹಾಯಿ ಕಥಕ ನೃತ್ಯ ಪ್ರದರ್ಶಿಸಿದರು. ಸಂಸ್ಥೆಯ ವಿದ್ಯಾರ್ಥಿಗಳು ಶಾಸ್ತ್ರೀಯ ಸಂಗೀತ, ಭಾವಗೀತೆ, ಭಕ್ತಿಗೀತೆ ದೇಶಭಕ್ತಿಗೀತೆ, ಜಾನಪದ ಹಾಗೂ ವಚನ ಹಾಡಿದರು.

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಈಶ್ವರಸಿಂಗ್ ಠಾಕೂರ್ ಹಾಗೂ ಗಾಯಕ, ಸಂಗೀತಕಾರ ರಮೇಶ ಕೋಳಾರ ಮಾತನಾಡಿದರು.

ಕಲಾವಿದ ಶಂಭುಲಿಂಗ ವಾಲ್ದೊಡ್ಡಿ, ಮಲ್ಲಿಕಾರ್ಜುನ ಚಟ್ನಳ್ಳಿ, ಫರ್ನಾಂಡೀಸ್‌ ಹಿಪ್ಪಳಗಾಂವ್, ರವಿ ಸ್ವಾಮಿ, ಸಿದ್ರಾಮಯ್ಯ ಸ್ವಾಮಿ ರಾಜಶೇಖರ ವಟಗೆ, ಸವಿತಾ ಬುಕ್ಕಾ ಇದ್ದರು. ತ್ರಿವೇಣಿ ಕೊಳಾರ್‌ ವಂದಿಸಿದರು.

ಬೀದರ್‌ನ ಜಿಲ್ಲಾ ರಂಗ ಮಂದಿರದಲ್ಲಿ ಈಚೆಗೆ ಆಯೋಜಿಸಿದ್ದ ಪ್ರಗತಿ ಸಂಗೀತ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವವನ್ನು ಸಂಸದ ಭಗವಂತ ಖೂಬಾ ಉದ್ಘಾಟಿಸಿದರು. ರಮೇಶ ಕೊಳಾರ, ತ್ರಿವೇಣಿ, ಈಶ್ವರಸಿಂಗ್‌ ಠಾಕೂರ್, ರವಿ ಸ್ವಾಮಿ ಸಿದ್ರಾಮಯ್ಯ ಸ್ವಾಮಿ, ಫರ್ನಾಂಡೀಸ್‌ ಹಿಪ್ಪಳಗಾವ್‌ ಇದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT