ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್| ₹7 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ: ಪ್ರಭು ಚವಾಣ್

ಕಾಲಮಿತಿಯಲ್ಲಿ ಕಾಮಗಾರಿ ಮುಗಿಸಿ: ಚವಾಣ್ ಸೂಚನೆ
Last Updated 29 ಮಾರ್ಚ್ 2023, 5:34 IST
ಅಕ್ಷರ ಗಾತ್ರ

ಔರಾದ್: ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ತಾಲ್ಲೂಕಿನ ವಿವಿಧೆಡೆ ಮಂಗಳವಾರ ₹7 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಕೊಳ್ಳೂರಿನಲ್ಲಿ ₹132.16 ಲಕ್ಷ, ಗುಡಪಳ್ಳಿ ತಾಂಡಾದಲ್ಲಿ ₹24 ಲಕ್ಷ, ಖೀರಾ ತಾಂಡಾದಲ್ಲಿ ₹24 ಲಕ್ಷ, ವಾಡೆನಬಾಗ್ ತಾಂಡಾದಲ್ಲಿ ₹25 ಲಕ್ಷ, ಆಲೂರನಲ್ಲಿ ₹44.93 ಲಕ್ಷ, ಮಾಣಿಕ ತಾಂಡಾದಲ್ಲಿ ₹43.44 ಲಕ್ಷ, ಮಹಾರಾಜ ತಾಂಡಾದಲ್ಲಿ ₹26.98 ಲಕ್ಷ, ಮಹಾರಾಜವಾಡಿ ತಾಂಡಾದಲ್ಲಿ ₹34.98 ಲಕ್ಷ, ಖೇಮಾ ತಾಂಡಾದಲ್ಲಿ ₹20.14 ಲಕ್ಷ, ಗಂಗಾರಾಮ ತಾಂಡಾದಲ್ಲಿ ₹43 ಲಕ್ಷ, ಕಾಶೆಂಪುರ (ಬಿ) ದಲ್ಲಿ ₹36 ಲಕ್ಷ, ಹೆಡಗಾಪುರ ತಾಂಡಾದಲ್ಲಿ ₹35 ಲಕ್ಷ, ಕಿಶನ್ ನಾಯಕ್ ತಾಂಡಾದಲ್ಲಿ ₹24.5 ಲಕ್ಷ, ಭೋಜಾ ತಾಂಡಾದಲ್ಲಿ ₹23.09 ಲಕ್ಷ ವೆಚ್ಚದಲ್ಲಿ ಕೈಗೊಂಡಿರುವ ಜಲ ಜೀವನ ಮಿಷನ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ವಡಗಾಂವದಲ್ಲಿ ₹15 ಲಕ್ಷ, ಸೋರಳ್ಳಿಯಲ್ಲಿ ₹15 ಲಕ್ಷ ಹಾಗೂ ರಕ್ಷ್ಯಾಳ (ಕೆ)ನಲ್ಲಿ ₹15 ಲಕ್ಷ ಮೊತ್ತದ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದರು.

ಈ ಎಲ್ಲ ಕಾಮಗಾರಿಗಳು ನಿಗದಿತ ಅವಧಿಯೊಳಗಾಗಿ ಪೂರ್ಣಗೊಳ್ಳಬೇಕು. ಕ್ಷೇತ್ರದಲ್ಲಿರುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ಉದ್ದೇಶದಿಂದ ಸಾಕಷ್ಟು ಮುತುವರ್ಜಿ ವಹಿಸಿ ಅನುದಾನ ತಂದಿದ್ದೇನೆ. ಅತ್ಯಂತ ಮಹತ್ವದ್ದಾಗಿರುವ ಈ ಯೋಜನೆ ಗುಣಮಟ್ಟದಿಂದ ಆಗಬೇಕು. ಸ್ಥಳೀಯ ಅಧಿಕಾರಿಗಳು ಮೇಲಿಂದ ಮೇಲೆ ಪರಿಶೀಲಿಸಬೇಕು ಎಂದು ಸೂಚಿಸಿದರು.

ಎಕಂಬಾ ಗ್ರಾಮಕ್ಕೆ ಭೇಟಿ ನೀಡಿದ ಸಚಿವರು ಅನಾರೋಗ್ಯಕ್ಕೆ ಒಳಗಾದ ಅರುಣ ಬಾಬುರಾವ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ವೈಯಕ್ತಿಕ ಸಹಾಯ ಮಾಡಿದರು.

ಮುಖಂಡ ಸುರೇಶ ಭೋಸ್ಲೆ, ರಾಮಶೆಟ್ಟಿ ಪನ್ನಾಳೆ, ಗಿರೀಶ್ ಒಡೆಯರ್, ಶಿವರಾಜ ಅಲ್ಮಾಜೆ, ಶ್ರೀನಿವಾಸ ಖೂಬಾ, ಪ್ರದೀಪ ಪವಾರ್, ಸುಜೀತ್ ರಾಠೋಡ್, ನಾಗಶೆಟ್ಟಿ ಗಾದಗೆ, ಮಾದಪ್ಪ ಮಿಠಾರೆ, ಬಾಲಾಜಿ ಠಾಕೂರ್, ಶರಣಪ್ಪ ಪಂಚಾಕ್ಷರಿ, ಬಾಪುರಾವ ರಾಠೋಡ್, ಖಂಡೋಬಾ ಕಂಗಟೆ ಹಾಗೂ ಪ್ರಕಾಶ ಮೇತ್ರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT