ಶುಕ್ರವಾರ, ಜುಲೈ 1, 2022
24 °C

ಬಸವಕಲ್ಯಾಣ: ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ: ತಾಲ್ಲೂಕಿನ ಲಾಡವಂತಿ ಗ್ರಾಮದಲ್ಲಿ ಶುಕ್ರವಾರ ಪಿಯುಸಿ ವಿದ್ಯಾರ್ಥಿ ಅಮೀತ್ ಅಂಬಾರಾವ್ (17) ಈಜು ಬಾರದೆ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಖಾಸಗಿ ಬಾವಿಯೊಂದಕ್ಕೆ ಗೆಳೆಯ ರೊಂದಿಗೆ ಈಜಲು ಹೋಗಿದ್ದ ಅಮೀತ್‌, ಬೆನ್ನಿಗೆ ಪ್ಲಾಸ್ಟಿಕ್ ಡಬ್ಬ ಕಟ್ಟಿಕೊಂಡು ಬಾವಿಗೆ ಜಿಗಿದಿದ್ದ. ಡಬ್ಬ ಜಾರಿದ್ದರಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಮಂಠಾಳ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ಠಾಣೆಯವರು ತಡರಾತ್ರಿಯವರೆಗೆ ಬಾವಿಯಲ್ಲಿ ಮೃತದೇಹ ಹುಡುಕಿದ್ದಾರೆ. ಪಂಪ್‌ಸೆಟ್ ಮೂಲಕ ಬಾವಿ ನೀರನ್ನು ಹೊರತೆಗೆದಾಗ ಮೃತದೇಹ ಕಾಣಿಸಿಕೊಂಡಿದೆ. ಶಾಸಕ ಶರಣು ಸಲಗರ ಹಾಗೂ ತಹಶೀಲ್ದಾರ್ ಸಾವಿತ್ರಿ ಸಲಗರ ಅವರು ಮೃತದೇಹ ಪತ್ತೆ ಆಗುವವರೆಗೆ ಸ್ಥಳದಲ್ಲಿಯೇ ಇದ್ದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು