ಸೋಲಾಪುರ: ಅಕ್ಷಯ ತೃತೀಯ, ಬಸವೇಶ್ವರ ಜಯಂತಿ ಅಂಗವಾಗಿ ವೀರಶೈವ ಪ್ರತಿಷ್ಠಾನದ ಕಚೇರಿಯಲ್ಲಿ ಮಹಾತ್ಮ ಬಸವೇಶ್ವರರ ಮೂರ್ತಿಗೆ ರಾಜ್ಯಸಭಾ ಸದಸ್ಯರಾದ ಜ್ಯೋತಿ ವಾಘಮಾರೆ ಮಹಾಪೂಜೆ ನೆರವೇರಿಸಿದರು.

ರಾಜ್ಯಸಭಾ ಸದಸ್ಯೆ ಜ್ಯೋತಿ ವಾಘಮಾರೆ ಮಾತನಾಡಿ, ಮಹಿಳೆಯರಿಗೆ ಸಮಾನತೆ ನೀಡುವ ಚಿಂತನೆಗಳನ್ನು ಮೊದಲಿಗೆ ಪ್ರಸ್ತಾಪಿಸಿದ ಮಹಾತ್ಮ ಬಸವೇಶ್ವರರು 12ನೇ ಶತಮಾನದಲ್ಲೇ ಆದರ್ಶ ವ್ಯಕ್ತಿಗಳಾಗಿದ್ದರು. ಸಮತೆ, ಬಂಧುತ್ವ ಮತ್ತು ಸಮಾನತೆಯ ಪರಿಪಾಲಕರಾಗಿದ್ದವರು ಬಸವೇಶ್ವರರು ಎಂದು ತಿಳಿಸಿದರು.

ವೀರಶೈವ ಲಿಂಗಾಯತ ಪ್ರತಿಷ್ಠಾನದಿಂದ ದೊರೆತ ಸನ್ಮಾನದ ಕುರಿತು ಕೃತಜ್ಞತೆ ಸಲ್ಲಿಸಿದರು. ವೀರಶೈವ ಲಿಂಗಾಯತ ಕನ್ನಡ ಭವನಕ್ಕಾಗಿ ತಮ್ಮ ಸಂಸದ ನಿಧಿಯಿಂದ ಸಹಾಯ ಹಾಗೂ ಉಪಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ಬಳಿ ಭವನದ ನಿಧಿಗಾಗಿ ಶಿಫಾರಸು ಮಾಡುವುದಾಗಿ ತಿಳಿಸಿದರು.

ಮಾಜಿ ಶಾಸಕರಾದ ಶಿವಶರಣ ಅಣ್ಣಾ ಪಾಟೀಲ, ಉದ್ಯಮಿ ಸುಧೀರ ಅಣ್ಣಾ ಖರಟಮಲ್, ಶಿವಸೇನಾ ಜಿಲ್ಲಾಧ್ಯಕ್ಷ ಅಮರ ಪಾಟೀಲ, ವಿಶ್ವನಾಥ ಚಾಕೋತೆ, ಪ್ರಥಮೇಶ ಕೋಠೆ, ಪ್ರಿಯದರ್ಶನ ಸಾಠೆ, ಸಿದ್ಧಾರಾಮ ಹುಲಸುರೆ, ಸಿಎ ಬಿರಾಜದಾರ, ಮಹಾರಾಷ್ಟ್ರ ರಾಜ್ಯದ ಮಾಜಿ ಪ್ರಧಾನ ಕಾರ್ಯದರ್ಶಿ ಅಮೋಲ್ ಬಾಪು ಶಿಂಧೆ, ಚೇತನ ನರೋಟೆ, ಪ್ರಾ. ಅಜಯ ದಾಸರಿ, ಡಾ.ಪ್ರಕಾಶ ಘಟುಳೆ, ಪ್ರಕಾಶ ವಾಳೆ, ಸಿದ್ಧೇಶ್ವರ ಯಾತ್ರೆಯ ಮಾನಕರಿ ರಾಜಶೇಖರ ಹಿರೇಹಬ್ಬು, ಬಾಬಾಸಾಹೇಬ ದೇಶಮುಖ, ಕೇಂದ್ರ ಜನ್ಮೋತ್ಸವ ಅಧ್ಯಕ್ಷ ಶರಣರಾಜ ಕೆಂಗಣಾಳ್ಕರ್, ಮಹಾತ್ಮ ಬಸವೇಶ್ವರ ಜನ್ಮೋತ್ಸವ ಅಧ್ಯಕ್ಷ ಲಕ್ಷ್ಮಿಕಾಂತ ಬಿರಾಜದಾರ, ಕಾರ್ಯಾಧ್ಯಕ್ಷ ಅನಿಲ ವಜೀರ್ಕರ, ವೀರಶೈವ ಲಿಂಗಾಯತ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ವಿಜಯಪುರೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-26-930452995

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.