ಭಾಲ್ಕಿ: ‘ಜೀವನದಲ್ಲಿ ನಾವು ಮಾಡುವ ಸಾಧನೆ ಸದಾ ಕಾಲಕ್ಕೂ ಸಮಾಜ ನೆನೆಯುವಂತಿರಬೇಕು. ಇಲ್ಲದಿದ್ದರೆ ಮಾನವ ಜನ್ಮ ವ್ಯರ್ಥ’ ಎಂದು ಬೀದರ್ನ ಸಿದ್ಧಾರೂಢ ಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಮಳಚಾಪೂರದ ಸಿದ್ಧಾರೂಡ ಮಂದಿರದಲ್ಲಿ ಹಮ್ಮಿಕೊಂಡಿದ್ದ ನಂದಿಲಿಂಗ ಸ್ವಾಮೀಜಿ ಪುಣ್ಯಾರಾಧನೆ ಹಾಗೂ ವಿಶ್ವ ಶಾಂತಿಗಾಗಿ ವೇದಾಂತ ಸಮ್ಮೇಳನದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.

ಮಾನವ ಜನ್ಮದ ಸಾರ್ಥಕತೆಗೆ ಸರ್ವರೂ ಸಮಾಜೋಪಯೋಗಿ ಕಾರ್ಯಗಳನ್ನು ಮಾಡಬೇಕು. ಇಲ್ಲದಿದ್ದರೆ ನಾವೆಲ್ಲರೂ ಪಶುಗಳಿಗೆ ಸಮವಾಗಬೇಕಾಗುತ್ತದೆ ಎಂದರು.

ಜಮಖಂಡಿಯ ಸಿದ್ಧಾರೂಢ ಮಠದ ಪ್ರಭಾನಂದ ಸ್ವಾಮೀಜಿ ಮಾತನಾಡಿ,‘ಸಂತರ ದರ್ಶನ, ಪ್ರವಚನ ಆಲಿಸುವುದು ಬದುಕಿಗೆ ಮಾರ್ಗದರ್ಶನ ದೊರೆಯಲು ಸಹಕಾರಿ ಆಗುತ್ತದೆ’ ಎಂದು ತಿಳಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ,‘ಸಿದ್ಧಾರೂಢರು ಪವಾಡ ಪುರುಷರಾಗಿದ್ದರು. ಜನರಿಗೆ, ಸಮಾಜಕ್ಕೆ ಒಳ್ಳೆಯ ಮಾರ್ಗದರ್ಶನ ಮಾಡುವ ಮೂಲಕ ಭಕ್ತರ ಬಾಳಿಗೆ ಬೆಳಕಾಗಿದ್ದಾರೆ. ನಮ್ಮ ಜಿಲ್ಲೆಯಲ್ಲೇ ಹುಟ್ಟಿ ಹುಬ್ಬಳ್ಳಿ ಕಾರ್ಯಕ್ಷೇತ್ರ ಮಾಡಿಕೊಂಡರು’ ಎಂದರು.

ಬೀದರ್ನ ಶ್ರೀಗಳು ಸಿದ್ಧಾರೂಢರ ತತ್ವ ಪ್ರಸಾರ ಮಾಡುತ್ತಿದ್ದಾರೆ. ಮಳಚಾಪೂರ ಮಠವು ಸಮಾಜದ ಏಳಿಗೆಗೆ ತನ್ನದೇಯಾದ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.

ಮಾತೋಶ್ರೀ ಸಿದ್ದೇಶ್ವರಿ ಮಾತಾ, ಗಣೇಶಾನಂದ ಮಹಾರಾಜ, ಸೋಮೇಶ್ವರಾನಂದ ಸ್ವಾಮೀಜಿ, ಪೂರ್ಣಾನಂದ ಭಾರತಿ ಸ್ವಾಮೀಜಿ, ಶಂಕರಾನಂದ ಸ್ವಾಮೀಜಿ, ಮಾತೋಶ್ರೀ ಅಮೃತಾನಂದಮಯಿ, ಶಾಂತಾನಂದ ಸ್ವಾಮೀಜಿ, ಮಳಚಾಪೂರ ಮಠದ ಸದ್ರೂಪಾನಂದ ಭಾರತಿ ಸ್ವಾಮೀಜಿ ವೇದಿಕೆಯಲ್ಲಿದ್ದರು. ಹಣಮಂತರಾವ್ರ ಚವ್ಹಾಣ, ಕಲ್ಯಾಣರಾವ್ ಪಾಟೀಲ, ಶಾಮರಾವ್ ಪಾಟೀಲ, ವಿದ್ಯಾಸಾಗರ ಪಾಟೀಲ, ಪಂಡರಿನಾಥ ಪಾಟೀಲ, ಅಮರೇಶ್ವರ ಪಾಟೀಲ, ರಾಜಕುಮಾರ ಪಾಟೀಲ ಖಾನಾಪೂರ, ಶಿವರಾಜ ಚಿಟಗುಪ್ಪೆ, ಶಿವಕುಮಾರ ಭಾಲ್ಕೆ, ರಮೇಶ, ಶಂಕ್ರಯ್ಯ ಸ್ವಾಮಿ, ಬಸವರಾಜ ಪಾಟೀಲ, ಉಮೇಶ ಲಕ್ಕಶೆಟ್ಟಿ ಹಾಗೂ ಮಾರುತಿ ಕುಶನೂರೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.