ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರೆಗಮಪ ದಸರಾ ದರ್ಬಾರ್ ನಾಳೆಯಿಂದ

ನಾಟ್ಯಶ್ರೀ ನೃತ್ಯಾಲಯದ ಕಲಾವಿದರಿಂದ ನೃತ್ಯ ಕಾರ್ಯಕ್ರಮ
Last Updated 27 ಸೆಪ್ಟೆಂಬರ್ 2022, 12:38 IST
ಅಕ್ಷರ ಗಾತ್ರ

ಬೀದರ್: ಸಾರೆಗಮಪ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಚಾರಿಟಬಲ್‌ ಟ್ರಸ್ಟ್‌ ಹಾಗೂ ನಾಟ್ಯಶ್ರೀ ನೃತ್ಯಾಲಯದ ಆಶ್ರಯದಲ್ಲಿ ಸಾರೆಗಮಪ ದಸರಾ ದರ್ಬಾರ್ ಸೆ.28ರಿಂದ ಅಕ್ಟೋಬರ್ 4ರವರೆಗೆ ನಿತ್ಯ ಸಂಜೆ 6ರಿಂದ 10 ಗಂಟೆ ವರೆಗೆ ಜಿಲ್ಲೆಯ ವಿವಿಧೆಡೆ ನಡೆಯಲಿದೆ.

ಒಂದೇ ವೇದಿಕೆಯಲ್ಲಿ ಸಂಗೀತ, ನೃತ್ಯ ಕಾರ್ಯಕ್ರಮ ಆಯೋಜಿಸಿ ನವರಾತ್ರಿ ಉತ್ಸವದ ಮೆರುಗು ಹೆಚ್ಚಿಸಿ ಭವಾನಿದೇವಿಯ ಭಕ್ತರು ಹಾಗೂ ಕಲಾಭಿಮಾನಿಗಳ ಮನತಣಿಸಲಾಗುವುದು ಎಂದು ಟ್ರಸ್ಟ್‌ ಅಧ್ಯಕ್ಷ ಮಹೇಶಕುಮಾರ ಕುಂಬಾರ ಹಾಗೂ ನಾಟ್ಯಶ್ರೀ ನೃತ್ಯಾಲಯದ ನಿರ್ದೇಶಕಿ ರಾಣಿ ಸತ್ಯಮೂರ್ತಿ ನಗರದಲ್ಲಿ ಸೋಮವಾರ ಜಂಟಿ ಪತ್ರಿಕಾಗೋಷ್ಠಿಯ‌ಲ್ಲಿ ತಿಳಿಸಿದರು.

ಕಲಾವಿದರಾದ ಧೋಂಡಿಬಾ ದುರ್ವೆ, ಬಲರಾಮ ಪಾಂಚಾಳ, ರಾಧಿಕಾ, ಜೆಸ್ಸಿ ಜೋರವಾನೆ, ಮಹಾರಾಷ್ಟ್ರದ ಸಂಗೀತ ನಿರ್ದೇಶಕ ಜಬ್ಬಾರ್‌ ಮುರ್ಷದ, ಡೋಲಕಿ ಮಾಂತ್ರಿಕ ಧನಂಜಯ ಸೇರಿದಂತೆ ಒಟ್ಟು 30 ಕಲಾವಿದರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ರಾಣಿ ಸತ್ಯಮೂರ್ತಿ ನಿರ್ದೇಶನದಲ್ಲಿ ನೃತ್ಯೋತ್ಸವ ಹಾಗೂ ಗರ್ಭಾ (ದಾಂಡಿಯಾ) ಉತ್ಸವ ನಡೆಯಲಿದೆ.

ಸೆ,28ರಂದು ಭಾಲ್ಕಿಯ ಅಂಚೆ ಕಚೇರಿ ಹಿಂಭಾಗ, 29ರಂದು ಬೀದರ್‌ನ ವಿದ್ಯಾನಗರದ 11ನೇ ಕ್ರಾಸ್‌ನಲ್ಲಿರುವ ವೈಷ್ಣವಿದೇವಿ ಮಾತಾ ಮಂದಿರ, 30ರಂದು ಮಂಗಲಪೇಟೆಯ ಜೈಭವಾನಿ ಮಾತಾ ಮಂದಿರ, ಅಕ್ಟೋಬರ್ 1ರಂದು ಬಸವಕಲ್ಯಾಣ ತ್ರಿಪುರಾಂತ ವಾಲ್ಮೀಕಿ ವೃತ್ತ ಸಮೀಪ ಜೈಭವಾನಿ ಮಾತಾ ಮಂದಿರ, ಅ.3 ರಂದು ಬೀದರ್‌ನ ಭೀಮನಗರದ ಜಗದಂಬಾ ಭವಾನಿ ಮಾತಾ ಮಂದಿರ, ಅ.4ರಂದು ಕುಂಬರವಾಡದ ಜೈಭವಾನಿ ಮಾತಾ ಮಂದಿರ ಆವರಣದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

ನಾಡಿನ ಕಲೆ, ಸಂಸ್ಕೃತಿಗಳಿಗೆ ಜೀವ ತುಂಬುವುದು ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ಬರುವ ವರ್ಷ ನವರಾತ್ರಿಯ ಮೊದಲೇ ದಾಂಡಿಯಾ ನೃತ್ಯ ತರಬೇತಿ ನೀಡಲಾಗುವುದು ಹಾಗೂ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ರಾಣಿ ಸತ್ಯಮೂರ್ತಿ ತಿಳಿಸಿದರು.

ಸತ್ಯಮೂರ್ತಿ, ನಿತಿಶ್ ಗಾದಾ, ವಿನಾಯಕ ವಂಗಂಪಲ್ಲಿ, ಪವನ್ ಮನಕಲ್ ಇದ್ದರು.

ನವರಾತ್ರಿ ಪ್ರವಚನ

ದಸರಾ ಮಹೋತ್ಸವದ ಅಂಗವಾಗಿ ಬೇಮಳಖೇಡ ಹಿರೇಮಠ ಸಂಸ್ಥಾನದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ನವರಾತ್ರಿ ಪ್ರವಚನ ಚಿಟಗುಪ್ಪ ತಾಲ್ಲೂಕಿನ ಮನ್ನಾಎಖ್ಖೆಳ್ಳಿ ಹಾಗೂ ಬೀದರ್‌ ತಾಲ್ಲೂಕಿನ ಸಿರ್ಸಿ ಗ್ರಾಮದಲ್ಲಿ ನವರಾತ್ರಿ ಪ್ರವಚನ ಏರ್ಪಡಿಸಲಾಗಿದೆ.

ಸಿರ್ಸಿಯ ನೂತನ ಭವಾನಿ ಮಂದಿರದಲ್ಲಿ ನಿತ್ಯ ಸಂಜೆ 6 ರಿಂದ 7.30 ರವರಗೆ ಹಾಗೂ ಮನ್ನಾಎಖ್ಖೆಳ್ಳಿ ಬಾಲಮ್ಮದೇವಿ ಮಂದಿರದಲ್ಲಿ ರಾತ್ರಿ 8 ಗಂಟೆಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT