ಮಂಗಳವಾರ, ನವೆಂಬರ್ 19, 2019
29 °C
ಧನರಾಜ ಮೇತ್ರೆ ಅವರ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ

ಚಿತ್ರಕಲೆ ಉಳಿಸಲು ಶ್ರಮಿಸಿ: ಮೈಲೂರೆ

Published:
Updated:
Prajavani

ಹುಮನಾಬಾದ್: ಶಿಲ್ಪಕಲೆ ಮತ್ತು ಚಿತ್ರಕಲೆಗೆ ಐತಿಹಾಸಿಕ ಹಿನ್ನೆಲೆ ಇದೆ. ಈ ಕಲೆಗಳನ್ನು ಉಳಿಸಿ, ಬೆಳೆಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಅಶೋಕ ಮೈಲೂರೆ ಹೇಳಿದರು.

ಸಮೀಪದ ಮಾಣಿಕನಗರದ ಶ್ರೀವೀರಭದ್ರೇಶ್ವರ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕಲಾವಿದ ಧನರಾಜ ಮೇತ್ರೆ ಅವರ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಲಾವಿದ ಧನರಾಜ ಮೇತ್ರೆ ಅವರು ಚಿತ್ರಕಲಾ ಶಿಕ್ಷಕರಾಗಿದ್ದು, ಸಾಕಷ್ಟು ಕಲಾಕೃತಿಗಳನ್ನು ರಚಿಸಿದ್ದಾರೆ. ಅವರು ತಾಲ್ಲೂಕು ಮಟ್ಟದಲ್ಲಿ ತಮ್ಮ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ಹಿರಿಯ ಆರೋಗ್ಯ ಅಧಿಕಾರಿ ತೀರ್ಥಪ್ಪ ಭೀಮಶೆಟ್ಟಿ ಮಾತನಾಡಿ,  ಚಿತ್ರಕಲೆ ಪರಿಣಾಮಕಾರಿ ಮಾಧ್ಯಮ. ಜೀವನದ ಅನುಭವಗಳನ್ನು ಚಿತ್ರಕಲೆ ಮೂಲಕ ಹೇಳುವ ಪ್ರಕ್ರಿಯೆ ಅನನ್ಯ ಎಂದರು.

ವಿದ್ಯಾರ್ಥಿಗಳು ಪೋಷಕರು ಹಾಗೂ ಗುರುಗಳನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು.‌ ಜ್ಞಾನ ಸಂಪಾದನೆಗೆ ಒತ್ತು ನೀಡಬೇಕು ಎಂದು ತಿಳಿಸಿದರು.

ಸಂಸ್ಥೆಯ ಅಧ್ಯಕ್ಷ ಗುಂಡಪ್ಪ ದೊಡ್ಡಮನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲೆ ಯಾರ  ಸ್ವತ್ತು ಅಲ್ಲ. ಅದು ವರ. ಕಲೆಯನ್ನು  ಪ್ರದರ್ಶಿಸಿದಾಗ ಮಾತ್ರ ಅದಕ್ಕೆ ಬೆಲೆ ಬರುತ್ತದೆ ಎಂದು ಹೇಳಿದರು.

ಕರ್ನಾಟಕ ಜಾನಪದ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಶರದಕುಮಾರ ನಾರಾಯಣಪೇಟಕರ್, ಹಿರಿಯ ಚಿತ್ರ ಕಲಾವಿದ ಎ.ಕೆ.ಜೋಶಿ ಮಾತನಾಡಿದರು. ಶಿಕ್ಷಕಕ ಕಲಾವಿದ ಧನರಾಜ ಮೇತ್ರೆ ಇದ್ದರು.

ಪ್ರತಿಕ್ರಿಯಿಸಿ (+)