ಬೀದರ್: ನಗರದ ಮೈಲೂರಿನ ವಿದ್ಯಾಶ್ರೀ ಆಂಗ್ಲ ಪ್ರೌಢಶಾಲೆಯ ವಿದ್ಯಾರ್ಥಿನಿ ಅಕ್ಷಾ ಜೈನಬ್ ಅವರ ಎಸ್ಎಸ್ಎಲ್ಸಿ ಅಂಕಪಟ್ಟಿಯಲ್ಲಾದ ತಪ್ಪು ಸರಿಪಡಿಸಿ, ಹೊಸ ಅಂಕಪಟ್ಟಿ ನೀಡಲು ಎಸ್ಎಸ್ಎಲ್ಸಿ ಪರೀಕ್ಷಾ ಮಂಡಳಿ ಮುಂದಾಗಿದೆ.

‘ಗಳಿಸಿದ್ದು 85, ಕೊಟ್ಟಿದ್ದು 17 ಅಂಕ!’ ಶೀರ್ಷಿಕೆಯಡಿ ‘ಪ್ರಜಾವಾಣಿ’ ಮಂಗಳವಾರ ವರದಿ ಪ್ರಕಟಿಸಿತ್ತು. ವರದಿಗೆ ಎಚ್ಚೆತ್ತ ಎಸ್ಎಸ್ಎಲ್ಸಿ ಪರೀಕ್ಷಾ ಮಂಡಳಿಯ ಅಧಿಕಾರಿಗಳು ಅಂಕಪಟ್ಟಿಯಲ್ಲಾದ ಪ್ರಮಾದ ಸರಿಪಡಿಸಿ, ವಿದ್ಯಾರ್ಥಿನಿಗೆ ನ್ಯಾಯ ಒದಗಿಸಿಕೊಡಲಾಗುವುದು ಎಂದು ಮಂಡಳಿಯ ಅಧಿಕಾರಿಯೊಬ್ಬರು ಬೆಂಗಳೂರಿನಿಂದ ‘ಪ್ರಜಾವಾಣಿ’ಗೆ ಕರೆ ಮಾಡಿ ತಿಳಿಸಿದ್ದಾರೆ.

‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡ ವರದಿ ಬೆನ್ನಲ್ಲೇ ಎಸ್ಎಸ್ಎಲ್ಸಿ ಪರೀಕ್ಷಾ ಮಂಡಳಿಯಿಂದ ಅಧಿಕಾರಿಯೊಬ್ಬರು ಮಂಗಳವಾರ ನನಗೆ ಕರೆ ಮಾಡಿ, ನನ್ನ ಮಗಳು ಅಕ್ಷಾ ಜೈನಬ್ಳ ಹಾಲ್ ಟಿಕೆಟ್, ರಜಿಸ್ಟರ್ ನಂಬರ್ ಪಡೆದಿದ್ದಾರೆ. ಅಂಕಪಟ್ಟಿಯಲ್ಲಾಗಿರುವ ತಪ್ಪು ಸರಿಪಡಿಸಿ, ಶೀಘ್ರ ಹೊಸ ಅಂಕಪಟ್ಟಿ ಕಳಿಸಿಕೊಡುವ ಆಶ್ವಾಸನೆ ನೀಡಿದ್ದಾರೆ’ ಎಂದು ಅಕ್ಷಾ ತಂದೆ ಮೊಹಮ್ಮದ್ ಖಾಜಾ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಅಕ್ಷಾ ಜೈನಬ್ ಅವರು ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಇಂಗ್ಲಿಷ್ ವಿಷಯದಲ್ಲಿ 85 ಅಂಕಗಳನ್ನು ಗಳಿಸಿದ್ದಾರೆ. ಆದರೆ, ಫಲಿತಾಂಶದಲ್ಲಿ 17 ಅಂಕಗಳನ್ನು ನೀಡಲಾಗಿದೆ. ಉತ್ತರ ಪತ್ರಿಕೆಯ ನಕಲು ಪ್ರತಿಗಳನ್ನು ತರಿಸಿಕೊಂಡು ಪರಿಶೀಲಿಸಿದಾಗ ಪರೀಕ್ಷಾ ಮಂಡಳಿಯ ಮೌಲ್ಯಮಾಪನದಲ್ಲಿ ತಪ್ಪಾಗಿರುವುದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.