ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

dnp ಸದೃಢತೆಗೆ ಕ್ರೀಡೆಗಳು ಪೂರಕ

ಪಿಯು ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ತಹಶೀಲ್ದಾರ್ ಕೀರ್ತಿ ಹೇಳಿಕೆ
Last Updated 18 ಆಗಸ್ಟ್ 2022, 5:41 IST
ಅಕ್ಷರ ಗಾತ್ರ

ಭಾಲ್ಕಿ: ‘ಕ್ರೀಡೆಗಳು ವಿದ್ಯಾರ್ಥಿಗಳನ್ನು ದೈಹಿಕ, ಮಾನಸಿಕವಾಗಿ ಸದೃಢರನ್ನಾಗಿಸುತ್ತವೆ. ಅವರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಪೂರಕವಾಗಿವೆ’ ಎಂದು ತಹಶೀಲ್ದಾರ್ ಕೀರ್ತಿ ಚಾಲಕ್ ಹೇಳಿದರು.

ಇಲ್ಲಿನ ಭೀಮಣ್ಣ ಖಂಡ್ರೆ ತಾಂತ್ರಿಕ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಡೈಮಂಡ್ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ನಡೆದ 2022-23ನೇ ಸಾಲಿನ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ತಾಲ್ಲೂಕು ಮಟ್ಟದ ಕ್ರೀಡಾಜ್ಯೋತಿ ಸ್ವೀಕರಿಸಿ ಮಾತನಾಡಿದರು.

ಕ್ರೀಡೆಗಳು ಮನೋಲ್ಲಾಸ, ದೈಹಿಕ ಚಟುವಟಿಕೆ, ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ. ಅವುಗಳಲ್ಲಿ ದುಃಖ ನಿವಾರಿಸುವ ಶಕ್ತಿ ಅಡಗಿದೆ ಎಂದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರಕಾಂತ ಶಾಹಾಬಾದಕರ್ ಮಾತನಾಡಿ,‘ಯುವಕರು ದುಶ್ಚಟಗಳಿಗೆ ಬಲಿಯಾಗದೆ ಆಟ-ಪಾಠಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಹೇಳಿದರು.

ಎಸ್.ಎಸ್.ಎಜ್ಯುಕೇಷನ್ ಸೊಸೈಟಿ ಅಧ್ಯಕ್ಷ ಶೇಖ್ ಮಸ್ತಾನವಲಿ ಮಾತನಾಡಿದರು.

ಪುರಸಭೆ ಅಧ್ಯಕ್ಷ ಅನಿಲ್ ಕುಮಾರ್ ಸುಂಟೆ ಪಾರಿವಾಳ ಹಾರಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಡೈಮಂಡ್ ಕಾಲೇಜಿನ ಶೇಖ್ ಗೌಸಿಯಾ ಮಸ್ತಾನವಲಿ, ಪ್ರಾಂಶುಪಾಲರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಡಾ. ಮನ್ಮತ ಡೋಳೆ, ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಓಂಕಾರ ಸೂರ್ಯವಂಶಿ, ದೈಹಿಕ ಶಿಕ್ಷಣಾಧಿಕಾರಿ ರೋಹಿದಾಸ ರಾಠೋಡ, ಪ್ರಾಚಾರ್ಯರಾದ ಸತ್ಯವಾನ ವೈರಾಗೆ, ಅಶೋಕ ರಾಜೋಳೆ, ಅಂಕುಶ ಡೋಲೆ, ಚಂದ್ರಕಾಂತ ಬಿರಾದಾರ, ಜೈಕಾಂತ ಗಂಗೋಜಿ, ಅಮರ ಹಲ್ಮಂಡಗೆ, ಮೋಹನರೆಡ್ಡಿ, ಸುಖದೇವ್ ಬಿರಾದಾರ, ಡೈಮಂಡ್ ಪ.ಪೂ ಕಾಲೇಜಿನ ಮುಖ್ಯ ಆಡಳಿತಾಧಿಕಾರಿ ಅಶ್ವೀನ್ ಭೋಸ್ಲೆ, ಜ್ಞಾನೇಶ್ವರ ಬಿರಾದಾರ, ಗಿರೀಶ ಭಂಡಾರಿ, ಮಂಜುನಾಥ ಜೋಳದಾಪ್ಕೆ, ರವೀಂದ್ರ ರಾಠೋಡ, ಧನರಾಜ ನಿಲಂಗೆ ಉಪಸ್ಥಿತರಿದ್ದರು. ಎಸ್.ಎಸ್.ಎಜ್ಯುಕೇಷನ್ ಸೊಸೈಟಿ ಪ್ರಧಾನ ಕಾರ್ಯದರ್ಶಿ ವೈ.ಮಾಧವರಾವ್ ಸ್ವಾಗತಿಸಿದರು. ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಹಣಮಂತ ಕಾರಾಮುಂಗೆ ಕ್ರೀಡಾ ವಿಧಿ ಬೋಧಿಸಿದರು. ಪ್ರೊ.ಕರ್ಣಂ ನಿರೂಪಿಸಿದರು. ಪ್ರೊ.ನಾಮದೇವರಾವ್ ಮೋರೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT