ಬೀದರ್: ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಆದಿಗುರು ಶಂಕರಾಚಾರ್ಯರ ಜಯಂತಿಯನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.

ಬೆಳಿಗ್ಗೆ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಡಿಸಿ ಶಿಲ್ಪಾ ಶರ್ಮಾ ದೀಪ ಬೆಳಗಿಸಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಗಾಣಗಾಪುರದ ಋಗ್ವೇದ ಬೋಧಕ ಹರಿಕೇಶ ಕುಲಕರ್ಣಿ ವಿಶೇಷ ಉಪನ್ಯಾಸ ನೀಡಿ, ಅದ್ವೈತ ಸಿದ್ಧಾಂತದ ಮೂಲಕ ವೇದ ರಕ್ಷಣೆಯ ಧ್ವಜ ಎತ್ತಿ ಹಿಡಿದ ಕೀರ್ತಿ ಮಹಾ ತತ್ವಜ್ಞಾನಿ ಶಂಕರಾಚಾರ್ಯರು ಎಂದರು.

8ನೇ ವಯಸ್ಸಿಗೆ ಚತುರ್ವೇದ ಪರಿಣತರಾಗಿ ಮುಂದೆ ನಾಲ್ಕು ಪೀಠಗಳನ್ನು ಸ್ಥಾಪಿಸುತ್ತಾರೆ. ದೇಶವನ್ನು ಸಾಂಸ್ಕೃತಿಕವಾಗಿ ಒಂದುಗೂಡಿಸಿದ ತ್ಯಾಗಿ, ಸನಾತನ ಧರ್ಮದ ಪುನರುತ್ಥಾನಗೈದ ಮಹಾಜ್ಞಾನಿ ಶಂಕರರು ಎಂದು ಹೇಳಿದರು.

ಶಂಕರರ ವಿಚಾರಧಾರೆಗಳು ಮಾನವನ ದೈನಂದಿನ ಬದುಕಿಗೆ ಅಮೃತ ಸಂಜೀವಿನಿಯಾಗಿವೆ. ಬದ್ರಿನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಶಂಕರಾಚಾರ್ಯರ ಮೂರ್ತಿ ಸ್ಥಾಪಿಸಿ ವಿಶ್ವ ತತ್ವಜ್ಞಾನಿಗಳ ದಿನ ಎಂದು ಘೋಷಣೆ ಮಾಡಿದ್ದು ಸಂತಸ ತಂದಿದೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಇಡೀ ದೇಶವನ್ನು ಕಾಲ್ನಡಿಗೆಯಲ್ಲಿ ಸುತ್ತಿ ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಪ್ರಯತ್ನಿಸಿದವರು ಆದಿಗುರು ಶಂಕರಾಚಾರ್ಯರು ಎಂದು ಹೇಳಿದರು.

ಶಂಕರರ ವಿಚಾರಧಾರೆಗಳ ಸ್ಮರಣೆಯಿಂದ ಭಾರತ ವಿಶ್ವಗುರುವಾಗಲು ಸಾಧ್ಯ. ಮಾನವನಲ್ಲಿ ತುಂಬಿಕೊಂಡ ಅನಾಚಾರ, ಅಹಂಕಾರ, ಸ್ವಾರ್ಥ ಮತ್ತು ಮತ್ಸರ ದೂರ ಮಾಡಲು ಶಂಕರಾಚರ್ಯರ ವಿಚಾರಗಳು ದಾರಿದೀಪವಾಗಿವೆ ಎಂದರು.

ಶಂಕರರ ಬೋಧನೆಯಲ್ಲಿ ಶ್ರೇಷ್ಠ ವಿಚಾರ–ಸಚಿವ ರಹೀಂ ಖಾನ್

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೀದರ್ ಮಹಾನಗರ ಪಾಲಿಕೆ ಹಾಗೂ ಬ್ರಾಹ್ಮಣ ಸಮಾಜದ ಸಹಯೋಗದಲ್ಲಿ ಸಂಜೆ ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಪೌರಾಡಳಿತ ಸಚಿವ ರಹೀಂ ಖಾನ್ ಉದ್ಘಾಟಿಸಿ, ಎಲ್ಲ ಮಹಾತ್ಮರ ವಿಚಾರಗಳು ಮತ್ತು ಎಲ್ಲ ಧರ್ಮಗಳ ಉದ್ದೇಶ ಮಾನವ ಕಲ್ಯಾಣವೇ ಆಗಿದೆ. ಅಂತಹ ಉನ್ನತ ವಿಚಾರಗಳು ಶಂಕರಾಚಾರ್ಯರ ಬೋಧನೆಯಲ್ಲಿವೆ ಎಂದು ತಿಳಿಸಿದರು.

ಬ್ರಾಹ್ಮಣ ಸಮಾಜದಲ್ಲಿ ಬಹಳಷ್ಟು ಜನರು ಬಡವರಿದ್ದಾರೆ. ಅವರಿಗೆ ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳಿವೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಈ ಬಾರಿ ಸರ್ಕಾರ ಬ್ರಾಹ್ಮಣ ಸಮುದಾಯದವರಿಗೂ ಲೇಬರ್ ಕಾರ್ಡ್ ನೀಡಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯದ ಏಳಿಗೆಗೆ ನೂರು ಕೋಟಿ ಅನುದಾನ ಮೀಸಲಿಟ್ಟಿದೆ. ಬೀದರ್ನಲ್ಲಿ ಬ್ರಾಹ್ಮಣ ಸಮುದಾಯ ಭವನ ನಿರ್ಮಾಣಕ್ಕೆ ಸ್ಥಳ ಗುರುತಿಸಿ, ಕಟ್ಟಡ ನಿರ್ಮಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ರಾಮಕೃಷ್ಣ ವಿವೇಕಾನಂದ ಆಶ್ರಮದ ಜ್ಯೋತಿರ್ಮಯಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ, ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಬ್ರಾಹ್ಮಣ ಸಮಾಜದ ಪ್ರಮುಖರಾದ ರಮೇಶ್ ಕುಲಕರ್ಣಿ, ವೆಂಕಟೇಶ್ ಕುಲಕರ್ಣಿ, ವಿಜಯಕುಮಾರ ಸೋನಾರೆ, ಸದಾನಂದ ಜೋಶಿ, ಅಪ್ಪಾರಾವ್ ಸೌದಿ, ಮಂಗಲಾ ಭಾಗವತ್, ಗ್ರೇಡ್– 2 ತಹಶೀಲ್ದಾರ್ ಜಿಯಾವುಲ್ಲಾ ಇತರರಿದ್ದರು. ರೋಹಿತ್ ಗುರೂಜಿ ವೇದಘೋಷ ಹೇಳಿದರು. ವೀರಾಂಜನೆಯ ಬಳಗದವರು ಶಂಕರಾಚಾರ್ಯರು ವಿರಚಿತ ಗುರುಪಾದ ಸ್ತೋತ್ರ ಪಠಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಸ್ವಾಗತಿಸಿದರು. ದೇವಿದಾಸ ಜೋಶಿ ನಿರೂಪಿಸಿದರು. ರಮೇಶ ಕುಲಕರ್ಣಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.