ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಕಾನಂದರ ಆದರ್ಶ ಪಾಲಿಸಿ

Last Updated 12 ಜನವರಿ 2022, 14:04 IST
ಅಕ್ಷರ ಗಾತ್ರ

ಭಾಲ್ಕಿ: ವಿದ್ಯಾರ್ಥಿಗಳುವಿವೇಕಾನಂದರ ಆದರ್ಶ, ತತ್ತ್ವಗಳನ್ನು ಪಾಲಿಸಿ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಸಂಪನ್ಮೂಲ ವ್ಯಕ್ತಿ ಶಿವಕುಮಾರ ಹಾಸನ ತಿಳಿಸಿದರು.

ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲ ವಸತಿ ಪ್ರೌಢಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾವೆಲ್ಲರೂ ವಿವೇಕಾನಂದರ ತತ್ತ್ವ, ಸಿದ್ಧಾಂತಗಳನ್ನು ಪಾಲಿಸಿಕೊಂಡು ಜ್ಞಾನಿಗಳಾಗಬೇಕು ಎಂದು ಯುವ ವಿದ್ಯಾರ್ಥಿಗಳಿಗೆ ಅವರು ಕರೆ ನೀಡಿದರು.

ಆಡಳಿತಾಧಿಕಾರಿ ಮೋಹನರೆಡ್ಡಿ ಮಾತನಾಡಿ, ನಾವು ಭಾರತದ ಬಗ್ಗೆ ತಿಳಿಯಬೇಕಾದರೆ ಮೊದಲಿಗೆ ವಿವೇಕಾನಂದರ ಜೀವನ ಚರಿತ್ರೆಯ ಅಧ್ಯಯನ ಮಾಡಬೇಕು. ಏಕೆಂದರೆ ಸಾಮಾನ್ಯರೂ ಕೂಡಾ ವಿವೇಕಾನಂದರ ಪುಸ್ತಕಗಳನ್ನು ಓದಿ ಐಎಎಸ್‌, ಐಪಿಎಸ್‌ ಸೇರಿದಂತೆ ಅತ್ಯುನ್ನತ ಹುದ್ದೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂದು ಹೇಳಿದರು.

ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಛಲ ಇರಬೇಕು, ಭಯ ಇರಬಾರದು. ಸಿಂಹದಂತೆ ಧೈರ್ಯ ಇರಬೇಕು. ಅಂದಾಗ ಮಾತ್ರ ನೀವೂ ಸ್ವಾಮಿ ವಿವೇಕಾನಂದರಂತೆ ಆಗುತ್ತೀರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಮುಖ್ಯಶಿಕ್ಷಕ ನಾಗರಾಜ ಮಠಪತಿ, ಸಂಯೋಜಕ ಮಹೇಶ ಮಹಾರಾಜ್‌, ಶಿಕ್ಷಕರಾದ ರಾಜೇಂದ್ರ ಪಾಟೀಲ, ಸಂತೋಷ ಪತಂಗೆ, ನಂದಕುಮಾರ ಬಿರಾದರ, ರಾಜಕುಮಾರ ಮೋರ್ಗೆ, ಸಂತೋಷ ಜೋಜನೆ, ಪ್ರವೀಣ ಖಂಡಾಳೆ, ಪಂಡರಿನಾಥ ಪವಾರ್‌, ಸಂತೋಷ ಬಿರಾದರ, ಲಕ್ಷ್ಮಣ ಮೇತ್ರೆ, ಬಸವರಾಜ ಪ್ರಭಾ, ಬಾಲಿಕಾ ಬಿರಾದರ, ಕಾವೇರಿ ಜ್ಯಾಂತೆ, ಸುನಿತಾ, ಪ್ರಮುಖರಾದ ವೈಷ್ಣವಿ ವಿನಾಯಕ ಬಗದೂರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT