ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ಸೇವೆ ಸರ್ವ ಶ್ರೇಷ್ಠ: ಪ್ರೊ. ವಿಜಯಕುಮಾರ

Last Updated 17 ಆಗಸ್ಟ್ 2022, 11:23 IST
ಅಕ್ಷರ ಗಾತ್ರ

ಬೀದರ್: ದೇಶ ಸೇವೆ ಸರ್ವ ಶ್ರೇಷ್ಠವಾದದ್ದು ಎಂದು ಪ್ರಾಚಾರ್ಯ ಪ್ರೊ. ವಿಜಯಕುಮಾರ ಬಿರಾದಾರ ನುಡಿದರು.
ನಗರದ ಅಕ್ಕ ಮಹಾದೇವಿ ಮಹಿಳಾ ಮಹಾವಿದ್ಯಾಲಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು, ಯುವಕರು ದೇಶಕ್ಕೆ ಏನಾದರೂ ಕೊಡುಗೆ ನೀಡಲು ಸಂಕಲ್ಪ ತೊಡಬೇಕು ಎಂದು ತಿಳಿಸಿದರು.
ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಪ್ರೊ. ಲೀಲಾವತಿ ಚಾಕೋತೆ, ಪ್ರೊ. ಶಿವನಾಥ ಪಾಟೀಲ, ಪ್ರೊ. ಶಿವಶರಣಪ್ಪ ಚಿಟ್ಟಾ, ಪ್ರೊ. ಸಂಗ್ರಾಮ ಎಂಗಳೆ, ಡಾ. ಗಂಗಾಂಬಿಕೆ ಪಾಟೀಲ, ಡಾ. ಧನಲಕ್ಷ್ಮಿ ಪಾಟೀಲ, ಡಾ. ವಿಶ್ವನಾಥ ಕಿವುಡೆ, ಡಾ. ಓಂಕಾರ ಖಂಡ್ರೆ, ಶರಣಪ್ಪ ಡಿ, ಕವಿತಾ, ಡಾ. ದೇವರಾಜ, ಪ್ರೌಢಶಾಲೆ ಮುಖ್ಯಶಿಕ್ಷಕ ಚಂದ್ರಕಾಂತ ಪಾಟೀಲ, ಬಿ.ಎಡ್. ಕಾಲೇಜು ಪ್ರಾಚಾರ್ಯ ಸಂತೋಷ, ಕಿರಿಯ ಆಡಳಿತಾಧಿಕಾರಿ ಪೀಟರ್, ಲೆಕ್ಕಾಧಿಕಾರಿ ಬಸವರಾಜ ಇದ್ದರು.
ಕಬಡ್ಡಿ, ವಾಲಿಬಾಲ್, ಓಟ, ಥ್ರೋಬಾಲ್, ಭಾಷಣ, ನಿಬಂಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

* * *

ಶಿಕ್ಷಕರು, ಮಾಜಿ ಸೈನಿಕರಿಗೆ ಸತ್ಕಾರ

ಬೀದರ್: ಸ್ವಾತಂತ್ರ್ಯೋತ್ಸವ ಪ್ರಯುಕ್ತ ತಾಲ್ಲೂಕಿನ ಯರನಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಪ್ರಾಥಮಿಕ, ಪ್ರೌಢಶಾಲೆಯ ಶಿಕ್ಷಕರು, ವೈದ್ಯಾಧಿಕಾರಿಗಳು ಹಾಗೂ ಮಾಜಿ ಸೈನಿಕರನ್ನು ಸತ್ಕರಿಸಲಾಯಿತು.
ಮುಖ್ಯಶಿಕ್ಷಕ ವಿಶ್ವನಾಥ ಹಿರೇಮಠ, ಸಹ ಶಿಕ್ಷಕರಾದ ಪಾಂಡುರಂಗ ಬೆಲ್ದಾರ್, ಸಂಜೀವ ಬಿ. ಸೂರ್ಯವಂಶಿ, ಪ್ರಕಾಶ ಪಾಟೀಲ, ರಮೇಶ, ಯಾಸೀನ್, ಹೇಮಲತಾ, ಮೀನಾಕ್ಷಿ ಜೀರ್ಗೆ, ರಂಜನಿ, ಸುರೇಖಾ, ಎಸ್‍ಡಿಎಂಸಿ ಅಧ್ಯಕ್ಷ ಸಲೀಂಖಾನ್, ವೈದ್ಯಾಧಿಕಾರಿ ಹಾಗೂ ಮಾಜಿ ಸೈನಿಕರನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಕುಮಾರ ಚಲವಾ ಶಾಲು ಹೊದಿಸಿ ಸನ್ಮಾನಿಸಿದರು.
ಉಪಾಧ್ಯಕ್ಷ ವಿಜಯಕುಮಾರ ಅನಕಲೆ, ಪಿಡಿಒ ವಿಜಯಶೀಲಾ, ಸದಸ್ಯರಾದ ನೀಲಕಂಠ ದೇಶಮುಖ, ಲಕ್ಷ್ಮಿ, ಬಾಬು ಪ್ರಭುನವರ್, ಪ್ರಭು ಸಾಂಗವಿ, ದತ್ತಾತ್ರಿ ಸಾಂಗವಿ, ಕಾವೇರಿ ಅಶೋಕ, ಮಾಣಿಕೇಶ್ವರಿ, ರೇಣುಕಾ ಬಸವರಾಜ, ಕಸ್ತೂರಿಬಾಯಿ, ತಾಜೊದ್ದಿನ್, ಅನಿಲಕುಮಾರ ದೀಕ್ಷಿತ್, ಮಹೇಶ ಅನಕಲೆ, ಮಹೇಶ ದೇಶಮುಖ, ಕಲ್ಲಪ್ಪ, ಭಗವಂತರಾವ್ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT