ಹಿರಿಯ ನಾಗರಿಕರನ್ನು ಗೌರವಿಸಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ

7

ಹಿರಿಯ ನಾಗರಿಕರನ್ನು ಗೌರವಿಸಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ

Published:
Updated:
Deccan Herald

ಬೀದರ್‌: ‘ಹಿರಿಯ ನಾಗರಿಕರು ಕುಟುಂಬದ ಮಾರ್ಗದರ್ಶಕರಾಗಿದ್ದು, ಅವರನ್ನು ಗೌರವದಿಂದ ಕಾಣಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ತಿಳಿಸಿದರು.

ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಹಿರಿಯ ನಾಗರಿಕರ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹಿರಿಯ ನಾಗರಿಕರು ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಮಕ್ಕಳು ಮತ್ತು ಯುವಕರಿಗೆ ಮಾದರಿಯಾಗಿದ್ದಾರೆ. ಕ್ರೀಡೆಗಳು ಹಿರಿಯ ನಾಗರಿಕರಲ್ಲಿ ಉತ್ಸಾಹ ಹೆಚ್ಚಿಸಲಿವೆ’ ಎಂದು ಅಭಿಪ್ರಾಯಪಟ್ಟರು.

ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ನಿರ್ದೇಶಕ ಅನಿಲಕುಮಾರ ಬೆಲ್ದಾರ್ ಮಾತನಾಡಿ, ‘ಹಿರಿಯ ನಾಗರಿಕರು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಉತ್ತಮ ಆರೋಗ್ಯ ಕಾಯ್ದುಕೊಳ್ಳಬಹುದು’ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಮಂಜುನಾಥ, ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಪ್ರಭುಲಿಂಗ ಸ್ವಾಮಿ ಉಪಸ್ಥಿತರಿದ್ದರು.

ಸಾಹಿತಿ ಹಂಸಕವಿ ನಿರೂಪಿಸಿದರು. ಹಿರಿಯ ನಾಗರಿಕರಿಗೆ ವಿವಿಧ ಸ್ಪರ್ಧೆಗಳು ನಡೆದವು.

ವಿಜೇತರು: ಹಿರಿಯ ನಾಗರಿಕರ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರ ವಿವರ ಹೀಗಿದೆ.
ಪುರುಷರ ವಿಭಾಗ: 
60-70 ವಯಸ್ಸಿನವರ 100 ಮೀಟರ್ ಓಟ: ಸ್ಯಾಮುವೆಲ್ ರಾಜಪ್ಪ (ಪ್ರಥಮ), ಮಾರುತಿ ಚಿದ್ರಿ (ದ್ವಿತೀಯ) ಹಾಗೂ ಸಿದ್ರಾಮಪ್ಪ (ತೃತೀಯ).
71-80 ವಯಸ್ಸಿನವರ 75 ಮೀಟರ್ ಓಟ: ವಾಮನರಾವ್‌ (ಪ್ರಥಮ), ಶರಣಪ್ಪ (ದ್ವಿತೀಯ) ಮತ್ತು ತಾನಾಜಿ (ತೃತೀಯ).
80 ವರ್ಷ ಮೇಲ್ಪಟ್ಟವರ ಕ್ರಿಕೆಟ್ ಚೆಂಡು ಎಸೆತ: ಗುರುನಾಥ ಬಿರಾದಾರ (ಪ್ರಥಮ) ಹಾಗೂ ಶರಣಪ್ಪ ಬಿ. ತಿಕಲಾಪುರ (ದ್ವಿತೀಯ).
60-70 ವಯಸ್ಸಿನವರ 3 ಕೆ.ಜಿ. ಗುಂಡು ಎಸೆತ: ಸ್ಯಾಮುವೆಲ್ (ಪ್ರಥಮ), ಶಂಭುಲಿಂಗ ವಾಲ್ದೊಡ್ಡಿ (ದ್ವಿತೀಯ) ಮತ್ತು ಬಾಬುರಾವ್‌ (ತೃತೀಯ).
71 ರಿಂದ 80 ವಯಸ್ಸಿನವರ ಗುಂಡು ಎಸೆತ: ವಾಮನರಾವ್‌ (ಪ್ರಥಮ), ನರಸಿಂಗರಾವ್‌ (ದ್ವಿತೀಯ) ಹಾಗೂ ಶರಣಪ್ಪ (ತೃತೀಯ).
ಮಹಿಳೆಯರ ವಿಭಾಗ:
60-70 ವಯಸ್ಸಿನವರ 400 ಮೀಟರ್ ನಡಿಗೆ: ಚಂದ್ರಮ್ಮ ಕಾಶೀನಾಥ (ಪ್ರಥಮ), ಮುಕ್ತಾಬಾಯಿ ಶಂಕರರಾವ್‌ (ದ್ವಿತೀಯ ಮತ್ತು ಶಿವಮ್ಮ ವಿಠ್ಠಲರಾವ್‌ (ತೃತೀಯ).
71-80 ವಯಸ್ಸಿನವರ 200 ಮೀಟರ್ ನಡಿಗೆ: ಪ್ರಭುಲೀಲಾ ಸಿದ್ರಾಮ (ಪ್ರಥಮ).
60-70 ವಯಸ್ಸಿನವರ ಕ್ರಿಕೆಟ್ ಚಂಡು ಎಸೆತ: ಜನಾಬಾಯಿ ವಿಠಲರಾವ್ (ಪ್ರಥಮ), ಪದ್ಮಾ ಲಕ್ಷ್ಮಣರಾವ್ (ದ್ವಿತೀಯ) ಹಾಗೂ ಗಂಗಮ್ಮ ಫುಲೆ (ತೃತೀಯ).
71-80 ವಯಸ್ಸಿನ ಕ್ರಿಕೆಟ್ ಚಂಡು ಎಸೆತ: ಸರಸ್ವತಿ ಮಾರುತಿ (ಪ್ರಥಮ), ಹೌಸಿಯಾಬಾಯಿ ದಿಗಂಬರ (ದ್ವಿತೀಯ) ಮತ್ತು ಸಂಗಮ್ಮ ಗಣಪತಿ (ತೃತೀಯ).

ಪುರುಷರ ಸಾಂಸ್ಕೃತಿಕ ಸ್ಪರ್ಧೆಗಳು:
60-70 ವಯಸ್ಸಿನವರ ಜಾನಪದ ಗೀತೆ: ಶಂಭುಲಿಂಗ ವಾಲ್ದೊಡ್ಡಿ (ಪ್ರಥಮ), ಲಕ್ಷ್ಮಣರಾವ್‌ ಕಾಜಿ (ದ್ವಿತೀಯ) ಹಾಗೂ ಎಸ್.ಬಿ ಕುಚಬಾಳ (ತೃತೀಯ).

71-80 ವಯಸ್ಸಿನವರ ಜಾನಪದ ಗೀತೆ: ಚಂದ್ರಪ್ಪ ಹೆಬ್ಬಾಳಕರ್ (ಪ್ರಥಮ), ವಾಮನರಾವ್‌ ಪಾಟೀಲ (ದ್ವಿತೀಯ).
80 ವರ್ಷ ಮೇಲ್ಪಟ್ಟವರ ಜಾನಪದ ಗೀತೆ: ಗುರುನಾಥ ಬಿರಾದಾರ (ಪ್ರಥಮ).
ಏಕಪಾತ್ರಾಭಿನಯ: ಎಸ್.ಬಿ. ಕುಚಬಾಳ (ಪ್ರಥಮ).

ಮಹಿಳೆಯರ ಸಾಂಸ್ಕೃತಿಕ ಸ್ಪರ್ಧೆಗಳು:
60-70 ವಯಸ್ಸಿನವರ ಜಾನಪದ ಗೀತೆ: ಗಂಗಮ್ಮ ಫುಲೆ (ಪ್ರಥಮ) ಮತ್ತು ಶಿವಮ್ಮ ಗಾಂಧಿನಗರ (ದ್ವಿತೀಯ).
71-80 ವಯಸ್ಸಿನವರ ಜಾನಪದ ಗೀತೆ: ಹೀರಾಬಾಯಿ ರಾಜೇಶ್ವರ (ಪ್ರಥಮ), ಮುಕ್ತಾಬಾಯಿ ಮಾಧವನಗರ (ದ್ವಿತೀಯ).
80 ವರ್ಷ ಮೇಲ್ಪಟ್ಟ ವಯಸ್ಸಿನವರ ಜಾನಪದ ಗೀತೆ: ಭಾಗಮ್ಮ ಔರಾದ್ (ಪ್ರಥಮ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !