ಶನಿವಾರ, ಸೆಪ್ಟೆಂಬರ್ 18, 2021
21 °C

ಮೂಢನಂಬಿಕೆಯಿಂದ ದೂರವಿರಲು ಸಲಹೆ :ದೇವೇಂದ್ರ ಪಾಟೀಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲನಗರ : ಸೂರ್ಯ ಗ್ರಹಣದ ಬಗ್ಗೆ ಇರುವ ಮೂಢ ನಂಬಿಕೆಗಳನ್ನು ತೊರೆದು ಸೂರ್ಯಗ್ರಹಣ ವೀಕ್ಷಿಸಬೇಕು ಎಂದು ನಿವೃತ್ತ ಮುಖ್ಯಶಿಕ್ಷಕ ದೇವೇಂದ್ರ ಪಾಟೀಲ್  ಸಲಹೆ ನೀಡಿದರು.

ತಾಲ್ಲೂಕಿನ ಡಿಗ್ಗಿ ಗ್ರಾಮದ ಮಡಿವಾಳೇಶ್ವರ ಮಂದಿರದಲ್ಲಿ ಮಡಿವಾಳೇಶ್ವರ ಭಜನೆ ಮಂಡಳಿ ಮತ್ತು ಅಕ್ಕಮಹಾದೇವಿ ಭಜನಾ ಮಂಡಳಿ ವತಿಯಿಂದ ಗುರುವಾರ ಸೂರ್ಯಗ್ರಹಣ ಪ್ರಯುಕ್ತ ಹಮ್ಮಿಕೊಂಡ ಭಜನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸೂರ್ಯಗ್ರಹಣ ಖಗೋಳ ವಿಸ್ಮಯವನ್ನು ಆನಂಧಿಸಬೇಕು. ನಾವು ವೈಜ್ಞಾನಿಕ ವಿಧಾನಗಳಿಂದ ವೀಕ್ಷಿಸುವುದರಿಂದ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ. ನಾವು ನೋಡಿರುವ ಸೂರ್ಯಗ್ರಹಣವು 172 ವರ್ಷಗಳಿಗೊಮ್ಮೆ ಕಾಣಸಿಗುವ ವಿದ್ಯಮಾನವಾಗಿತ್ತು ಎಂದರು.

ಮುಖಂಡ ಶಿವಕುಮಾರ ರಾಂಪುರೆ ಮಾತನಾಡಿ, ಭೂಮಿಯಂತೆ ಸೂರ್ಯ, ಚಂದ್ರ ಆಕಾಶ ಕಾಯಗಳಾಗಿವೆ. ಸೂರ್ಯನಿಗೆ ಚಂದ್ರ ಅಡ್ಡಲಾಗಿ ಬಂದಾಗ ಗ್ರಹಣ ಸಂಭವಿಸುತ್ತದೆ. ಗ್ರಹಣದಿಂದ ಬರುವ ನೆರಳು ಮೈಮೇಲೆ ಬಿದ್ದರೆ ಯಾವುದೇ ಪರಿಣಾಮ ಬಿರುವುದಿಲ್ಲ. ಆದರೂ ಗ್ರಹಣದ ಅಂಚಿನಿಂದ ಬರುವ ಕಿರಣಗಳು ಗರ್ಭಿಣಿಯರ ಮೇಲೆ ಬೀಳುವುದರಿಂದ ಭ್ರೂಣದ ಮೇಲೆ ಪರಿಣಾಮವಾಗುತ್ತದೆ ಎಂಬುದು ಶಂಶೋಧನೆಗಳಿಂದ ದೃಢಪಟ್ಟಿದೆ ಎಂದರು.

ಮಡಿವಾಳೇಶ್ವರ ಭಜನಾ ಮಂಡಳಿ ಅಧ್ಯಕ್ಷ ಯುವರಾಜ ರಾಂಪೂರೆ, ಚಂದ್ರಕಾಂತ ತಪಸ್ಯಾಳೆ, ನಾಗಯ್ಯ ಸ್ವಾಮಿ ಚಂದ್ರಕಾಂತ ಹಿರೇಮಠ, ಫಾರಮ್ಮ  ಚಾಂಡೇಶ್ವರೆ, ಮಲ್ಲಮ್ಮ ಬಿರಾದಾರ, ನೀಲಮ್ಮ, ರತ್ನಮ್ಮ ಬಿರಾದಾರ, ಆಶಾ ಸತೀಶ, ಮಲ್ಲಮ್ಮ ಹಿರೇಮಠ, ಶ್ರೀದೇವಿ ಹರಪಳ್ಳೆ, ಸುಗನಾವತಿ, ನಾಗಮ್ಮಾ ಪುಜಾರಿ, ಮಚ್ಚಿಂದ್ರ ಜಾಧವ, ಮಲ್ಲು ಸ್ವಾಮಿ, ಮಹಾದಯ್ಯ ಮಠಪತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು