ಶುಕ್ರವಾರ, ಅಕ್ಟೋಬರ್ 7, 2022
28 °C
ಮಂಠಾಳದಲ್ಲಿದೆ 66 ವರ್ಷದ ಹಳೆಯ ಶಾಲೆ, ಕಟ್ಟಡವೂ ಸುಸ್ಥಿತಿಯಲ್ಲಿದೆ

ಆಗ ಬೇಸಿಕ್ ಸ್ಕೂಲ್, ಈಗ ಪಬ್ಲಿಕ್ ಸ್ಕೂಲ್

ಮಾಣಿಕ ಆರ್.ಭುರೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ಮಂಠಾಳದ ಸರ್ಕಾರಿ ಪ್ರಾಥಮಿಕ ಶಾಲೆ ತಾಲ್ಲೂಕಿನ ಹಳೆ ಶಾಲೆಗಳಲ್ಲೊಂದಾಗಿದ್ದು 66 ವರ್ಷ ಪೊರೈಸಿದೆ. ಈ ಅವಧಿಯಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ರೂಪಿಸಿದ ಶ್ರೇಯಸ್ಸು ಈ ಶಾಲೆಗೆ ಸಲ್ಲುತ್ತದೆ.

ಈಗ ಇಲ್ಲಿ ಪದವಿಪೂರ್ವ ಕಾಲೇಜಿನವರೆಗೆ ಶಿಕ್ಷಣ ದೊರಕುತ್ತಿದ್ದರೂ ಪ್ರಥಮವಾಗಿ ಇದು ಸರ್ಕಾರಿ ಬೇಸಿಕ್ ಸ್ಕೂಲ್ ಆಗಿ ಆರಂಭ ಆಗಿತ್ತು. ಅಂದರೆ, ಬೇಸಿಕ್ ಶಿಕ್ಷಣ ನೀಡಲಾಗುತ್ತಿತ್ತು. ಕೆಲ ವರ್ಷಗಳ ಹಿಂದೆ ಇದಕ್ಕೆ ಇಂಥ ಬೇಸಿಕ್ ಶಿಕ್ಷಣ ನೀಡುವ ಅವಕಾಶ ಇನ್ನೊಮ್ಮೆ ದೊರೆತಿದೆ. ಸರ್ಕಾರ ಈಚೆಗೆ ಇದಕ್ಕೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಮಾನ್ಯತೆ ನೀಡಿದ್ದರಿಂದ ಎಲ್.ಕೆ.ಜಿ ಇಂದ ಪಿಯುಸಿವರೆಗಿನ ಶಿಕ್ಷಣ ಇಲ್ಲಿ ದೊರಕುತ್ತಿದೆ.

ಇಲ್ಲಿ 1956 ರಲ್ಲಿ ಶಾಲೆ ಆರಂಭ ಆಗಿತ್ತು. ಕೆಲ ವರ್ಷ ಊರಿನ ಮಠವೊಂದರಲ್ಲಿ ತರಗತಿ ನಡೆಸಲಾಯಿತು. ನಂತರ ಹೊಸ ಕಟ್ಟಡ ಸಿದ್ಧಗೊಂಡಿತು. ಇದಕ್ಕಿಂತ ಮೊದಲು ಈ ಭಾಗದಲ್ಲಿ ಶಾಲೆ ಆರಂಭವಾದ ದಾಖಲೆಗಳು ದೊರಕುವುದಿಲ್ಲ. ಇಲ್ಲಿ ಏಕೈಕ‌‌ ಶಾಲೆ ವಿದ್ಯೆಯ ಬಾಗಿಲು ತೆರೆದಿದ್ದರಿಂದ ಮುಖ್ಯಮಂತ್ರಿಯೇ ಬಂದು ಅದರ ಉದ್ಘಾಟನೆ ನೆರವೇರಿಸಿದರು. 5ನೇ ಫೆಬ್ರುವರಿ 1963 ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಇದನ್ನು ಉದ್ಘಾಟಿಸಿದರು. 

‘ಈ ಶಾಲೆಯಲ್ಲಿ ಬರೀ ಗ್ರಾಮಸ್ಥರು ಅಷ್ಟೇ ಅಲ್ಲ, ಸುತ್ತಲಿನ 40 ಕಿ.ಮೀ ವ್ಯಾಪ್ತಿಯಲ್ಲಿನ ಹಳ್ಳಿಗಳವರು ವಿದ್ಯಾರ್ಜನೆಗೆ ಬರುತ್ತಿದ್ದರು. ಹೀಗಾಗಿ ಇಲ್ಲಿ ಶಿಕ್ಷಣ ಪಡೆದ ಅನೇಕರು ವಿವಿಧ ಕ್ಷೇತ್ರದಲ್ಲಿ ಸೇವೆಗೈದಿದ್ದಾರೆ. ಶಿಕ್ಷಕರಾದವರ ಸಂಖ್ಯೆ ಹೆಚ್ಚಿಗಿದೆ. ಏನಿದ್ದರೂ ಹಿಂದುಳಿದಿದ್ದ ಈ ಭಾಗದಲ್ಲಿ ಶಿಕ್ಷಣದ ಬೀಜ ಬಿತ್ತಿದ ಮೊದಲ ಶ್ರೇಯಸ್ಸು ಈ ಶಾಲೆಗೆ ಸಲ್ಲುತ್ತದೆ’ ಎಂದು ಹಿರಿಯರಾದ ಶಿವಯ್ಯನವರು ಹಾಗೂ ಇಮಾನವೆಲ್ ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು