ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಟಗುಪ್ಪ: ಮೊಬೈಲ್ ಕೊಡಿಸಿಲ್ಲವೆಂದು ವಿದ್ಯಾರ್ಥಿನಿ ಆತ್ಮಹತ್ಯೆ

Last Updated 26 ಆಗಸ್ಟ್ 2020, 5:05 IST
ಅಕ್ಷರ ಗಾತ್ರ

ಚಿಟಗುಪ್ಪ: ತಾಲ್ಲೂಕಿನ ಉಡಬಾಳ ಗ್ರಾಮದ ವಿದ್ಯಾರ್ಥಿನಿಸೋಮವಾರ ಸಂಜೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಗ್ರಾಮದ ನಿವಾಸಿ ನಾಮದೇವ್ ಪಾಲವೆ ಅವರ ಮಗಳು ಸುಜಾತಾ(16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಒಂಬತ್ತನೇ ತರಗತಿ ತೇರ್ಗಡೆಯಾಗಿ ಈ ವರ್ಷ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಗೆ ದಾಖಲಾಗಿದ್ದಳು.

‘ಆನ್‌ಲೈನ್ ಪಾಠ ಕೇಳಲು ಮೊಬೈಲ್ ಕೊಡಿಸಲಿಲ್ಲ ಎಂಬ ಬೇಸರವಿತ್ತು. ಸ್ನೇಹಿತೆಯರ ಹತ್ತಿರ ಮೊಬೈಲ್ ಇರುವುದನ್ನು ಕಂಡು ತನ್ನಲ್ಲಿ ಇಲ್ಲವೆಂದು ಮನೆಯ ಅಡುಗೆ ಕೋಣೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾಳೆ’ ಎಂದು ಆಕೆಯ ಸಹೋದರ ಸದಾಶಿವ ಪೊಲೀಸರಿಗೆ ದೂರು‌ ನೀಡಿದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT