ಚಿಟಗುಪ್ಪ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಭಕ್ತರು ಶ್ರದ್ಧಾ ಭಕ್ತಿಯಿಂದ ಮಹಾಶಿವರಾತ್ರಿ ಆಚರಿಸಿದರು.

ಮಹಾದೇವ ಮಂದಿರ: ಇಲ್ಲಿಯ ಮಹಾದೇವ ದೇಗುಲಕ್ಕೆ ನಸುಕಿನ ಜಾವದಲ್ಲಿಯೇ ಮಹಿಳೆಯರು ನೀರು ತುಂಬಿದ ಕೊಡ ಹೊತ್ತು ವಾದ್ಯ–ಮೇಳಗಳೊಂದಿಗೆ ಆಗಮಿಸಿ ಶಿವಲಿಂಗ ಪೂಜೆಯಲ್ಲಿ ಪಾಲ್ಗೊಂಡರು.

ಭಕ್ತರು ದೇವರ ದರ್ಶನಕ್ಕೆ ಸರದಿ ಸಾಲಿನಲ್ಲಿ ನಿಂತಿದ್ದರು. ದೇವರಿಗೆ ವಿಶೇಷ ಕ್ಷೀರಾಭಿಷೇಕ ಪೂಜೆ ನಡೆಯಿತು. ನಂತರ ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ದೇಗುಲದಿಂದ ಪ್ರಸಾದ ರೂಪದಲ್ಲಿ ಹಾಲು ಹಾಗೂ ಹಣ್ಣು ವಿತರಿಸಲಾಯಿತು.

ನಿರ್ಣಾ: ಗ್ರಾಮದ ಹೊರವಲಯದಲ್ಲಿರುವ ಐತಿಹಾಸಿಕ ಗುತ್ತಿಬಸವಣ್ಣ ದೇಗುಲದಲ್ಲಿ ವಿಶೇಷ ಅಭಿಷೇಕ, ಪೂಜೆ ನಡೆಯಿತು. ನಿರ್ಣಾ, ಬನ್ನಳ್ಳಿ, ನಾಗನಕೇರಾ, ಮಾಡಗುಳ, ಮಂಗಲಗಿ ಹಾಗೂ ಇತರೆಡೆಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.

ಮುತ್ತಂಗಿ: ಗ್ರಾಮದಿಂದ ಮದರಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬದಿ ಇರುವ ಗುರಪಾದೇಶ್ವರ ದೇಗುಲಕ್ಕೆ ಚಿಮ್ಮನಚೋಡ, ಚಿಂಚೋಳಿ, ಬೆನಕಿಪಳ್ಳಿ, ಮದರಗಿ ಹಾಗೂ ಇತರೆಡೆಗಳಿಂದ ಭಕ್ತರು ಆಗಮಿಸಿ ದರ್ಶನ ಪಡೆದರು.

ಚಾಂಗಲೇರಾ: ತಾಲ್ಲೂಕಿನ ಐತಿಹಾಸಿ ಪುಣ್ಯಕ್ಷೇತ್ರ ಚಾಂಗಲೇರಾ ವೀರಭದ್ರೇಶ್ವರ ದೇಗುಲದಲ್ಲಿ ಶುಕ್ರವಾರ ಸಂಜೆಯಿಂದ ತಡ ರಾತ್ರಿವರೆಗೂ ತಂಡೋಪ ತಂಡವಾಗಿ ಭಕ್ತರು ಆಗಮಿಸಿ ರಾತ್ರಿ ದೇಗುಲದಲ್ಲಿ ನಡೆದ ಮಹಾಶಿವರಾತ್ರಿ ಪೂಜೆಯಲ್ಲಿ ಪಾಲ್ಗೊಂಡು ಶನಿವಾರ ನಸುಕಿನಲ್ಲಿ ಸಾಮೂಹಿಕವಾಗಿ ಲಿಂಗ ಪೂಜೆ ಕೈಗೊಂಡರು. ವಿವಿಧ ಶಿವಾಚಾರ್ಯರು ಪೂಜಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.

ಕರಕನಳ್ಳಿ: ತಾಲ್ಲೂಕಿನ ಕರಕನಳ್ಳಿ ಗ್ರಾಮದ ಗುರು ಗಂಗಾಧರ ಬಕ್ಕಪ್ರಭು ದೇಗುಲಕ್ಕೆ ರಾಜ್ಯ ಹಾಗೂ ತೆಲಂಗಾಣದಿಂದ ಭಕ್ತರು ಆಗಮಿಸಿ ದರ್ಶನ ಪಡೆದುಕೊಂಡು ರಾತ್ರಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಬೆಳಕೇರಾ: ಗ್ರಾಮದ ಹೊರವಲಯದ ರೇವಣಸಿದ್ಧ ಬೆಟ್ಟದ ಮೇಲಿನ ರೇವಣಸಿದ್ದೇಶ್ವರ ದೇಗುಲಕ್ಕೆ ಭಕ್ತರು ಕಾಲ್ನಡಿಗೆಯಲ್ಲಿ ಆಗಮಿಸಿ ಬೆಟ್ಟ ಹತ್ತಿ ದೇವರ ದರ್ಶನ ಪಡೆದು ರಾತ್ರಿ ಲಿಂಗ ಪೂಜೆ ಕೈಗೊಂಡು ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ರಾಮಪುರ್: ತಾಲ್ಲೂಕಿನ ರಾಮಪುರ್ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿರುವ ಐತಿಹಾಸಿಕ ರಾಮಲಿಂಗೇಶ್ವರ ದೇಗುಲಕ್ಕೆ ಜಿಲ್ಲೆಯ ಹುಮನಾಬಾದ್, ಬಸವಕಲ್ಯಾಣ, ಭಾಲ್ಕಿ, ಮಹಾರಾಷ್ಟ್ರ ರಾಜ್ಯದ ಉಮರ್ಗಾ, ಉದಗೀರ, ಸೋಲಾಪುರ ಹಾಗೂ ಇತರೆಡೆಗಳಿಂದ ಭಕ್ತರು ನಸುಕಿನ ಜಾವದಲ್ಲಿಯೇ ಆಗಮಿಸಿ ದೇಗುಲದಲ್ಲಿಯ ಪುಷ್ಕರಣಿಯಲ್ಲಿ ಮಿಂದು ಹಸಿ ಬಟ್ಟೆಯಲ್ಲಿ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ತೆಂಗು ಒಡೆದು ಕರ್ಪೂರದಾರತಿ ಮಾಡಿ ನಮಸ್ಕರಿಸಿದರು. ನಂತರ ಪ್ರಸಾದ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.