ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗುಣಾತ್ಮಕ ಶಿಕ್ಷಣದಿಂದಲೇ ದೇಶದ ಪ್ರಗತಿ’

ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಉಮಾ ಖಂಡ್ರೆ
Last Updated 18 ಫೆಬ್ರುವರಿ 2020, 10:24 IST
ಅಕ್ಷರ ಗಾತ್ರ

ಭಾಲ್ಕಿ: ವಿದ್ಯಾರ್ಥಿಗಳಿಗೆ ನೀಡುವ ಗುಣಾತ್ಮಕ ಶಿಕ್ಷಣದಿಂದಲೇ ದೇಶದ ಪ್ರಗತಿ ಸಾಧ್ಯ ಎಂದು ಶ್ರೀ ಗುರುಪ್ರಸನ್ನ ಜನಸೇವಾ ಮಹಿಳಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಉಮಾ ಪ್ರಕಾಶ ಖಂಡ್ರೆ ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀಗುರುಪ್ರಸನ್ನ ಶಿಕ್ಷಣ ಸಮುಚ್ಛಯದಲ್ಲಿ ಶನಿವಾರ ನಡೆದ ಶ್ರೀಗುರುಪ್ರಸನ್ನ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಪ್ರಗತಿಗೆ ಶಿಕ್ಷಣವೇ ಮೂಲ. ವಿದ್ಯಾರ್ಥಿಗಳಿಗೆ ಉತ್ತಮ ಗುಣಾತ್ಮಕ ಶಿಕ್ಷಣ ನೀಡಿದರೆ ವೈಯಕ್ತಿಕ ಪ್ರಗತಿಯೊಂದಿಗೆ, ರಾಜ್ಯ, ಮತ್ತು ರಾಷ್ಟ್ರದ ಪ್ರಗತಿಯಾಗುವುದು. ಹಾಗಾಗಿ ಪಾಲಕರು ಮತ್ತು ಶಿಕ್ಷಕರು ಗುಣಾತ್ಮಕ ಶಿಕ್ಷಣ ನೀಡಲು ಶ್ರಮ ಪಡಬೇಕು ಎಂದು ಸಲಹೆ ನೀಡಿದರು. ಮುಖ್ಯಶಿಕ್ಷಕ ಜಯರಾಜ ದಾಬಶೆಟ್ಟಿ ಮಾತನಾಡಿದರು. ಶಾಲೆಯ ಮುಖ್ಯಶಿಕ್ಷಕ ಆನಂದಕುಮಾರ ಜೋಳದಪಕೆ, ಪ್ರಾಚಾರ್ಯ ವಿಷ್ಣು ಕೋಟೆ, ರೇಖಾ ಮಹಾಜನ, ಸುಮಾ ಜಲ್ದೆ ಮಾತನಾಡಿದರು. ಬಾಲರಾಜ ಶಿವಣಗೆ, ಐಟಿಐ ಪ್ರಾಂಶುಪಾಲ ಸತೀಶ ಬಿರಾದಾರ, ರಾಜು ಮೇತ್ರೆ, ಲೋಕೇಶ ಮಡಿವಾಳ, ಪೂನಮ್ ಇದ್ದರು. ಎ.ಜೊಳದಪಕೆ ಸ್ವಾಗತಿಸಿದರು. ಅಮೃತ ಮೇತ್ರೆ ನಿರೂಪಿಸಿದರು. ಬಾಲರಾಜ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT