ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉತ್ತಮ ಆರೋಗ್ಯಕ್ಕೆ ಪರಿಸರ ಮುಖ್ಯ’

Last Updated 22 ನವೆಂಬರ್ 2019, 12:29 IST
ಅಕ್ಷರ ಗಾತ್ರ

ಚಿಟಗುಪ್ಪ: ‘ಉತ್ತಮ ಆರೋಗ್ಯ ಹೊಂದಲು ಪರಿಸರ ಮಹತ್ವದ ಪಾತ್ರ ವಹಿಸುತ್ತದೆ. ಮನೆ ಪರಿಸ್ಥಿತಿಯ ಮೇಲೆ ಆರೋಗ್ಯ ನಿರ್ಧಾರವಾಗಿರುತ್ತದೆ’ ಎಂದು ಹರ್ಬ್ ಲೈಪ್ ಆರೋಗ್ಯ ಸಮಾಲೋಚಕ ಮಲ್ಲಿಕಾರ್ಜುನ ಪಾಟೀಲ ಹೇಳಿದರು.

ತಾಲ್ಲೂಕಿನ ನಿರ್ಣಾದಲ್ಲಿ ನಂದಿನಿ ಮಹಿಳಾ ಮಂಡಳ, ಹರ್ಬ್ ಲೈಪ್ ಆರೋಗ್ಯ ಕಾರ್ಯಕರ್ತರ ಸಹಯೋಗದಲ್ಲಿ ಈಚೆಗೆ ನಡೆದ ‘ಉತ್ತಮ ಆರೋಗ್ಯ ಕಾಪಾಡುವಲ್ಲಿ ಕುಟುಂಬದ ಪಾತ್ರ’ ಕಾರ್ಯಗಾರದಲ್ಲಿ ಅವರು ಮಾತನಾಡಿದರು.

‘ಬೊಜ್ಜು ದೇಶ ವಾಸಿಗಳನ್ನು ಕಾಡುತ್ತಿರುವ ಗಂಭೀರ ಸಮಸ್ಯೆ. ಮಧುಮೇಹ ಕಾಯಿಲೆಯೂ ಎಡೆಬಿಡದೆ ಕಾಡುತ್ತಿದೆ’ ಎಂದು ತಿಳಿಸಿದರು.

ಪ್ರಭಾಕರ್ ದಾಮಾ ಮಾತನಾಡಿ,‘ಬೊಜ್ಜು, ದೇಹದ ಆರೋಗ್ಯವನ್ನು ಏರುಪೇರು ಮಾಡಿ ಮಧುಮೇಹ ಹಾಗೂ ರಕ್ತದ ಒತ್ತಡಕ್ಕೆ ಕಾರಣವಾಗುತ್ತದೆ. ನಾರು ಪದಾರ್ಥ ಇರುವ ತರಕಾರಿ ಒಳಗೊಂಡ ಅಡುಗೆ ಊಣಬಡಿಸುವ ಕೆಲಸ ಮಹಿಳೆಯರಿಂದ ಆಗಬೇಕು. ದೈಹಿಕ ವ್ಯಾಯಾಮ, ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಬೇಕು’ ಎಂದರು.

ಇಸ್ಮಾಯಲ್ ರಾಠೋಡಿ ಮಾತನಾಡಿ,‘ಆಧುನಿಕ ಆಹಾರ ಪದ್ಧತಿಗಳಾದ ‘ಜಂಕ್’ ತಿನಿಸುಗಳನ್ನು ಅತಿಯಾಗಿ ಸೇವಿಸುವುದರಿಂದ, ಅದರಲ್ಲಿರುವ ಹೆಚ್ಚಿನ ಜಿಡ್ಡಿನಾಂಶ ಮತ್ತು ಸಕ್ಕರೆಯ ಅಂಶದಿಂದ ಚಿಕ್ಕ ವಯಸ್ಸಿನಲ್ಲೇ ವಿವಿಧ ಮಾರಕ ಕಾಯಿಲೆಗಳಿಗೆ ವ್ಯಕ್ತಿ ತುತ್ತಾಗುತ್ತಿದ್ದು, ದೈಹಿಕ ಕ್ರಿಯೆಗಳ ಕೊರತೆ. ಸಮಯಾನುಭಾವ, ಸುಖಜೀವನ ಹಾಗೂ ಸೋಮಾರಿತನ ಈ ಎಲ್ಲ ಕಾರಣಗಳಿಂದ ದೈಹಿಕ ಕ್ರಿಯೆಗಳು ಕಡಿಮೆಯಾಗಿ ಮೈತೂಕ ಹೆಚ್ಚಾಗುತ್ತಿದೆ’ ಎಂದು ಹೇಳಿದರು.

ಪ್ರಾಚಾರ್ಯ ಝರಣಪ್ಪ ಚಾಂಗಲೇರಾ, ದೈಹಿಕ ಶಿಕ್ಷಕ ಲಿಂಗರಾಜ್ ಎಖ್ಖೇಳಿ, ಮಲ್ಲಪ್ಪ ಗೊಲ್ಲರ್,ಭೀಮರೆಡ್ಡಿ ಆಣದೂರ್, ಶುವಕುಮಾರ ಡೊಂಗರಗಾಂವ್,ಮಮತಾ, ಸುವರ್ಣಾ, ಲಕ್ಷ್ಮಣರಾವ್ ಫಾತಮಾಪುರ ಹಾಗೂ ನಾಗೇಂದ್ರ ದಾಸ್ ಇದ್ದರು.

ಬಿಸಲಪ್ಪ ನಿರೂಪಿಸಿದರು ಹಾಗೂ ಗುರುಸ್ವಾಮಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT