ಗುರುವಾರ , ಡಿಸೆಂಬರ್ 2, 2021
19 °C

ಶಿವಕುಮಾರ ಸ್ವಾಮೀಜಿ ಜಯಂತಿ ಮಹೋತ್ಸವ 26 ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್:  ಶಿವಕುಮಾರ ಸ್ವಾಮೀಜಿ ಅವರ 77ನೇ ಜಯಂತಿ ಮಹೋತ್ಸವವು ಇಲ್ಲಿಯ ಸಿದ್ಧಾರೂಢ ಮಠದ ಚಿದಂಬರಾಶ್ರಮದಲ್ಲಿ ನ. 26 ರಿಂದ 30 ರ ವರೆಗೆ ನಡೆಯಲಿದೆ.

ಪ್ರತಿ ದಿನ ಬೆಳಿಗ್ಗೆ 6.30 ರಿಂದ 7 ರ ವರೆಗೆ ಮಠದ ಸಾಧಕ, ಸಾಧಕಿಯರಿಂದ ಜಪ, ಧ್ಯಾನ, ಬೆಳಿಗ್ಗೆ 8 ರಿಂದ 10, ಸಂಜೆ 6 ರಿಂದ 8 ರ ವರೆಗೆ ಪ್ರವಚನ, ಸಿದ್ಧಾರೂಢರ ಚರಿತ್ರೆ ಪಾರಾಯಣ, ಭಜನೆ ಕಾರ್ಯಕ್ರಮಗಳು ಜರುಗಲಿವೆ. ಸಿದ್ಧಾರೂಢ ಡಿ.ಎಡ್ ಕಾಲೇಜಿನ ಗುಂಡಪ್ಪ ಪಾಂಚಾಳ ಹಾಗೂ ಬಗದಲ್‍ನ ಬಸವಣಪ್ಪ ಮಾಸ್ಟರ್ ಸಂಗೀತ ನಡೆಸಿಕೊಡಲಿದ್ದಾರೆ.

29 ರಂದು ಶ್ರೀಗಳ ರಜತ ಸಿಂಹಾಸನಾರೋಹಣ, 30 ರಂದು ಸುವರ್ಣ ಕಿರೀಟ ಧಾರಣೆ ನಡೆಯಲಿದೆ. ಶೋಭಾ ಕಾಳಗಿ, ತಾರಾಬಾಯಿ ಮನಗೂಳಿ, ಸಂಜು ಐಹೊಳೆ, ಶಿವಶರಣ ಸುರಪುರ, ಸಂಗನಗೌಡ ಪಾಟೀಲ ಅವರು ತುಲಾಭಾರ ಸೇವೆ ನೆರವೇರಿಸಲಿದ್ದಾರೆ.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಜಯಂತಿ ಮಹೋತ್ಸವ ಸಮಿತಿ ಮನವಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು